Cooperative Bank: ಈ ಸಹಕಾರಿ ಬ್ಯಾಂಕಿನ ಲೈಸೆನ್ಸ್ ರದ್ದು ಮಾಡಿದ RBI, ಇಷ್ಟು ಹಣ ವಾಪಾಸ್ ಪಡೆಯಲು ಮಾತ್ರ ಅವಕಾಶ.
ಇದೀಗ ಮತ್ತೊಂದು ಸಹಕಾರಿ ಬ್ಯಾಂಕ್ ನ ಪರವಾನಗಿಯನ್ನು ರದ್ದುಗೊಳಿಸಿ, RBI ಹಣ ಹಿಂಪಡೆಯಲು ಮಿತಿಯನ್ನು ಇರಿಸಿದೆ.
Maharashtra Cooperative Bank Licence Cancelled: ಭಾರತೀಯ Reserve Bank ಇತ್ತೀಚಿಗೆ ಸಹಕಾರಿ ಬ್ಯಾಂಕ್ ಗಳ ಬಗ್ಗೆ ಹೆಚ್ಚಿನ ನಿಗಾ ವಹಿಸುತ್ತಿದೆ. ಗ್ರಾಹಕರಿಗೆ ಹೆಚ್ಚಿನ ಭದ್ರತೆಯನ್ನು ನೀಡುವ ಉದ್ದೇಶದಿಂದ RBI ದೇಶದಲ್ಲಿನ Cooperative Bank ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಸದ್ಯ RBI Kerala , Maharashtra, Uttar Pradesh ಸೇರಿದಂತೆ Karnataka ದ ಒಂದೊಂದು ಸಹಕಾರಿ ಬ್ಯಾಂಕ್ ನ ಪರವಾನಗಿಯನ್ನು ರದ್ದು ಮಾಡಿದೆ.
Septembar 20 ರಿಂದ RBI ಈಗಾಗಲೇ ಮೂರು ಬ್ಯಾಂಕ್ ನ ಪರವಾನಗಿಯನ್ನು ರದ್ದು ಮಾಡಿತ್ತು. ಇದೀಗ Maharashtra ದ ಮತ್ತೊಂದು ಸಹಕಾರಿ ಬ್ಯಾಂಕ್ ನ ಪರವಾನಗಿಯನ್ನು ರದ್ದುಗೊಳಿಸಿ, RBI ಹಣ ಹಿಂಪಡೆಯಲು ಮಿತಿಯನ್ನು ಇರಿಸಿದೆ.
ಈ ಸಹಕಾರಿ ಬ್ಯಾಂಕಿನ ಲೈಸೆನ್ಸ್ ರದ್ದು ಮಾಡಿದ RBI
ಕೇಂದ್ರ ಬ್ಯಾಂಕ್ ಇದೀಗ Nasik District Girna Sahkari Bank Limited Maharashtra ಬ್ಯಾಂಕಿನ ಪರವಾನಗಿಯನ್ನು ರದ್ದು ಮಾಡಿದೆ. ಈ ಸಹಕಾರಿ ಬ್ಯಾಂಕ್ ನಲ್ಲಿ ಬಂಡವಾಳ ಮತ್ತು ಗಳಿಕೆಯ ಕೊರತೆ ಇರುವ ನಿಟ್ಟಿನಲ್ಲಿ ಆರ್ ಬಿಐ Septembar 26 ರಂದು ಈ ಕ್ರಮ ಕೈಗೊಂಡಿದೆ. ಇನ್ನು ಪರವಾನಗಿ ರದ್ದಾದ ನಂತರ ಯಾವುದೇ ರೀತಿಯ ಬ್ಯಾಂಕಿಂಗ್ ವ್ಯವಹಾರವನ್ನು ಮಾಡದಂತೆ ಬ್ಯಾಂಕ್ ಗೆ ಸೂಚನೆ ನೀಡಿದೆ.
ಇಷ್ಟು ಹಣ ವಾಪಾಸ್ ಪಡೆಯಲು ಮಾತ್ರ ಅವಕಾಶ
ಬ್ಯಾಂಕ್ ನ ಪರವಾನಗಿ ರದ್ದಾದ ಬಳಿಕ ಬ್ಯಾಂಕ್ ನಲ್ಲಿ ಯಾವುದೇ ರೀತಿಯ ಠೇವಣಿಯನ್ನು ಸ್ವೀಕರಿಸುವುದಾಗಲಿ ಅಥವಾ ಗ್ರಾಹಕರು ಬ್ಯಾಂಕ್ ನಲ್ಲಿ ಹಣವನ್ನು ಠೇವಣಿ ಮಾಡಲು ಯಾವುದೇ ರೀತಿಯ ಅನುಮತಿ ಇಲ್ಲ ಎಂದು RBI ಆದೇಶ ಹೊರಡಿಸಿದೆ.
ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 ರ ಸೆಕ್ಷನ್ 56 ರ ಜೊತೆಗೆ ಸೆಕ್ಷನ್ 11 (1), ಸೆಕ್ಷನ್ 22 (3) (ಡಿ) ನ ನಿಬಂಧನೆಗಳ ಉಲ್ಲಂಘನೆಯಾಗಿರುವ ಕಾರಣ RBI ಈ ನಿರ್ಧಾರ ಕೈಗೊಂಡಿದೆ. ಹಾಗೆಯೆ ಪ್ರತಿ ಠೇವಣಿದಾರರು ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ) ಅಡಿಯಲ್ಲಿ ರೂ. 5 ಲಕ್ಷದವರೆಗೆ ಠೇವಣಿಗಳನ್ನು ಪಡೆಯಬಹುದು. ಇದಕ್ಕಿಂತ ಹೆಚ್ಚಿನ ಠೇವಣಿ ಮೊತ್ತವನ್ನು ಕ್ಲೈಮ್ ಮಾಡಲು ಅನುಮತಿಸಲಾಗುವುದಿಲ್ಲ ಎಂದು RBI ಮಾಹಿತಿ ನೀಡಿದೆ.
ಪರವಾನಗಿ ರದ್ದಾಗಿರುವ ಬ್ಯಾಂಕುಗಳ ವಿವರ
*Thiruvananthapuram Anantashayaman Shakari Bank (Kerala)
*Mallikarjuna Town Co-operative Bank Niamita (Maski, Karnataka)
*National Cooperative Bank Limited (Bahraich, UP)
*Nasik District Girna Sahkari Bank Limited (Maharashtra)