Ravindar Arrest: ಬೆಳ್ಳಂಬೆಳಿಗ್ಗೆ ರವೀಂದರ್ ಅರೆಸ್ಟ್, ಮದುವೆಯ ದಿನದ ಸಂತಸದಲ್ಲಿ ಇದ್ದ ದಂಪತಿಗೆ ಪೊಲೀಸರಿಂದ ಆಘಾತ.

ಬೆಳ್ಳಂಬಳಿಗ್ಗೆ ರವೀಂದರ್ ಚಂದ್ರಶೇಖರನ್ ಅವರನ್ನ ಅರೆಸ್ಟ್ ಮಾಡಿದ ಪೊಲೀಸರು.

Mahalakshmi Husband Ravindar Chandrasekaran Arrest: Social Media ದಲ್ಲಿ ಆಗಾಗ ವೈರಲ್ ಆಗುವ ಮಹಾಲಕ್ಷ್ಮಿ (Mahalakshmi) ಹಾಗೂ ತಮಿಳಿನ ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರ್ (Ravindar Chandrasekaran) ಇದೀಗ ಹೊಸ ವಿಚಾರವಾಗಿ ಸುದ್ದಿಯಾಗಿದ್ದಾರೆ. ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದರ್ ಚಂದ್ರಶೇಖರ್ ಅವರು Social ಮೀಡಿಯಾ ದಲ್ಲಿ Miss Match ಜೋಡಿಯೆಂದೇ ಹೆಚ್ಚು ಖ್ಯಾತಿ ಪಡೆದಿದ್ದಾರೆ.

ಇನ್ನು ಈ ಜೋಡಿ ಪ್ರೀತಿ ಮದುವೆಯಾಗಿದ್ದು ಮೊನ್ನೆಯಷ್ಟೇ ತಮ್ಮ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಇನ್ನು ಈ ಜೋಡಿ ಮದುವೆಯಾದಾಗಿನಿಂದ ಹೆಚ್ಚಾಗಿ ಟ್ರೊಲ್ ಆಗುತ್ತಿದ್ದರು. ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದರ್ ಚಂದ್ರಶೇಖರ್ ನೆಟ್ಟಿಗರ ಟ್ರೊಲ್ ಗೆ ತಲೆಕೆಡಿಸಿಕೊಳ್ಳದೆ ನಾವು Perfect Pair ಎಂದು ತೋರಿಸಲು ಆಗ ಸೋಶಿಯಲ್ ಮೀಡಿಯಾದಲ್ಲಿ ಇಬ್ಬರ ಅನ್ಯೋನ್ಯತೆಯ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.

Mahalakshmi Husband Ravindar Chandrasekaran Arrest
Image Credit: Filmibeat

ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದ ಜೋಡಿಗೆ ಎದುರಾಗಿದೆ ಸಂಕಷ್ಟ
ಇನ್ನು ಕಳೆದ ಎರಡು ತಿಂಗಳ ಹಿಂದೆ ಮಹಾಲಕ್ಷ್ಮಿ ಹಾಗೂ ರವೀಂದರ್ ಚಂದ್ರಶೇಖರ್ Divorce ಪಡೆಯಲಿದ್ದಾರೆ ಎನ್ನುವ ಬಗ್ಗೆ ಕೂಡ ಸುದ್ದಿಗಳು ಹರಿದಾಡಿದ್ದವರು. ಆದರೆ ಈ ಜೋಡಿ ಎಲ್ಲ ಸುದ್ದಿಗಳು ಸ್ಪಷ್ಟನೆ ನೀಡಿತ್ತು. ವಿಚ್ಛೇದನ ವಿಚಾರವಾಗಿ ಆಗಾಗ ಇಬ್ಬರು ಸುದ್ದಿಯಾಗುತ್ತಿದ್ದರು.

ಇನ್ನು ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡು ತಾವಿಬ್ಬರು ಅನ್ಯೋನ್ಯವಾಗಿದ್ದೇವೆ ಎಂದು ಈ ಜೋಡಿ ನಿರೂಪಿಸಿದ್ದರು. ಆದರೆ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದ ಜೋಡಿ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ರವೀಂದರ್ ಚಂದ್ರಶೇಖರ್ ಅವರು ವಂಚನೆಯ ಆರೋಪದ ಮೇರೆಗೆ ಜೈಲು ಪಾಲಾಗಿದ್ದಾರೆ. ಅಷ್ಟಕ್ಕೂ ರವೀಂದರ್ ಚಂದ್ರಶೇಖರ್ ಅವರು ಯಾವ ಕಾರಣಕ್ಕೆ ಜೈಲು ಸೇರಿದ್ದಾರೆ ಎನ್ನುವ ಬಗ್ಗೆ ಎಲ್ಲರು ಕುತೂಹಲರಾಗಿದ್ದಾರೆ.

Mahalakshmi and Ravindar Chandrasekaran
Image Credit: 24x7tamil

ಮಹಾಲಕ್ಷ್ಮಿ ಪತಿ ವಿರುದ್ಧ ವಂಚನೆಯ ಆರೋಪ
ಇನ್ನು ಲಿಬ್ರಾ ಪ್ರೊಡಕ್ಷನ್ ಪ್ರೈವೇಟ್ ಲಿಮಿಟೆಡ್ ನ ಅಡಿಯಲ್ಲಿ ನಿರ್ಮಾಪಕರ ರವೀಂದರ್ ಅವರು ಘನತ್ಯಾಜ್ಯವನ್ನು ಇಂಧನವನ್ನಾಗಿ ಪರಿವರ್ತಿಸುವ ಯೋಜನೆ ಆರಂಭಿಸುವುದಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅದನ್ನೇ ನಿಜವೆಂದು ನಂಬಿಸಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಘನ ತ್ಯಾಜ್ಯಗಳಿಂದ ವಿದ್ಯುತ್ ಉತ್ಪಾದಿಸುವ ಯೋಜನೆಗೆ ಹಣ ಹೂಡಿದರೆ ದುಪ್ಪಟ್ಟು ಲಾಭ ಸಿಗುತ್ತದೆ ಎಂದು ಹೇಳಿ ವಂಚಿಸಿದ್ದಾರೆ.

Join Nadunudi News WhatsApp Group

ಜೈಲು ಪಾಲಾಗಿದ್ದಾರೆ ಮಹಾಲಕ್ಷ್ಮಿ ಪತಿ
ಚೆನ್ನೈನ ಬಾಲಾಜಿ ಗಾಬಾ ತಮ್ಮಾ ಮಾಧ್ಯಮ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನ ಬಾಲಾಜಿ ಎಂಬುವವರಿಂದ 16 ಕೋಟಿ ಹಣವನ್ನು ರವೀಂದರ್ ಹೂಡಿಕೆಯ ಹೆಸರಿನಲ್ಲಿ ವಂಚಿಸಿದ್ದಾರೆ. ರವೀಂದರ್, ಯೋಜನೆಯಲ್ಲಿ ಹೂಡಿಕೆ ಮಾಡುವಂತೆ ಹೇಳಿ ನಕಲಿ ದಾಖಲೆಗಳನ್ನು ಬಳಸಿ ವಂಚನೆಯಲ್ಲಿ ತೊಡಗಿದ್ದರು ಎಂದು ಉದ್ಯಮಿ ಬಾಲಾಜಿ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ರವೀಂದರ್‌ ಅವರನ್ನು ಬಂಧಿಸಲಾಗಿದೆ. ಇನ್ನು ನ್ಯಾಯಾಲಯದಲ್ಲಿ ಪ್ರಕರಣದ ತನಿಖೆ ನಡೆದು ಇದೀಗ ಮಹಾಲಕ್ಷ್ಮಿ ಪತಿ ಜೈಲಿನ ಕಂಬಿ ಹಿಂದಿದ್ದಾರೆ.

Join Nadunudi News WhatsApp Group