Mahesh Babu Remuneration Varanasi Movie: ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮತ್ತು ಮಾಧ್ಯಮಗಳಲ್ಲಿ ಎಸ್‌ಎಸ್ ರಾಜಮೌಳಿ ಮತ್ತು ಮಹೇಶ್ ಬಾಬು ಅವರ ವಾರಾಣಸಿ ಚಿತ್ರದ ಸುದ್ದಿ ಸಾಕಷ್ಟು ಹರಿದಾಡುತ್ತಿರುವುದನ್ನು ನೀವು ಗಮನಿಸಿರಬಹುದು. ಎಸ್‌ಎಸ್ ರಾಜಮೌಳಿ ಅವರ ಬಹುನಿರೀಕ್ಷಿತ ಚಿತ್ರವಾದ ವಾರಾಣಸಿ ಚಿತ್ರ 2027 ಕ್ಕೆ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಇದರ ನಡುವೆ ವಾರಾಣಸಿ ಚಿತ್ರಕ್ಕೆ ಮಹೇಶ್ ಬಾಬು ಅವರು ಪಡೆದುಕೊಳ್ಳುತ್ತಿರುವ ಸಂಭಾವನೆಯ ವಿಷಯ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಲೇಖನದಲ್ಲಿ ನಾವು ನಿಮಗೆ ವಾರಾಣಸಿ ಚಿತ್ರಕ್ಕೆ ನಟ ಮಹೇಶ್ ಬಾಬು ಪಡೆದುಕೊಳ್ಳುತ್ತಿರುವ ಸಂಭಾವನೆಯ ಬಗ್ಗೆ ಮಾಹಿತಿ ತಿಳಿಸಿಕೊಡುತ್ತೇವೆ.
ವಾರಾಣಸಿ ಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿ
‘ವಾರಾಣಸಿ’ ಎಂಬ ಈ ಚಿತ್ರವು ರಾಜಮೌಳಿಯ ಮಹಾಕಾವ್ಯಾತ್ಮಕ ಸೈನ್ಸ್ ಫಿಕ್ಷನ್ ಚಿತ್ರವಾಗಿದ್ದು, 2027 ರಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರ ದೊಡ್ಡ ಬಜೆಟ್ ಚಿತ್ರವಾಗಿದ್ದು ಕಲೆಕ್ಷನ್ ಕೂಡ ಭಾರತದ ಚಿತ್ರರಂಗ ಅತೀ ದೊಡ್ಡ ಕಲೆಕ್ಷನ್ ಆಗಿರಲಿದೆ. ದೇಶದ ಖ್ಯಾತ ನಟ ಮಹೇಶ್ ಬಾಬು ಅವರು ಈ ಚಿತ್ರದಲ್ಲಿ ರುದ್ರ ಅನ್ನುವ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಪ್ರಿಯಾಂಕಾ ಚೊಪ್ರಾ ಮಂಡಾಕಿನಿ, ಮತ್ತು ಪೃಥ್ವಿರಾಜ್ ಸುಕುಮಾರನ್ ಕುಂಭಾ ಎಂಬ ವಿಲನ್ ಆಗಿ ನಟನೆ ಮಾಡಿರುವುದನ್ನು ನಾವು ಕಾಣಬಹುದು. ಚಿತ್ರದ ಬಜೆಟ್ ಸುಮಾರು 1300 ಕೋಟಿ ಆಗಿದೆ ಮತ್ತು ಈ ಇದು ಭಾರತದ ಚಿತ್ರರಂಗದ ಅತೀ ಹೆಚ್ಚು ಬಜೆಟ್ ನ ಚಿತ್ರ ಅನ್ನುವ ಹೆಗ್ಗಳಿಕೆ ಪಡೆದುಕೊಂಡಿದೆ.
ಚಿತ್ರಕ್ಕೆ ಮಹೇಶ್ ಬಾಬು ಸಂಭಾವನೆ ಶೂನ್ಯ
ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ, ರಾಜಮೌಳಿಯ ಅವರ ವಾರಾಣಸಿ ಚಿತ್ರಕ್ಕೆ ಮಹೇಶ್ ಬಾಬು ಅವರು ಯಾವುದೇ ಸಂಭಾವನೆ ಪಡೆದುಕೊಂಡಿಲ್ಲ. ಬದಲಾಗಿ ಮಹೇಶ್ ಬಾಬು ಲಾಭದಲ್ಲಿ ಶೇಕಡಾ 40 ಪಡೆದುಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಸಮನುಸ್ಮವಾಗಿ ಮಹೇಶ್ ಬಾಬು ಅವರು ಒಂದು ಚಿತ್ರದಲ್ಲಿ ನಟನೆ ಮಾಡಲು 100 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಳ್ಳುತ್ತಾರೆ, ಆದರೆ ವಾರಾಣಸಿ ಚಿತ್ರಕ್ಕೆ ಮಹೇಶ್ ಬಾಬು ಸಂಭಾವನೆ ನಿರಾಕರಣೆ ಮಾಡಿದ್ದಾರೆ. ರಾಜಮೌಳಿಯ ಅವರ ಜೊತೆ ಮಹೇಶ್ ಬಾಬು ಅವರು ಲಾಭ ಪಾಲು ಪಡೆದುಕೊಳ್ಳಲಿದ್ದಾರೆ.
ಮಹೇಶ್ ಬಾಬು ಈ ನಿರ್ಧಾರಕ್ಕೆ ಕಾರಣ ಏನು?
ಮಹೇಶ್ ಬಾಬು ಅವರಿಗೆ ಈ ಚಿತ್ರದ ಯಶಸ್ಸಿನ ಮೇಲೆ ಬಲವಾದ ನಂಬಿಕೆ ಇದೆ. ಈ ಚಿತ್ರದ ಮೇಲಿನ ಅಪಾರವಾದ ನಂಬಿಕೆಯಿಂದ ಮಹೇಶ್ ಬಾಬು ಈ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅದೇ ರೀತಿಯಲ್ಲಿ ಪ್ರಿಯಾಂಕಾ ಚೊಪ್ರಾ ಅವರು ಈ ಚಿತ್ರಕ್ಕೆ ಸುಮಾರು ₹25-30 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ‘ವಾರಾಣಸಿ’ ಟ್ರೀಟಾ ಯುಗದಿಂದ 2027ರವರೆಗೆ ಸಮಯ ಯಾತ್ರೆಯ ಕಥೆಯನ್ನು ಹೊಂದಿದ್ದು, ಅಂಟಾರ್ಕ್ಟಿಕಾ, ಕೆನ್ಯಾ, ವಾರಾಣಸಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ. ಇದು ಎರಡು ಭಾಗಗಳ ಚಿತ್ರವಾಗಿದ್ದು, IMAXನಲ್ಲಿ ಬಿಡುಗಡೆಯಾಗಲಿದೆ. RRR ಚಿತ್ರದ ಯಶಸ್ಸಿನ ನಂತರ ಇದು ರಾಜಮೌಳಿ ಅವರ ಅತೀ ದೊಡ್ಡ ಚಿತ್ರವಾಗಲಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

