Mahindra Global: ಇನ್ನೊಂದು ಶಕ್ತಿಶಾಲಿ ಪಿಕಪ್ ಬಿಡುಗಡೆ ಮಾಡಿದ ಮಹಿಂದ್ರಾ, ಕಡಿಮೆ ಬೆಲೆ ಮತ್ತು 20 Km ಮೈಲೇಜ್.
ಮಹಿಂದ್ರಾ ತನ್ನ ನೂತನ ಪಿಕಪ್ 'ಮಹಿಂದ್ರ ಗ್ಲೋಬಲ್' ಅನ್ನು ಮಾರುಕಟ್ಟೆಗೆ ಪರಿಚಯಿಸಲು ಸಂಪೂರ್ಣ ಸಿದ್ಧತೆ ನಡೆಸುತ್ತಿದೆ.
Mahindra Global Pickup: ದೇಶದಲ್ಲಿ ವಿವಿಧ ಆಟೋಮೊಬೈಲ್ ಕಂಪನಿಗೂ ಹೊಸ ಹೊಸ ಮಾದರಿಯ ಕಾರ್, ಬೈಕ್ ಗಳನ್ನೂ ಬಿಡುಗಡೆ ಮಾಡುತ್ತಿವೆ. ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿರುವ ರೂಪಾಂತರಗಳು ಹೆಚ್ಚು ಪರಿಚಯವಾಗುತ್ತಿದೆ. ಇನ್ನು ಕಾರ್, ಬೈಕ್ ಗಳ ಜೊತೆಗೆ ಕೆಲವು ಕಂಪನಿಗಳು ಪಿಕಪ್ ಗಳನ್ನೂ ಕೂಡ ಪರಿಚಯಿಸುತ್ತಿವೆ. ಈಗಾಗಲೇ ಮಾರುಕಟ್ಟೆಯ್ಲಲಿ ಟಾಟಾ, ಟೊಯೋಟಾ ಕಂಪನಿಗಳು ವಿವಿಧ ವಿನ್ಯಾಸದ ಪಿಕಪ್ ಗಳನ್ನೂ ಪರಿಚಯಿಸಿವೆ.
ಇತರ ಕಂಪನಿಗಳು ಹೊಸ ಪಿಕಪ್ (Pickup) ಗಳನ್ನು ಪರಿಚಯಿಸುತ್ತಿದ್ದಂತೆ ದೇಶದ ಜನಪ್ರಿಯ ವಾಹನ ತಯಾರಕ ಕಂಪನಿಯಾಗಿರುವ ಮಹಿಂದ್ರ (Mahindra) ಕೂಡ ತನ್ನ ನೂತನ ಮಾದರಿಯ ಪಿಕಪ್ ಅನ್ನು ಪರಿಚಯಿಸುತ್ತದೆ. ಇದೀಗ ಮಹಿಂದ್ರಾ ಎಲ್ಲಾ ಮಾದರಿಯ ಪಿಕಪ್ ಗಳಿಗೆ ಠಕ್ಕರ್ ನೀಡಲು ವಿಭಿನ್ನ ವಿನ್ಯಾಸದ ಪಿಕಪ್ ಅನ್ನು ಪರಿಚಯಿಸಿದೆ. ಈ ಮಹಿಂದ್ರಾ ಹೊಸ ಪಿಕಪ್ ನಲ್ಲಿ ಅಳವಡಿಸಲಾದ ಸುಧಾರಿತ ಫೀಚರ್ ಗಳ ಬಗ್ಗೆ ಮಾಹಿತಿ ಲಭಿಸಿದೆ.
ನೂತನ ಮಾದರಿಯ ಮಹಿಂದ್ರ ಗ್ಲೋಬಲ್
ಮಹಿಂದ್ರಾ ಹೊಚ್ಚ ಹೊಸ ಪಿಕಪ್ ಮಾರುಕಟ್ಟೆಯಲ್ಲಿ ಇಸೂಝ ಇಕ್ರಾಸ್ ಮತ್ತು ಟೊಯೋಟಾ ಹಿಲಕ್ಸ್ ಬ್ರಾಂಡ್ ಗಳಿಗೆ ಬಾರಿ ಪೈಪೋಟಿ ನೀಡಲಿದೆ. ಮಹಿಂದ್ರಾ ತನ್ನ ನೂತನ ಪಿಕಪ್ ‘ಮಹಿಂದ್ರ ಗ್ಲೋಬಲ್’ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಸಂಪೂರ್ಣ ಸಿದ್ಧತೆ ನಡೆಸುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಮಹಿಂದ್ರಾ ಗ್ಲೋಬಲ್ ಪಿಕಲ್ ಹೊಸ ಏಲ್ ಎಬ್ಬಿಸಲಿದೆ. ಇನ್ನು ಯುರೋಪ್ ರಾಷ್ಟ್ರಗಳಲ್ಲಿ ಇದೆ ಮಾದರಿಯ ಪಿಕಪ್ ಎಲೆಕ್ಟ್ರಿಕ್ ರೂಪಾಂತರದ್ಲಲಿ ಅಬ್ಬರಿಸಲಿದೆ.
ಮಹಿಂದ್ರ ಗ್ಲೋಬಲ್ ಪಿಕಪ್ ಫೀಚರ್
ಮಹಿಂದ್ರ ಗ್ಲೋಬಲ್ ಪಿಕಪ್ ಲುಕ್ ಸರಿಸುಮಾರು ಸ್ಕಾರ್ಪಿಯೋ N ವಾಹನವನ್ನೇ ಹೊಳಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಇನ್ನು GNCAP ಮತ್ತು ಲ್ಯಾಟಿನ್ NCAP ಮಾದರಿಯ ಜೊತೆ ಫೈವ್ ಸ್ಟಾರ್ ರೇಟಿಂಗ್ ಪಡೆಯಲು ಮಹಿಂದ್ರಾ ಈ ಪಿಕಪ್ ನಲ್ಲಿ ನೂತನ ಸುಧಾರಿತ ಫೀಚರ್ ಅನ್ನು ಅಳವಡಿಸಿದೆ. ಈ ಪಿಕಪ್ ನ ವಿಶೇಷವೆಂದರೆ ಇದರಲ್ಲಿ ಆಡ್ವಾನ್ಸಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
ಮಹಿಂದ್ರ ಗ್ಲೋಬಲ್ ಪಿಕಪ್ ಬೆಲೆ
ಈ ಪಿಕಪ್ ನಾಲ್ಕು ಡ್ರೈಮ್ ಮೋಡ್, ಅಂದರೆ, ಜಿಪ್, ಝುಪ್, ಜೂಮ್ ಮತ್ತು ಕ್ಲಸ್ಟರ್ ಮೋಡ್ ಗಳನ್ನು ಹೊಂದಿರಲಿದೆ. ಇನ್ನು ಮಹಿಂದ್ರ ಗ್ಲೋಬಲ್ ಪಿಕಪ್ ನಲ್ಲಿ 2.2 ಲೀಟರ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. 6 ಸ್ಪೀಡ್ ಮ್ಯಾನ್ಯೂವಲ್ ಮತ್ತು 6 ಸ್ಪೀಡ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಬಿಡುಗಡೆಯಾಗುವ ಸಾದ್ಯತೆ ಇದೆ ಎನ್ನುವ ಬಗ್ಗೆ ವರದಿಯಾಗಿದೆ.
ಇನ್ನು ಈ ಗ್ಲೋಬಲ್ ಪಿಕಪ್ ಗೆ 12 ಲಕ್ಷದಿಂದ 22 ಲಕ್ಷ ಬೆಲೆಯನ್ನು ಕಂಪನಿಯು ನಿಗದಿಪಡಿಸಿದೆ. ಇನ್ನು ಕಂಪನಿ ನೀಡಿರುವ ಮಾಹಿತಿಯ ಪ್ರಕಾರ ಹೊಸ ವಿನ್ಯಾಸದ ಪಿಕಪ್ ಸುಮಾರು 18 ರಿಂಡ್ 20 ಕಿಲೋಮೀಟರ್ ಮೈಲೇಜ್ ನೀಡಲಿದೆ.