MSSC Details:ಮೋದಿ ಸರ್ಕಾರದಿಂದ ದೇಶದ ಎಲ್ಲಾ ಮಹಿಳೆಯರಿಗೆ ಗುಡ್ ನ್ಯೂಸ್, ಪೋಸ್ಟ್ ಆಫೀಸ್ ನಲ್ಲಿ ಈಗಲೇ ಖಾತೆ ತೆರೆಯಿರಿ
ದೇಶದ ಮಹಿಳೆಯರಿಗಾಗಿ ವಿಶೇಷ ಯೋಜನೆ ಜಾರಿ
Mahila Samman Savings Certificate: ಮಹಿಳೆಯರ ಸಬಲೀಕರಣಕ್ಕಾಗಿ ಕೇಂದ್ರದ ಮೋದಿ ಸರ್ಕಾರ Mahila Samman Savings Certificate ವಿಶೇಷ ಯೋಜನೆಯನ್ನು ಜಾರಿಗೆ ತಂದಿದೆ. Mahila Samman ಉಳಿತಾಯ ಯೋಜನೆಯು ಮಹಿಳೆಯರಿಗಾಗಿ ಸರ್ಕಾರ ನಡೆಸುತ್ತಿರುವ ವಿಶೇಷ ಯೋಜನೆಯಾಗಿದೆ. ಇದು ಮಹಿಳೆಯರಿಗೆ ಉತ್ತಮ ಬಡ್ಡಿಯನ್ನು ನೀಡುವ ಠೇವಣಿ ಯೋಜನೆಯಾಗಿದೆ.
ಇದೀಗ ನಾವು ಕೇಂದ್ರದ ಮೋದಿ ಸರ್ಕಾರ ಪರಿಚಯಿಸಿರುವ ಉತ್ತಮ ಹೂಡಿಕೆಯ ಯೋಜನೆಯ ಬಗ್ಗೆ ಮಾಹಿತಿ ಹೇಳಲಿದ್ದೇವೆ. MSSC ಯೋಜನೆಯ ಅರ್ಜಿ ಸಲ್ಲಿಕೆ ಹೇಗೆ…? ಅರ್ಜಿ ಸಲ್ಲಿಕೆಗೆ ಯಾರು ಅರ್ಹರು…? ಅರ್ಜಿ ಸಲ್ಲಿಕೆಗೆ ಏನೆಲ್ಲ ದಾಖಲೆಗಳು ಬೇಕು…? ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.
ದೇಶದ ಮಹಿಳೆಯರಿಗಾಗಿ ವಿಶೇಷ ಯೋಜನೆ ಜಾರಿ
ಇದೀಗ ನಾವು ಈ ಲೇಖನದಲ್ಲಿ ಸರ್ಕಾರ ಮಹಿಳೆರಿಗಾಗಿ ಪರಿಚಯಿಸಿರುವ ಯೋಜನೆಯ ಬಗ್ಗೆ ಮಾಹಿತಿ ನೀಡಲಿದ್ದೇವೆ. ಸರ್ಕಾರ ಆರಂಭಿಸಿರುವ ಯೋಜನೆಯ Mahila Samman Savings Certificate. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಮಹಿಳೆಯರು ಹೆಚ್ಚಿನ ಬಡ್ಡಿಯನ್ನು ಪಡೆಯಬಹುದು. ಇದರಿಂದಾಗಿ ಹೆಚ್ಚು ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ. ಅಂಚೆ ಇಲಾಖೆಯು ನಡೆಸುತ್ತಿರುವ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯು ಹೆಚ್ಚು ಲಾಭದಾಯಕವಾಗಿದೆ.
ಈ ಯೋಜನೆಯಲ್ಲಿ ಮಹಿಳೆಯರಿಗೆ ಶೇ.7.5 ಬಡ್ಡಿ ಮೊತ್ತವನ್ನು ಸರಕಾರ ನೀಡುತ್ತಿದೆ. ಖಾತೆ ಕ್ಲೋಸ್ ಮಾಡಿದಾಗ ನಿಮಗೆ 7.5 ಶೇಕಡಾ ಬಡ್ಡಿದರದ ಬದಲು 5.5% ಬಡ್ಡಿದರ ಲಭ್ಯವಾಗುತ್ತದೆ. ಮಹಿಳೆಯರು ಅಲ್ಪಾವಧಿಗೆ ಹೂಡಿಕೆ ಮಾಡುವ ಮೂಲಕ ಉತ್ತಮ ಆದಾಯವನ್ನು ಗಳಿಸಬಹುದು. ಮಹಿಳೆಯರು ಇದನ್ನು ಎರಡು ವರ್ಷಗಳವರೆಗೆ ಮಾತ್ರ ಹೂಡಿಕೆ ಮಾಡಬೇಕು. ಹೂಡಿಕೆಯ ಗರಿಷ್ಠ ಮಿತಿಯನ್ನು 2 ಲಕ್ಷ ರೂ.ಗೆ ನಿಗದಿಪಡಿಸಲಾಗಿದೆ.
MSSC ಯೋಜನೆಯ ಅರ್ಹತಾ ಮಾನದಂಡಗಳೇನು…?
•ಅರ್ಜಿದಾರರು ಭಾರತೀಯರಾಗಿರಬೇಕು.
•ಈ ಯೋಜನೆಯು ಮಹಿಳೆಯರು ಮತ್ತು ಹುಡುಗಿಯರಿಗೆ ಮಾತ್ರ.
•ಈ ಯೋಜನೆಯಡಿ ಪ್ರತ್ಯೇಕ ಮಹಿಳೆಯರು ಅರ್ಜಿ ಸಲ್ಲಿಸಬಹುದು.
•ಯಾವುದೇ ಮಹಿಳೆ ತನ್ನ MSSC ಖಾತೆಯನ್ನು ಅಂಚೆ ಕಚೇರಿ ಅಥವಾ ಅಧಿಕೃತ ಬ್ಯಾಂಕ್‌ಗಳಲ್ಲಿ ತೆರೆಯಬಹುದು.
•18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರಿಗೆ, ಅವರ ಪೋಷಕರು ಈ ಖಾತೆಯನ್ನು ತೆರೆಯಬಹುದು.
•ಖಾತೆಯನ್ನು ತೆರೆಯುವಾಗ, ನೀವು ಫಾರ್ಮ್-1 ಅನ್ನು ಭರ್ತಿ ಮಾಡಬೇಕಾಗುತ್ತದೆ.
ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳೇನು…?
*ಪಾಸ್ಪೋರ್ಟ್ ಗಾತ್ರದ ಫೋಟೋ
*ಜನನ ಪ್ರಮಾಣಪತ್ರ
*ಆಧಾರ್ ಕಾರ್ಡ್
*ಪ್ಯಾನ್ ಕಾರ್ಡ್
*ಠೇವಣಿ ಮೊತ್ತ ಅಥವಾ ಚೆಕ್ ನೊಂದಿಗೆ ಪೇ-ಇನ್-ಸ್ಲಿಪ್
*ಗುರುತಿನ ಪುರಾವೆ
*ವಿಳಾಸ ಪುರಾವೆ