Mahindra eKUV: ಶೀಘ್ರದಲ್ಲಿ ಭಾರತಕ್ಕೆ ಬರಲಿದೆ ಈ ವಿಶೇಷ ಕಾರು, ಗರಿಷ್ಟ ಮೈಲೇಜ್ ಮತ್ತು ಕಡಿಮೆ ಬೆಲೆ.
ಕಡಿಮೆ ಬೆಲೆಗೆ ಹೆಚ್ಚು ಮೈಲೇಜ್ ನೀಡುವ ಹೊಸ ಎಲೆಕ್ಟ್ರಿಕ್ ಕಾರ್ ಶೀಘ್ರದಲ್ಲಿ ಮಾರುಕಟ್ಟೆಗೆ ಬರಲಿದೆ.
Mahindra eKUV EV: ದೇಶಿಯ ಮಾರುಕಟ್ಟೆಯಲ್ಲಿ ಈಗಾಗಲೇ ಟಾಟಾ ಮೋಟರ್ಸ್, ಮಹಿಂದ್ರಾ, ಹ್ಯುಂಡೈ ಸೇರಿದಂತೆ ಇನ್ನಿತರ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳು ವಿಭಿನ್ನ ಮಾದರಿಯ ಎಲೆಕ್ಟ್ರಿಕ್ ಕಾರ್ ಗಳನ್ನೂ ಬಿಡುಗಡೆ ಮಾಡಿವೆ. ಇತ್ತೀಚಿಗೆ ಕಚ್ಚಾ ತೈಲಗಳ ಬೆಲೆ ಏರಿಕೆ ಆದ ಕಾರಣ ಜನರು ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳ ಖರೀದಿಯತ್ತ ಗಮನ ಹರಿಸುತ್ತಿದ್ದಾರೆ.
ಮಹಿಂದ್ರಾ eKUV EV ಎಲೆಕ್ಟ್ರಿಕ್ ಕಾರ್
ಇದೀಗ ಮಹಿಂದ್ರಾ (Mahindra) ಕಂಪನಿಯು ಹೊಚ್ಚ ಹೊಸ ಎಲೆಕ್ಟ್ರಿಕ್ ಕಾರ್ ಅನ್ನು ಪರಿಚಯಿಸಿದೆ. ಮಾರುಕಟ್ಟೆಯಲ್ಲಿ ಮಹಿಂದ್ರಾ eKUV EV ಎಲೆಕ್ಟ್ರಿಕ್ ಕಾರ್ ಬಿಡುಗಡೆಗೆ ಸಜ್ಜಾಗಿದೆ. ಈ ಕಾರ್ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ.
ಮಹಿಂದ್ರಾ eKUV EV ಎಲೆಕ್ಟ್ರಿಕ್ ಕಾರ್ ಮುಂದಿನ ವರ್ಷದಲ್ಲಿ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಈ ಮಹಿಂದ್ರಾ eKUV EV ಎಲೆಕ್ಟ್ರಿಕ್ ಕಾರ್ ಆಟೋ ಎಕ್ಸ್ ಪೋ 2023 ರಲ್ಲಿ ಪ್ರದರ್ಶಿಸಲಾಗಿದೆ. ಇನ್ನು ಮಹಿಂದ್ರಾ eKUV EV ಎಲೆಕ್ಟ್ರಿಕ್ ಕಾರ್ ನ ಬಗ್ಗೆ ಕಂಪನಿಯು ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಈ ಕಾರ್ ನ ಬೆಲೆ 8.25 ಲಕ್ಷದಿಂದ 10 ಲಕ್ಷ ಇರಬಹುದು ಎಂದು ಅಂದಾಜಿಸಲಾಗಿದೆ.
ಮಾರುತಿ ಸುಜುಕಿ ಇವಿಎಕ್ಸ್
ಮಾರುತಿ ಸುಜುಕಿ ಇದೀಗ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರ್ ಆದ ಮಾರುತಿ ಸುಜುಕಿ ಇವಿಎಕ್ಸ್ ಯನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಮಾರುತಿ ತನ್ನ ವ್ಯಾಗನ್ ಆರ್ ಎಲೆಕ್ಟ್ರಿಕ್‌ನ ಎಲೆಕ್ಟ್ರಿಕ್ ರೂಪಾಂತರವನ್ನು ಪ್ರಾರಂಭಿಸಲು ಪರಿಗಣಿಸುತ್ತಿದೆ.
ಇನ್ನು ಟಾಟಾ, ಹ್ಯುಂಡೈ, ನಿಸ್ಸಾನ್, ರೆನಾಲ್ಟ್ ನಂತಹ ಹಲವು ಪ್ರಮುಖ ಕಂಪನಿಗಳು 2025 ರ ವೇಳೆಗೆ ತಮ್ಮ ಹೊಸ ಎಲೆಕ್ಟ್ರಿಕ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸಲಿದೆ.ಈ ವೇಳೆ ಮಾರುತಿ ಸುಜುಕಿ ಕಂಪನಿಯ ಮಾರುತಿ ಸುಜುಕಿ ಇವಿಎಕ್ಸ್ ಕೂಡ ಬಿಡುಗಡೆಗೊಂಡು ಸಂಚಲನ ಮೂಡಿಸಲಿದೆ.