Mahabali Frog: ವರ್ಷದಲ್ಲಿ ಒಮ್ಮೆ ಮಾತ್ರ ಆಚೆ ಬರುವ ಈ ಕಪ್ಪೆಯ ವಿಶೇಷತೆ ಏನು…? ನಿಜಕ್ಕೂ ಆಶ್ಚರ್ಯ.

ವರ್ಷದಲ್ಲಿ ಒಂದು ಬಾರಿ ಮಾತ್ರ ಕಣ್ಣಿಗೆ ಕಾಣಿಸುವ ಈ ಕಪ್ಪೆಯ ಬಗ್ಗೆ ಒಂದಿಷ್ಟು ಮಾಹಿತಿ.

Mahabali Frog In Kerala: ಪ್ರಪಂಚದಲ್ಲಿ ಸಾಕಷ್ಟು ವಿಸ್ಮಯಕಾರಿ ಘಟನೆಗಳು ನಡೆಯುತ್ತದೆ. ಕೆಲವು ಘಟನೆಗಳ ಬಗ್ಗೆ ಮನುಷ್ಯರಿಗೂ ಮಾಹಿತಿ ತಿಳಿದಿರುವುದಿಲ್ಲ. ಇನ್ನು ಪ್ರಕೃತಿಯಲ್ಲಿ ಕೂಡ ಸಾಕಷ್ಟು ಅಚ್ಚರಿ ಮೂಡಿಸುವ ಘಟನೆಗಳು ಸಂಭವಿಸುತ್ತದೆ. ಇನ್ನು ಪ್ರಪಂಚದಲ್ಲಿ ವಿಭಿನ್ನ ರೀತಿಯ ಪ್ರಾಣಿಗಳಿರುತ್ತವೆ. ಕೆಲವು ಪ್ರಾಣಿಗಳು ಮನುಷ್ಯರಿಗೆ ಘೋಚರಿಸುವುದಿಲ್ಲ. ವಿಭಿನ್ನ ಆಕಾರವನ್ನು ಹೊಂದಿರುವ ಪ್ರಾಣಿಗಳು ಪ್ರಪಂಚದಲ್ಲಿ ಸಾಕಷ್ಟಿವೆ.

ಇನ್ನು ಮಳೆಗಾಲದ ಸಮಯದಲ್ಲಿ ಕಪ್ಪೆಗಳು ಹೆಚ್ಚಾಗಿ ಕಾಣಸಿಗುತ್ತದೆ. ಮಳೆಗಾಲದ ಸಮಯದಲ್ಲಿ ಕಪ್ಪೆಗಳು ಕೂಗುತ್ತ ಇರುತ್ತವೆ. ಸಾಮಾನ್ಯವಾಗಿ ಕಪ್ಪೆಗಳನ್ನು ಎಲ್ಲರು ನೋಡಿರುತ್ತಾರೆ. ಕಪ್ಪೆಗಳು ಯಾವ ಆಕಾರದಲ್ಲಿರುತ್ತದೆ, ಯಾವ ಬಣ್ಣದಲ್ಲಿರುತ್ತದೆ ಎನ್ನುವ ಬಗ್ಗೆ ಕೆಲವರಿಗೆ ಮಾಹಿತಿ ತಿಳಿದಿರುತ್ತದೆ. ಇದೀಗ ಯಾರು ಕಂಡಿರದ ಕಪ್ಪೆಯ ಬಗ್ಗೆ ಮಾಹಿತಿ ಲಭಿಸಿದೆ. 

Mahaabali Frog In Kerala
Image Credit: Democraticaccent

ವರ್ಷದಲ್ಲಿ ಒಮ್ಮೆ ಮಾತ್ರ ಹೊರಗೆ ಬರುತ್ತದೆ ಈ ಕಪ್ಪೆ
ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್ ಪಟ್ಟಣದ ಬಳಿ ಇರುವ ಅಣಕುಲಂ, ಮಂಕುಲಂನಲ್ಲಿ ಅಚ್ಚರಿಯ ಮೂಡಿಸುವ ಕಪ್ಪೆ ಕಾಣಿಸಿಕೊಂಡಿದೆ. ಈ ಕಪ್ಪೆಯನ್ನು ಮಹಾಬಲಿ (Mahabali Frog) ಕಪ್ಪೆ ಎನ್ನುತ್ತಾರೆ.

ಈ ಕಪ್ಪೆಯ ವಿಶೇಷವೆಂದರೆ ಇದು ವರ್ಷಕ್ಕೆ ಒಮ್ಮೆ ಮಾತ್ರ ಭೂಮಿಯಿಂದ ಹೊರಗೆ ಬರುತ್ತದೆ. ಈ ಮಹಾಬಲಿ ಕಪ್ಪೆ ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್ ಪಟ್ಟಣದ ಬಳಿ ಇರುವ ಅಣಕುಲಂ, ಮಂಕುಲಂನಲ್ಲಿ ಕಾಣಸಿಕ್ಕಿದೆ. ಅಳಿವಿನಂಚಿನಲ್ಲಿರುವ ಈ ಕಪ್ಪೆಗಳು ಪಶ್ಚಿಮ ಘಟ್ಟಗಳ ಬೆಚ್ಚಗಿನ ಪ್ರದೇಶಗಳಲ್ಲಿ ವಾಸಿಸುತ್ತವೆ.

Mahaabali Frog In Kerala
Image Credit: Reversethered

ಮಹಾಬಲಿ ಕಪ್ಪೆ
ಈ ಮಹಾಬಲಿ ಕಪ್ಪೆಯ ವೈಜ್ಞಾನಿಕ ಹೆಸರು ನಾಸಿಕಬಾತ್ರಾಚಸ್ ಸಹ್ಯಡ್ರೆನ್ಸಿಸ್ (Nasikabatrachus sahyadrensis) . ವರ್ಷದಲ್ಲಿ 364 ದಿನಗಳು ಈ ಮಹಾಬಲಿ ಕಪ್ಪೆ ಭೂಮಿಯಲ್ಲಿ ಅಡಗಿದ್ದು ಕೇವಲ ಒಂದು ದಿನ ಹೊರಗೆ ಬರುತ್ತದೆ. ಈ ಕಪ್ಪೆ ಹೊರಗಡೆ ಬಂದರೆ ಕೇರಳದವರಿಗೆ ಇದು ಶುಭ ಸೂಚನೆಯಾಗುತ್ತದೆ.

Join Nadunudi News WhatsApp Group

ಇನ್ನು ಓಣಂ ಆಗಸ್ಟ್ 20 ರಿಂದ 30 ರವೆಗೆ ನಡೆಯಲಿದ್ದು ಈ ಮಧ್ಯೆ ಮಹಾಬಲಿ ಕಪ್ಪೆ ಹೊರಗಡೆ ಬಂದಿರುವುದು ಕೇರಳದವರಿಗೆ ಖುಷಿ ನೀಡಿದೆ. ಈ ಮಹಾಬಲಿ ಕಪ್ಪೆಗಳು ಚಿಕ್ಕ ಕಾಲನ್ನು ಹೊಂದಿದ್ದು ಕಡು ಬಣ್ಣವನ್ನು ಹೊಂದಿದೆ.

Join Nadunudi News WhatsApp Group