Mahindra Cars: ಥಾರ್ ಜೊತೆಗೆ ಇನ್ನೊಂದು ಅಗ್ಗದ ಕಾರ್ ಲಾಂಚ್ ಮಾಡಿದ ಮಹಿಂದ್ರಾ, ಅಬ್ಬಬ್ಬಾ 17 Km ಮೈಲೇಜ್.
17 Km ಮೈಲೇಜ್ ಕೊಡುವ ಹೊಸ ಮಹಿಂದ್ರಾ ಕಾರಿಗೆ ಜನರು ಮೆಚ್ಚುಗೆ ಹೊರಹಾಕಿದ್ದಾರೆ.
Mahindra Bolero 2023: ಆನಂದ್ ಮಹಿಂದ್ರಾ (Anand Mahindra) ಪ್ರತಿಷ್ಠಿತ ಕಾರು ತಯಾರಕ ಕಂಪನಿ ಎಂದು ಹೇಳಬಹುದು. ಹೌದು ಈಗಾಗಲೇ ಅನೇಕ XUV ಮತ್ತು SUV ಕಾರುಗಳನ್ನ ಮಾರುಕಟ್ಟೆಗೆ ಪರಿಚಯ ಮಾಡಿರುವ ಮಹಿಂದ್ರಾ ಕಂಪನಿ (Mahindra Company) ತನ್ನ ಹೊಸ ಮಾದರಿಯ ಕಾರುಗಳನ್ನ ಈಗ ಮಾರುಕಟ್ಟೆಗೆ ಪರಿಚಯ ಮಾಡುತ್ತಿದೆ ಎಂದು ಹೇಳಬಹುದು. ಹೌದು ಹೊಸ ಹೊಸ ಮಾದರಿಯ ಕಾರುಗಳನ್ನ ಮಾರುಕಟ್ಟೆಗೆ ಪರಿಚಯ ಮಾಡಲು ಮುಂದಾಗಿರುವ ಮಹಿಂದ್ರಾ ಕಂಪನಿ ದೇಶದಲ್ಲಿ ತನ್ನ ಮಾರಾಟವನ್ನ ಹೆಚ್ಚಿಸಿಕೊಳ್ಳುತ್ತಿದೆ ಎಂದು ಹೇಳಬಹುದು.
ನಿಮಗೆಲ್ಲ ತಿಳಿದಿರುವ ಹಾಗೆ ಮಹಿಂದ್ರಾ ಕಂಪನಿಯ ಥಾರ್ (Mahindra Thar) ಮತ್ತು ಬಲೆರೊ (Mahindra Bolero) ಕಾರುಗಳು ದೇಶದಲ್ಲಿ ಹೆಚ್ಚು ಮಾರಾಟ ಆಗುತ್ತಿರುವ ಕಾರುಗಳು ಆಗಿದೆ. ಸದ್ಯ ಹೊಸ ಮಾದರಿಯ ಥಾರ್ ಮತ್ತು ಬಲೆರೊ ಕಾರ್ ಮಾರುಕಟ್ಟೆ ಅಪ್ಪಳಿಸಲು ಈಗ ಸಿದ್ಧವಾಗಿದೆ.
ಕೆಲವೇ ದಿನಗಳಲ್ಲಿ ಬರಲಿದೆ ಮಹಿಂದ್ರಾ ಥಾರ್ 5 ಡೋರ್
ಹೌದು ಜನರು ಸಾಕಷ್ಟು ಸಮಯಗಳಿಂದ ಕಾಯುತ್ತಿರುವ ಮಹಿಂದ್ರಾ ಥಾರ್ 5 ಡೋರ್ ಕಾರ್ ಇನ್ನೇನು ಕೆಲವೇ ದಿನಗಳಲ್ಲಿ ದೇಶದಲ್ಲಿ ಲಾಂಚ್ ಆಗಲಿದ್ದು ಜನರು ಖರೀದಿ ಮಾಡಬಹುದಾಗಿದೆ. ಇದರ ಈಗಾಗಲೇ ಕಂಪನಿ ಹೇಳಿಕೆಯನ್ನ ಕೂಡ ನೀಡಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಜನರ ಕೈಗೆ ಸಿಗುವ ಬೆಲೆಯಲ್ಲಿ ಮಹಿಂದ್ರಾ ಥಾರ್ 5 ಡೋರ್ ಕಾರ್ ಲಾಂಚ್ ಆಗಲಿದೆ ಎಂದು ಹೇಳಿದೆ.
ಹೊಸ ಮಾದರಿಯ ಮಹಿಂದ್ರಾ ಬಲೆರೊ ಕಾರಿಗೆ ಜನರು ಫಿದಾ
ಹೌದು ಮಹಿಂದ್ರಾ ಕಂಪನಿಯ ಸಾಕಷ್ಟು ಪ್ರತಿಷ್ಠಿತ ಕಾರುಗಳಲ್ಲಿ ಮಹಿಂದ್ರಾ ಬಲೆರೊ ಕೂಡ ಒಂದಾಗಿದೆ. ಸಾಕಷ್ಟು ವರಹಗಳಿಂದ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನ ಗಟ್ಟಿ ಮಾಡಿಕೊಂಡಿರುವ ಮಹಿಂದ್ರಾ ಬಲೆರೊ ಈಗ ಹೊಸ ಮಾದರಿಯಲ್ಲಿ ಮಾರುಕಟ್ಟೆಗೆ ಬಂದಿದ್ದು ಜನರ ಮೆಚ್ಚುಗೆಗೆ ಕಾರಣವಾಗಿದೆ ಎಂದು ಹೇಳಬಹುದು. ಸದ್ಯ ಮಹಿಂದ್ರಾ ಬಲೆರೊ ಕಾರಿಗ ಬೆಲೆ ಮತ್ತು ಫೀಚರ್ ಕಂಡು ಜನರು ಮೆಚ್ಚುಗೆಯನ್ನ ವ್ತಕ್ತಪಡಿಸಿದ್ದಾರೆ.
ಮಹಿಂದ್ರಾ ಬಲೆರೊ 2023 ರ ಬೆಲೆ, ಫೀಚರ್ ಮತ್ತು ಮೈಲೇಜ್
ಜನರ ಮೆಚ್ಚುಗೆಗೆ ಕಾರಣವಾಗಿರುವ ಮಹಿಂದ್ರ ಬಲೆರೊ 2023 ರ ಮಾದರಿಯ ಬೆಲೆ ಸುಮಾರು 12 ಲಕ್ಷ ರೂಪಾಯಿಯಿಂದ ಆರಂಭ ಆಗುತ್ತದೆ ಎಂದು ಅಂದಾಜು ಮಾಡಲಾಗಿದೆ. ಹಿಂದಿನ ಮಾದರಿಗೆ ಹೋಲಿಕೆ ಮಾಡಿದರೆ ಹೊಸ ಮಹಿಂದ್ರಾ ಬಲೆರೊ ಕಾರಿನಲ್ಲಿ ಅನೇಕ ಬದಲಾವಣೆ ನೋಡಬಹುದಾಗಿದೆ.
ವಿನ್ಯಾಸದಲ್ಲಿ ಬದಲಾವಣೆ, ಡೆಡ್ ಲೈಟ್, ಸೌಂಡ್ ಸಿಸ್ಟಮ್, ದೊಡ್ಡ ಡ್ಯಾಶ್ ಬೋರ್ಡ್ ಮತ್ತು ಸನ್ ರೂಫ್ ಅನ್ನು ನಾವು ನೋಡಬಹುದು. ಇನ್ನು ಮೈಲೇಜ್ ವಿಷಯಕ್ಕೆ ಬರುವುದಾದರೆ, ಹೊಸ ಮಹಿಂದ್ರಾ ಬಲೆರೊ ಸುಮಾರು 17 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಎಂದು ಹೇಳಲಾಗುತ್ತಿದೆ.