Mahindra: ದೊಡ್ಡ ಕುಟುಂಬಕ್ಕಾಗಿ 9 ಆಸನಗಳ SUV ಲಾಂಚ್ ಮಾಡಿದ ಮಹಿಂದ್ರಾ, ಕಡಿಮೆ ಬೆಲೆ 18 Km ಮೈಲೇಜ್.
ದೊಡ್ಡ ಕುಟುಂಬಕ್ಕಾಗಿ 9 ಆಸನಗಳ ಕಾರ್ ಲಾಂಚ್ ಮಾಡಿದ ಮಹಿಂದ್ರಾ.
Mahindra Bolero Neo SUV: ಈಗಿನ ಕಾಲದಲ್ಲಿ ಜನರು ಹೆಚ್ಚು ಕಂಫರ್ಟ್ ಆಗಿರುವ ಕಾರನ್ನ ಹುಡುಕುತ್ತಾರೆ. ಸದ್ಯ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾದ ಕಾರಣ ಜನರು CNG ಮತ್ತು ಎಲೆಕ್ಟ್ರಿಕ್ ಕಾರುಗಳ ಮೊರೆ ಹೋಗುತ್ತಿದ್ದಾರೆ. ಸದ್ಯ ಜನರು ತಮ್ಮ ಇಡೀ ಕುಟುಂಬ ಸಂಚಾರ ಮಾಡುವ ಹೆಚ್ಚು ಆಸನಗಳ ಕಾರ್ ಖರೀದಿ ಮಾಡಲು ಬಯಸುತ್ತಾರೆ.
ಹಲವು ಕಾರ್ ಕಂಪನಿಗಳು ದೊಡ್ಡ ಕುಟುಂಬಕ್ಕೆ 7 ಆಸನಗಳ ಕಾರುಗಳನ್ನ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ದೇಶದ ಪ್ರತಿಷ್ಠಿತ ಕಾರು ಕಂಪನಿ ಆಗಿರುವ ಆನಂದ್ ಮಹಿಂದ್ರಾ (Anand Mahindra) ದೇಶದ ಜನರಿಗಾಗಿ ಈಗಾಗಲೇ ಹಲವು ಬಗೆಯ ಕಾರುಗಳನ್ನ ಮಾರುಕಟ್ಟೆಗೆ ಲಾಂಚ್ ಮಾಡಿದ್ದು ಈಗ ಇನ್ನೊಂದು ಕಾರ್ ಲಾಂಚ್ ಮಾಡಲು ಸಿದ್ಧತೆಯನ್ನ ಮಾಡಿಕೊಳ್ಳುತ್ತಿದೆ.
ಬಿಡುಗಡೆಗೂ ಮುನ್ನವೇ ಜನರ ಮೆಚ್ಚುಗೆಗೆ ಕಾರಣವಾಗಿದೆ ಈ ಕಾರ್
ಹೌದು ದೊಡ್ಡ ಕುಟುಂಬಕ್ಕಾಗಿ ಈಗ ಆನಂದ್ ಮಹಿಂದ್ರಾ 9 ಆಸನಗಳ ಕಾರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆಯನ್ನ ಮಾಡಿಕೊಳ್ಳುತ್ತಿದೆ. ಹೌದು ಈ ಕಾರ್ 9 ಆಸನಗಳನ್ನ ಹೊಂದಿರುವ ಕಾರ್ ಆಗಿದ್ದು ಬೆಲೆ ಕೂಡ ಕಡಿಮೆ ಆಗಿರಲಿದೆ ಎಂದು ಹೇಳಲಾಗುತ್ತಿದೆ. ಇದೊಂದು SUV ಕಾರ್ ಆಗಿದ್ದು ಬಿಡುಗಡೆಯ ನಂತರ ದಾಖಲೆಯ ಬುಕಿಂಗ್ ಕಾಣುವುದರಲ್ಲಿ ಎರಡು ಮಾತಿಲ್ಲ.
9 ಆಸನಗಳ SUV ಕಾರ್ ಲಾಂಚ್ ಮಾಡಲು ತಯಾರಾದ ಮಹಿಂದ್ರಾ
ಹೌದು ಆನಂದ್ ಮಹಿಂದ್ರಾ ಈಗ 9 ಆಸನಗಳ ಹೊಸ SUV ಕಾರನ್ನ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಲಾಂಚ್ ಮಾಡಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಕಾರಿಗೆ ಮಹಿಂದ್ರಾ ಬಲೆರೊ ನಿಯೋ ಪ್ಲಸ್ ಎಂದು ಹೆಸರನ್ನ ಇಡಲಾಗಿದೆ. ಈ ಕಾರ್ ಚಾಲಕರಿಗೆ ಬಹಳ ಒಳ್ಳೆಯ ಅನುಭವ ನೀಡುವ ಕಾರ್ ಆಗಿರಲಿದೆ.
ಮಹಿಂದ್ರಾ ಬಲೆರೊ ನಿಯೋ ಬೆಲೆ ಮತ್ತು ಮೈಲೇಜ್
ಮೂಲಗಳಿಂದ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಮಹಿಂದ್ರಾ ಬಲೆರೊ ನಿಯೋ SUV ಕಾರಿನ ಆರಂಭಿಕ ಬೆಲೆ ಸುಮಾರು 10 ಲಕ್ಷ ರೂಪಾಯಿ ಎಂದು ಅಂದಾಜು ಮಾಡಲಾಗುತ್ತಿದೆ. ಸೆಪ್ಟೆಂಬರ್ ತಿಂಗಳಲ್ಲಿ ಈ ಕಾರ್ ಖರೀದಿಗೆ ಲಭ್ಯ ಎಂದು ಹೇಳಲಾಗುತ್ತಿದೆ. ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್ ಹೊಂದಿರುವ ಈ SUV ಸುಮಾರು 15-18 ಕಿಲೋ ಮೀಟರ್ ಮೈಲೇಜ್ ಕೊಡುತ್ತದೆ ಎಂದು ಹೇಳಲಾಗುತ್ತಿದೆ. ಅದೇ ರೀತಿಯಲ್ಲಿ ಹಲವು ಐಷಾರಾಮಿ ಕಾರಿನಲ್ಲಿ ಇರುವ ಫೀಚರ್ ಈ SUV ಅಲ್ಲಿ ಇರಲಿದೆ ಎಂದು ಕಂಪನಿ ಹೇಳಿದೆ.