Free Travel Rule: ಶಕ್ತಿ ಯೋಜನೆಯಲ್ಲಿ ದೊಡ್ಡ ಬದಲಾವಣೆ, ಮಹಿಳೆಯರೇ ಈ ತಪ್ಪು ಮಾಡಿದರೆ 500 ರೂ. ದಂಡ

ಮಹಿಳೆಯರು ಉಚಿತ ಪ್ರಯಾಣ ಮಾಡುವಲ್ಲಿ ಈ ತಪ್ಪನ್ನು ಮಾಡಿದರೆ ದಂಡ ಖಚಿತ

Mahalakshmi Yojana Free Travel Rule: ಕರ್ನಾಟಕ ಸರ್ಕಾರ ವಿಧಾನಸಭಾ ಚುನಾವಣೆಗೂ ಮುನ್ನ ತನ್ನ ಪ್ರಣಾಳಿಕೆಯಲ್ಲಿ ಐದು ಉಚಿತ ಗ್ಯಾರಂಟಿಯನ್ನು ಘೋಷಿಸಿ ರಾಜ್ಯದ ಜನತೆಯ ಬೆಂಬಲವನ್ನು ಪಡೆದುಕೊಂಡು. ಕಾಂಗ್ರೆಸ್ ಸರ್ಕಾರ ರಾಜ್ಯದ ಮಹಿಳೆಯರಿಗೆ ಸರ್ಕಾರೀ ಬಸ್ ಗಳಲ್ಲಿ ಉಚಿತ ಪ್ರಯಾಣವನ್ನು ಕಲ್ಪಿಸಿಕೊಡಲು Shakti ಯೋಜನೆಯನ್ನು ಜಾರಿಗೊಳಿಸಿತ್ತು.

ಸದ್ಯ ಇದೆ ಯೋಜನೆಯನ್ನು ತೆಲಂಗಾಣ ರಾಜ್ಯ ಸರ್ಕಾರ (Telangana Govt) ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ತೆಲಂಗಾಣ ರಾಜ್ಯ ಸರ್ಕಾರ ಜಯ ಸಾಧಿಸಿದೆ. ಹೀಗಾಗಿ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ನೀಡುವುದಾಗಿದೆ ಘೋಷಿಸಿದೆ. ಆದರೆ ಮಹಿಳೆಯರು ಉಚಿತ ಪ್ರಯಾಣ ಮಾಡುವಲ್ಲಿ ಈ ತಪ್ಪನ್ನು ಮಾಡಿದರೆ ದಂಡ ವಿಧಿಸುವುದಾಗಿ ಸೂಚನೆ ನೀಡಿದೆ.

Mahalakshmi Yojana Free Travel Rule
Image Credit: Newstap

ಉಚಿತ ಪ್ರಯಾಣಕ್ಕೆ ಹೊಸ ರೂಲ್ಸ್
ತೆಲಂಗಾಣ ರಾಜ್ಯ ಸರಕಾರ ಮಹಿಳೆಯರಿಗೆ “Mahalakshmi Yojana “ ಮೂಲಕ ಉಚಿತ ಪ್ರಯಾಣವನ್ನು ನೀಡಲು ನಿರ್ಧರಿಸಿದೆ. December 9 ರಿಂದ ತೆಲಂಗಾಣ ರಾಜ್ಯದ ಮಹಿಳೆಯರು ಉಚಿತ ಪ್ರಯಾಣವನ್ನು ಮಾಡಲು ಸರ್ಕಾರ ಅನುಮತಿ ನೀಡಿದೆ. ಮಹಿಳೆಯರ ಉಚಿತ ಪ್ರಯಾಣಕ್ಕೆ ಸರ್ಕಾರ ವಿವಿವಿದ ಷರತ್ತುಗಳನ್ನು ಕೂಡ ವಿಧಿಸಿದೆ. ಉಚಿತ ಪ್ರಯಾಣ ಮಾಡುವ ಪ್ರತಿ ಮಹಿಳೆಯು ಕೂಡ ಸರ್ಕಾರದ ನಿಯಮವನ್ನು ಪಾಲಿಸುವುದು ಕಡ್ಡಾಯವಾಗಿದೆ.

ಮಹಿಳೆಯರೇ ಈ ತಪ್ಪು ಮಾಡಿದರೆ 500 ರೂ ದಂಡ
ತೆಲಂಗಾಣ ರಾಜ್ಯ ಸರ್ಕಾರ ಉಚಿತ ಪ್ರಯಾಣಕ್ಕೆ ಮಹತ್ವದ ನಿಯಮವನ್ನು ಜಾರಿಗೊಳಿಸಿದೆ. ತೆಲಂಗಾಣ ರಾಜ್ಯದ ಮೂಲ ನಿವಾಸಿಗಳಿಗೆ ಮಾತ್ರ ಉಚಿತ ಸೌಲಭ್ಯವನ್ನು ಸರ್ಕಾರ ನೀಡುತ್ತಿದೆ. ಇತರ ಪ್ರದೇಶದಿಂದ ರಾಜ್ಯಕ್ಕೆ ಬಂದು ವಾಸವಿರುವ ಬೇರೆ ಜನರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಇರುವುದಿಲ್ಲ. ಇನ್ನು ಉಚಿತ ಪ್ರಯಾಣವೆಂದು ಟಿಕೆಟ್ ಪಡೆಯದೇ ಯಾವ ಮಹಿಳೆಯು ಕೂಡ ಪ್ರಯಾಣ ಮಾಡುವಂತಿಲ್ಲ. ಎಲ್ಲಿ ಪ್ರಯಾಣಿಸಬೇಕಿದ್ದರೂ ಕೂಡ ಮಹಿಳೆಯರು ಟಿಕೆಟ್ ಪಡೆಯುವುದು ಕಡ್ಡಾಯ.

Telangana Mahalakshmi Scheme
Image Credit: Deccanherald

ಒಂದು ವೇಳೆ ಮಹಿಳೆಯರು ಟಿಕೆಟ್ ಇಲ್ಲದೆ ಪ್ರಯಾಣ ಮಾಡಿದರೆ ಅಂತವರಿಗೆ 500 ರೂ. ದಂಡ ವಿಧಿಸುವುದಾಗಿ ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮಾಹಿತಿ ನೀಡಿದ್ದಾರೆ. ಇನ್ನು ಮಹಿಳೆಯರು ಉಚಿತ ಪ್ರಯಾಣ ಮಾಡುವ ಸಮಯದಲ್ಲಿ ಆಧಾರ್ ಕಾರ್ಡ್, ವೋಟರ್ ಐಡಿ, ರೇಷನ್ ಕಾರ್ಡ್ ಸೇರಿದಂತೆ ಇನ್ನಿತರ ಯಾವುದೇ ವೈಯಕ್ತಿಕ ಮಾಹಿತಿಯನ್ನು ತೋರಿಸಿ ಉಚಿತ ಪ್ರಯಾಣವನ್ನು ಮಾಡಬಹುದು. ಆದರೆ ಉಚಿತ ಪ್ರಯಾಣಕ್ಕೆ ಟಿಕೆ ಪಡೆಯುವುದು ಕಡ್ಡಾಯ ಎನ್ನುವ ವಿಚಾರ ನಿಮ್ಮ ಗಮನದಲ್ಲಿರಲಿ.

Join Nadunudi News WhatsApp Group

Join Nadunudi News WhatsApp Group