Mahila Samman: ಇನ್ನು ಮುಂದೆ ಇಂತಹ ಯೋಜನೆಗಳಿಗೆ ತೆರಿಗೆ ಪಾವತಿ ಮಾಡುವ ಅಗತ್ಯ ಇಲ್ಲ, ಕೇಂದ್ರದ ಘೋಷಣೆ.
ಕೇಂದ್ರದ ಮೋದಿ ಸರ್ಕಾರ (Central Government) ಇತ್ತೀಚಿಗೆ ಕೆಲವು ಯೋಜನೆಗಳಲ್ಲಿ ಬದಾಲಾವಣೆ ತರುತ್ತಿದೆ. ಯಾವ ಯೋಜನೆಯ ನಿಯಮ ಬದಲಾಗಿದೆ ಎನ್ನುವ ಬಗ್ಗೆ ತಿಳಿಯೋಣ.
Mahila Samman Saving Scheme Latest Update: ಕೇಂದ್ರದಿಂದ ಮಹಿಳೆಯರಿಗಾಗಿ ವಿವಿಧ ಸೌಲಭ್ಯಗಳ ಜೊತೆಗೆ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಮಹಿಳೆಯರು ಸ್ವಾಲಂಭಿಯಾಗಿ ಜೀವನ ನಡೆಸಲಿ ಎನ್ನುವ ಉದ್ದೇಶದಿಂದ ಸರ್ಕಾರ ಮಹಿಳೆಯರಿಗಾಗಿ ವಿವಿಧ ರೀತಿಯ ಯೋಜನೆಗಳನ್ನು ಜಾರಿಗೊಳಿಸಿದೆ.
ಆದರೆ ಇದೀಗ ಕೇಂದ್ರದ ಮೋದಿ ಸರ್ಕಾರ (Central Government) ಇತ್ತೀಚಿಗೆ ಕೆಲವು ಯೋಜನೆಗಳಲ್ಲಿ ಬದಾಲಾವಣೆ ತರುತ್ತಿದೆ. ಯಾವ ಯೋಜನೆಯ ನಿಯಮ ಬದಲಾಗಿದೆ ಎನ್ನುವ ಬಗ್ಗೆ ತಿಳಿಯೋಣ.
ಮಹಿಳಾ ಸಮ್ಮಾನ್ ಉಳಿತಾಯ ಯೋಜನೆ (Mahila Samman Saving Scheme)
ಏಪ್ರಿಲ್ 1 ರಿಂದ ಮಹಿಳೆಯರಿಗಾಗಿ ಕೇಂದ್ರದ ಮೋದಿ ಸರಕಾರ ಮಹಿಳಾ ಸಮ್ಮಾನ್ ಉಳಿತಾಯ ಯೋಜನೆಯನ್ನು ಪ್ರಾರಂಭಿಸಿತ್ತು. ಮಹಿಳೆಯರಿಗೆ ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭ ನೀಡುವ ಯೋಜನೆಯಾಗಿತ್ತು. ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಯೋಜನೆಯ ಲಾಭ ಪಡೆದಿದ್ದರು.
ಇನ್ನು ಇದೀಗ ಕೇಂದ್ರ ಸರ್ಕಾರ ಮಹಿಳಾ ಸಮ್ಮಾನ್ ಉಳಿತಾಯ ಯೋಜನೆಯಲ್ಲಿ ಮಹತ್ವದ ಬದಲಾವಣೆಯನ್ನು ಜಾರಿಗೊಳಿಸಿದೆ.
ಮಹಿಳಾ ಸಮ್ಮಾನ್ ಯೋಜನೆಯಲ್ಲಿ ಮಹತ್ವದ ಬದಲಾವಣೆ ಘೋಷಿಸಿದ ಕೇಂದ್ರ ಸರ್ಕಾರ
ಮಹಿಳಾ ಸಮ್ಮಾನ್ ಉಳಿತಾಯ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಇತ್ತೀಚಿಗೆ ಮಹತ್ವದ ಘೋಷಣೆ ಹೊರಡಿಸಿದೆ. ಈ ಯೋಜನೆಯಲ್ಲಿ ಗಳಿಸಿದ ಬಡ್ಡಿಯಲ್ಲಿ ಇನ್ನುಮುಂದೆ TDS ಕಡಿತಗೊಳಿಸಲಾಗುವುದಿಲ್ಲ ಎಂದು ಸರ್ಕಾರ ಘೋಷಣೆ ಹೊರಡಿಸದೆ. CBDT ಅಧಿಸೂಚನೆಯ ಪ್ರಕಾರ ಬಡ್ಡಿ ಆದಾಯವನ್ನು ಪಾವತಿಸುವವರ ಕೈಯಲ್ಲಿ ತೆರಿಗೆ ವಿಧಿಸಲಾಗುತ್ತದೆ.
ಮೇ 16 ರಂದು CBDT ಉಳಿತಾಯ ಯೋಜನೆಗಾಗಿ TDS ನಿಬಂಧನೆಗಳನ್ನು ಸೂಚಿಸಿದೆ. ಈ ಯೋಜನೆಯ ಬಡ್ಡಿಗಳ ಮೇಲೆ ಟಿಡಿಎಸ್ ಅನ್ವಯಿಸುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಒಂದು ಆರ್ಥಿಕ ವರ್ಷದಲ್ಲಿ ಗಳಿಸುವ ಬಡ್ಡಿಯು ರೂ. 40000 ಕ್ಕಿಂತ ಕಡಿಮೆ ಇರುವ ಕಾರಣ ಯಾವುದೇ ರೀತಿಯ ಟಿಡಿಎಸ್ ಅನ್ವಯಿಸುವುದಿಲ್ಲ ಎಂದು ಬಹಿರಂಗಪಡಿಸಲಾಗಿದೆ.