Mahantesh Bilagi IAS Full Accident report: ಮಂಗಳವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಹಿರಿಯ IAS ಅಧಿಕಾರಿಯೊಬ್ಬರು ಮತ್ತು ಅವರ ಸಹೋದರರು ಸಾವನ್ನಪ್ಪಿದ್ದಾರೆ. ನವೆಂಬರ್ 25, 2025 ರ ಸಂಜೆ 5:28 ರ ಸುಮಾರು ಕಲಬುರಗಿ-ಬೀದರ್ ರಾಜ್ಯ ಹೆದ್ದಾರಿಯಲ್ಲಿ ಒಂದು ಶ್ವಾನ ರಸ್ತೆ ದಾಟಲು ಯತ್ನಿಸಿತು. ಅದನ್ನು ಉಳಿಸುವ ಸಲುವಾಗಿ ತೀವ್ರವಾಗಿ ಬ್ರೇಕ್ ಹಾಕಿದರೂ. ಬ್ರೇಕ್ ಹಾಕಿದ ಕಾರಣ ಇನ್ನೋವಾ ಕ್ರಿಸ್ಟಾ ಕಾರು ರಸ್ತೆಯ ಮಧ್ಯದ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದಿದೆ. ಈ ದುರಂತದಲ್ಲಿ ಹಿರಿಯ IAS ಅಧಿಕಾರಿ ಮಹಾಂತೇಶ್ ಬಿಳಗಿ (51), ಅವರ ಸಹೋದರ ಶಂಕರ್ ಬಿಳಗಿ (48) ಮತ್ತು ಸಂಬಂಧಿ ಈರಣ್ಣ ಶಿರಸಂಗಿ (55) ಸಾವನ್ನಪ್ಪಿದ್ದಾರೆ. ಈ ಬಗ್ಗೆ ನಾವೀಗ ಸಂಪೂರ್ಣ ವಿವರವನ್ನು ತಿಳಿದುಕೊಳ್ಳೋಣ.
ಅಪಘಾತದ ಸಂಪೂರ್ಣ ವಿವರ
25 ನವೆಂಬರ್ 2025 ರ ಮಂಗಳವಾರ ಸಮಯ ಸುಮಾರು ಸಂಜೆ 5:25 ರಿಂದ 5:30ರ ನಡುವೆ ಜೇವರ್ಗಿ ತಾಲೂಕು, ಗೌನಹಳ್ಳಿ ಕ್ರಾಸ್ ಬಳಿ (ಕಲಬುರಗಿ-ಬೀದರ್ ರಾಷ್ಟ್ರೀಯ ಹೆದ್ದಾರಿ 150E) ಟೊಯೊಟಾ ಇನ್ನೋವಾ ಕ್ರಿಸ್ಟಾ ಕಾರ್ ಅಪಘಾತವಾಗಿದೆ. ಪೊಲೀಸ್ FIR ಪ್ರಕಾರ ಕಾರಿನ ವೇಗವು ಗಂಟೆಗೆ 90-100 ಕಿ.ಮೀ. ಇತ್ತು ಎಂದು ವರದಿ ಆಗಿದೆ.
ಮೃತಪಟ್ಟವರ ವಿವರ
ಮೂವರು ಸೀಟ್ ಬೆಲ್ಟ್ ಧರಿಸಿದ್ದರು ಕೂಡ ತಲೆಗೆ ಮತ್ತು ಎದೆಗೆ ಗಂಭೀರ ಗಾಯ ಆಗಿ ಮೃತಪಟ್ಟಿದ್ದಾರೆ.
* ಮಹಾಂತೇಶ್ ಬಿಳಗಿ–2012 ಬ್ಯಾಚ್ IAS, ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕ
* ಶಂಕರ್ ಬಿಳಗಿ–ಮಹಾಂತೇಶ್ ಅವರ ತಮ್ಮ, ಖಾಸಗಿ ವ್ಯವಹಾರಿ
* ಈರಣ್ಣ ಶಿರಸಂಗಿ–ಸಂಬಂಧಿ, ರೈತ
IAS ಅಧಿಕಾರಿ ಮಹಾಂತೇಶ್ ಬಿಳಗಿ ಯಾರು..?
ಮಾರ್ಚ್ 27, 1974 ರಂದು ರಾಮದುರ್ಗ ತಾಲೂಕು, ಬೆಳಗಾವಿಯಲ್ಲಿ ಮಹಾಂತೇಶ್ ಬಿಳಗಿ ಅವರ ಜನನವಾಗುತ್ತದೆ. ತಂದೆ ಬಸಪ್ಪ ಬಿಳಗಿ (ರೈತ), ತಾಯಿ ಲಕ್ಷ್ಮೀಬಾಯಿ, ಮಹಾಂತೇಶ್ ಅವರ ಹೆಂಡತಿ ಶಾರದಾ ಬಿಳಗಿ ಹಾಗೆ ಇವರಿಗೆ ಇಬ್ಬರು ಮಕ್ಕಳು (ಮಗಳು 10 ನೇ ತರಗತಿ, ಮಗ 8ನೇ ತರಗತಿ). ಬಸವನಬಾಗೇವಾಡಿ ಕಾಲೇಜು, ಕರ್ನಾಟಕ ವಿಶ್ವವಿದ್ಯಾಲಯ, 2011 ರಲ್ಲಿ UPSC ಯಲ್ಲಿ 218 ನೇ ರಾಂಕ್ ಪಡೆದಿರುತ್ತಾರೆ. ಮೊದಲು ಧಾರವಾಡ ಸಹಾಯಕ ಆಯುಕ್ತರಾಗಿ ನೇಮಕರಾಗುತ್ತಾರೆ.
ದಾವಣಗೆರೆ DC ಆಗಿ 2020-22 ರ ವರೆಗೆ ಕೆಲಸ ಮಾಡುತ್ತಾರೆ. ಬೆಸ್ಕಾಂ MD ಆಗಿ 2023-24 ರ ವರೆಗೆ ಕೆಲಸ ಮಾಡುತ್ತಾರೆ. ಕರ್ನಾಟಕ ರಾಜ್ಯ ಖನಿಜ ನಿಗಮ MD ಆಗಿ 2024-25 ರ ವರೆಗೆ ಕೆಲಸವನ್ನು ಮಾಡುತ್ತಿದ್ದರು. ಬಡತನದಿಂದ IAS ಆದ ಆದರ್ಶ ಪ್ರೇರಣೆ ಆಗಿದ್ದಾರೆ. ಜನಪರ ಅಧಿಕಾರಿ ಎಂದೇ ಜನರು ಇವರನ್ನು ಕರೆಯುತ್ತಿದ್ದರು. ಬಡ ವಿದ್ಯಾರ್ಥಿಗಳಿಗೆ ಉಚಿತ ತರಗತಿ ನಡೆಸುತ್ತಿದ್ದರು, ಮತ್ತು ತಮ್ಮ ಸಂಬಳದ ಒಂದು ಭಾಗವನ್ನು ವಿದ್ಯಾರ್ಥಿ ವೇತನಕ್ಕಾಗಿ ಮೀಸಲಿಡುತ್ತಿದ್ದರು.
ರಾಜಕೀಯ ನಾಯಕರ ಸಂತಾಪಗಳು
* ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ನನ್ನ ಅತ್ಯಂತ ಪ್ರೀತಿಯ ಅಧಿಕಾರಿ. ಅವರ ನಷ್ಟ ಅಪೂರ್ಣೀಯ.” ಎಂದು ಸಂತಾಪ ಸೂಚಿಸಿದ್ದಾರೆ.
* ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು “ಅವರ ಹೊಣೆಗಾರಿಕೆ ಮತ್ತು ಪ್ರಾಮಾಣಿಕತೆ ಮರೆಯಲಾಗದು.” ಎಂದು ಸಂತಾಪ ಸೂಚಿಸಿದ್ದಾರೆ.
ಬಿ.ಎಸ್ ಯಡಿಯೂರಪ್ಪ ಅವರು “ಕರ್ನಾಟಕ ಒಬ್ಬ ಆದರ್ಶ ಅಧಿಕಾರಿಯನ್ನು ಕಳೆದುಕೊಂಡಿದೆ.” ಎಂದು ಸಂತಾಪ ಸೂಚಿಸಿದ್ದಾರೆ.
* ಇನ್ನು ಬಸವರಾಜ ಬೊಮ್ಮಾಯಿ ಮತ್ತು ಎಚ್.ಡಿ. ಕುಮಾರಸ್ವಾಮಿ ಸೇರಿ ಎಲ್ಲ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ.
ಅಂತಿಮ ಸಂಸ್ಕಾರ
ನವೆಂಬರ್ 26 ರ ಬೆಳಿಗ್ಗೆ ರಾಮದುರ್ಗದಲ್ಲಿ ಪೂರ್ಣ ರಾಜಕೀಯ ಗೌರವದೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. IAS ಅಧಿಕಾರಿ ಮಹಾಂತೇಶ್ ಬಿಳಗಿ ಅವರನ್ನು ನೋಡಲು ಜನ ಸಾಗರವೇ ಹರಿದು ಬಂದಿತ್ತು. ಮಹಾಂತೇಶ್ ಬಿಳಗಿ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೊರೆಯಲಿ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

