Mahindra 7 Seater: ಒಮ್ಮೆ ಚಾರ್ಜ್ ಮಾಡಿದರೆ 456 Km ಮೈಲೇಜ್, 7 ಆಸನಗಳ ಕಾರ್ ಕಡಿಮೆ ಬೆಲೆ ಲಾಂಚ್ ಮಾಡಿದ ಮಹಿಂದ್ರಾ.
ಕಂಪನಿಯು ಮಹಿಂದ್ರಾ ಬೊಲೆರೊ ಎಲೆಕ್ಟ್ರಿಕ್ ಹೊಸ ವಿನ್ಯಾಸವನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ.
Mahindra 7 Seater Electric: ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ಕಾರ್ ಖರೀದಿಸಲು ಬಯಸುತ್ತಿದ್ದಾರೆ. ಕುಟುಂಬದ ಜೊತೆಗಿನ ಪ್ರಯಾಣಕ್ಕೆ ಕಾರ್ ಹೆಚ್ಚು ಆರಾಮದಾಯಕವಾಗಿರುತ್ತದೆ. ಇತ್ತೀಚೆಗಂತೂ ವಿಭಿನ್ನ ವಿನ್ಯಾಸದ ಕಾರ್ ಗಳು ಮಾರುಕಟ್ಟೆಯನ್ನು ಪ್ರವೇಶಿಸುತ್ತಿವೆ. ವಿವಿಧ ಕಂಪನಿಗಳು ಗ್ರಾಹಕರಿಗಾಗಿ 7 ಆಸನ 9 ಆಸನಗಳ ಕಾರ್ ಗಳನ್ನೂ ಪರಿಚಯಿಸುತ್ತಿದೆ.
ಇನ್ನು ಮಧ್ಯಮ ವರ್ಗದ ಜನರು ಈಗಿನ ಬೆಲೆಯಲ್ಲಿ ಕಾರ್ ಖರೀದಿಸುವುದು ಕಷ್ಟವಾಗಿದೆ. ಅದಕ್ಕೆಂದೇ ಕೆಲವು ಕಂಪನಿಗಳು ಕಡಿಮೆ ಬೆಲೆಯ ಕಾರ್ ಗಳನ್ನೂ ಕೂಡ ಬಿಡುಗಡೆ ಮಾಡುತ್ತಿವೆ. ಇನ್ನು ಗ್ರಾಹಕರ ಅನುಕೂಲಕ್ಕಾಗಿ ಕೆಲವು ಕಂಪನಿಗಳು ಹಣಕಾಸಿನ ಯೋಜನೆಯನ್ನು ನೀಡುವ ಮೂಲಕ ಅನುಕೂಲ ಮಾಡಿಕೊಡುತ್ತೀವೆ.
ಮಹಿಂದ್ರಾ ನೂತನ ಕಾರ್ ಬಿಡುಗಡೆ
ಮಾರುಕಟ್ಟೆಯಲ್ಲಿ ಮಹಿಂದ್ರಾ (Mahindra) ಕಂಪನಿಯ ಕಾರ್ ಹೆಚ್ಚಾಗಿ ಕೇಳಿಬರುತ್ತಿದೆ. ಹೊಸ ಮಾದರಿಯ ಕಾರ್ ಗಳನ್ನೂ ಪರಿಚಯಿಸುವ ಮೂಲಕ ಮಹಿಂದ್ರಾ ತನ್ನ ಮಾರಾಟವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುತ್ತಿದೆ. ಇದೀಗ ಮಹಿಂದ್ರಾ ತನ್ನ ಹಳೆಯ ಮಾದರಿಯ ಕಾರ್ ಅನ್ನು ಎಲೆಕ್ಟ್ರಿಕ್ ರೂಪಾಂತರಕ್ಕೆ ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲಿದೆ. ಈ ನೂತನ ಎಲೆಕ್ಟ್ರಿಕ್ ರೂಪಾಂತರಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಸಿಗಲಿದೆ ಎಂದರೆ ತಪ್ಪಾಗಲಾರದು.
ಮಹಿಂದ್ರಾ ಬೊಲೆರೊ ಎಲೆಕ್ಟ್ರಿಕ್
ಕಂಪನಿಯು ಮಹಿಂದ್ರಾ ಬೊಲೆರೊ ಎಲೆಕ್ಟ್ರಿಕ್ ಹೊಸ ವಿನ್ಯಾಸವನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ಈ ಬೊಲೆರೊ ಎಲೆಕ್ಟ್ರಿಕ್ ಹಳೆಯ ಮಾದರಿಗಿಂತ ಉತ್ತಮ ಸ್ಥಿತಿಯಲ್ಲಿರಲಿದೆ. ಹಿಂದಿನ ಮಾದರಿಗಿಂತ ಸುಧಾರಿತ ವೈಶಿಷ್ಟ್ಯಗಳನ್ನು ನೂತನ ಎಲೆಕ್ಟ್ರಿಕ್ ಮಾದರಿಯಲ್ಲಿ ಅಳವಡಿಸಲಾಗಿದೆ. ಕಾರಿನ ಮುಂಭಾಗದ ನೋಟದ ಆಕರ್ಷಣೆಗಾಗಿ ಹೊಸ ಗ್ರಿಲ್, ಎಲ್ಇ ಡಿ ಹೆಡ್ ಲೈಟ್ ಗಳು ಮತ್ತು ಡೈಮಂಡ್-ಕಟ್ ಅಂಡರ್ ಗಾರ್ಡ್ನೊಂದಿಗೆ ಟ್ರೆಂಡಿ ಮೇಕ್ ಓವರ್ ನೀಡಲಾಗಿದೆ.
ಮಹಿಂದ್ರಾ ಬೊಲೆರೊ ಎಲೆಕ್ಟ್ರಿಕ್ ಬೆಲೆ
ಭಾರತೀಯ ಆಟೋಮೊಬೈಲ್ ವಲಯದಲ್ಲಿ ನೂತನ ವಿನ್ಯಾಸದ ಮಹಿಂದ್ರಾ ಬೊಲೆರೊ ಎಲೆಕ್ಟ್ರಿಕ್ ಡೀಸೆಲ್ ಹಾಗೂ ಪೆಟ್ರೋಲ್ ಖರ್ಚನ್ನು ತೆಗೆದುಹಾಕಲಿದೆ. ಇನ್ನು ಮಹಿಂದ್ರಾ ಬೊಲೆರೊ ಎಲೆಕ್ಟ್ರಿಕ್ ಬೆಲೆಯ ಬಗ್ಗೆ ನಿಖರ ಮಾಹಿತಿ ಇಲ್ಲವಾದರೂ ಸುಮಾರು 15 ಲಕ್ಷ ಬೆಲೆಯನ್ನು ಅಂದಾಜಿಸಲಾಗಿದೆ. ಮಹಿಂದ್ರಾ XUV 400 EV ಒಂದೇ ಚಾರ್ಜ್ ನಲ್ಲಿ 456 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಹೀಗಾಗಿ ಈ ಬೊಲೆರೊ ಎಲೆಕ್ಟ್ರಿಕ್ ಕೂಡ ಇದೆ ಮೈಲೇಜ್ ನೀಡಬಹುದು ಎಂದು ನಿರೀಕ್ಷಿಸಲಾಗಿದೆ.