Mahindra Jeeto: 1 ಲೀಟರ್ ಗೆ 35 Km ಮೈಲೇಜ್, ಕಡಿಮೆ ಬೆಲೆಗೆ ಬಡವರಿಗಾಗಿ ಶಕ್ತಿಶಾಲಿ Jeeto ಲಾಂಚ್ ಮಾಡಿದ ಮಹಿಂದ್ರಾ.
ಮಹಿಂದ್ರಾ ಜಿತೋ ಸ್ಟ್ರಾಂಗ್ ಎಷ್ಟು ಮೈಲೇಜ್ ನೀಡಲಿದೆ..?
Mahindra Jeeto Strong: ದೇಶದ ಪ್ರತಿಷ್ಠಿತ ಕಾರ್ ತಯಾರಕ ಕಂಪನಿಯಾದ Mahindra ತನ್ನ ಹೊಸ ಹೊಸ ಮಾದರಿಯ ಕಾರ್ ಗಳನ್ನೂ ವಿಭಿನ್ನ ರೂಪಾಂತರದಲ್ಲಿ ಬಿಡುಗಡೆ ಮಾಡುತ್ತಿದೆ. ಮಹಿಂದ್ರಾ ಕಂಪನಿಯ ಕಾರ್ ಗಳು ಗ್ರಾಹಕರಿಗೆ ಹೆಚ್ಚಿನ ಮೈಲೇಜ್ ಜೊತೆಗೆ ಬಜೆಟ್ ಬೆಲೆಯಲ್ಲಿ ಲಭ್ಯವಾಗುತ್ತದೆ.
ಮಾರುಕಟ್ಟೆಯಲ್ಲಿ ಮಹಿಂದ್ರಾ ಈಗಾಗಲೇ ಹೆಚ್ಚಿನ ಕಾರ್ ಗಳನ್ನೂ ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ಆಗ್ರಾ ಸ್ಥಾನ ಪಡೆದುಕೊಂಡಿದೆ ಎನ್ನಬಹುದು. ಇದೀಗ ಮಹಿಂದ್ರಾ ಕಂಪನಿ ಹೊಸ ವಿನ್ಯಾಸದೊಂದಿಗೆ ಸರಕು ಸಾಗಾಣಿಕೆಯ ವಾಹನವನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಮಹಿಂದ್ರಾ ಜಿತೋ ಸ್ಟ್ರಾಂಗ್ (Mahindra Jeeto Strong)
ಹೆಚ್ಚಿನ ಪೇಲೋಡ್ ಸಾಮರ್ಥ್ಯದೊಂದಿಗೆ ಇದೀಗ ಮಹಿಂದ್ರಾ ತನ್ನ ನೂತನ ವಿನ್ಯಾಸದ ಮಹಿಂದ್ರಾ ಜಿತೋ ಸ್ಟ್ರಾಂಗ್ ಅನ್ನು ಪರಿಚಯಿಸಿದೆ. ಡೀಸೆಲ್ ಮತ್ತು CNG ರೂಪಾಂತರದಲ್ಲಿ ನೂತನ ಮಹಿಂದ್ರಾ ಜಿತೋ ಸ್ಟ್ರಾಂಗ್ ಲಭ್ಯವಿದೆ. ಇನ್ನು ಮಹಿಂದ್ರಾ ಜಿತೋ ಸ್ಟ್ರಾಂಗ್ ಡೀಸೆಲ್ ರೂಪಾಂತರಕ್ಕೆ 5.28 ಲಕ್ಶ ಎಕ್ಸ್ ಶೋ ರೂಮ್ ಬೆಲೆಯಾಗಿದೆ. ಇನ್ನು ಮಹಿಂದ್ರಾ ಜಿತೋ ಸ್ಟ್ರಾಂಗ್ CNG ರೂಪಾಂತರಕ್ಕೆ ಎಕ್ಸ್ ಶೋ ರೊಮ್ಮ್ ಬೆಲೆ 5.50 ಲಕ್ಷ ರೂ. ಆಗಿದೆ.
ಮಹಿಂದ್ರಾ ಜಿತೋ ಸ್ಟ್ರಾಂಗ್ ಎಷ್ಟು ಮೈಲೇಜ್ ನೀಡಲಿದೆ..?
ಸದ್ಯ ಜಿತೋ ಪ್ಲಸ್ ವಾಹನದ ನಂತರ ಬಿಡುಗಡೆಗೊಂಡಿರುವ ಮಹಿಂದ್ರಾ ಜಿತೋ ಸ್ಟ್ರಾಂಗ್ ಜಿತೋ ಪ್ಲಸ್ ಗಿಂತಲೂ 100 ಕೆಜಿ ಹೆಚ್ಚುವರಿ ಪೇಲೋಡ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಮಹಿಂದ್ರಾ ಜಿತೋ ಸ್ಟ್ರಾಂಗ್ ಡೀಸೆಲ್ ರೂಪಾಂತರ 815KG ಹಾಗೂ ಮಹಿಂದ್ರಾ ಜಿತೋ ಸ್ಟ್ರಾಂಗ್ CNG ರೂಪಾಂತರ 750KG ಪೇಲೋಡ್ ಸಾಮರ್ಥ್ಯ ಹೊಂದಿರುವುದಾಗಿ ಕಂಪನಿ ಹೇಳಿಕೊಂಡಿದೆ. ಇನ್ನು ಉತ್ತಮ ಎಂಜಿನ್ ಸಾಮರ್ಥ್ಯವನ್ನ ಹೊಂದಿದ್ದು, ಡೀಸೆಲ್ ರೂಪಂತದಲ್ಲಿ 32 ಕಿಲೋಮೀಟರ್ ಹಾಗೂ ಸಿಎನ್ ಜಿ ರೂಪಾಂತರದಲ್ಲಿ 35 ಕಿಲೋಮೀಟರ್ ಮೈಲೇಜ್ ನ್ನು ನೀಡುತ್ತದೆ.
10 ಲಕ್ಷ ರೂ. ಅಪಘಾತ ವಿಮೆ ಲಭ್ಯ
ಇನ್ನು ಮಹಿಂದ್ರಾ ಜಿತೋ ಸ್ಟ್ರಾಂಗ್ ಸಬ್- 2 ಟನ್ ICE ಕಾರ್ಗೋ 4-ವೀಲರ್ ನಲ್ಲಿ ಮೊದಲನೆಯದಾಗಿದೆ. ಎಲೆಕ್ಟ್ರಿಕ್ ವ್ಯಾಕ್ಯೂಮ್ ಪಂಪ್-ಅಸಿಸ್ಟೆಡ್ ಬ್ರೇಕಿಂಗ್, ಹೊಸ ಡಿಜಿಟಲ್ ಕ್ಲಸ್ಟರ್ ಮತ್ತು ಸುಧಾರಿತ ಸಸ್ಪೆನ್ಷನ್ ವೈಶಿಷ್ಟ್ಯವನ್ನು ಒಳಗೊಂಡಿದೆ. ಈ ವಾಹನ ಹೊಂದಿರುವ ಚಾಲಕನಿಗೆ 10 ಲಕ್ಷ ರೂಪಾಯಿ ಮೌಲ್ಯದ ಉಚಿತ ಅಪಘಾತ ವಿಮೆಯನ್ನೂ ಮಹೀಂದ್ರಾ ಒದಗಿಸಲಿದೆ. ಇದರ ಜೊತೆಗೆ ಮಹೀಂದ್ರಾ 3 ವರ್ಷ ಅಥವಾ 72,000 ಕಿಮೀ ವಾರಂಟಿಯನ್ನು ಸಹ ಒದಗಿಸಲಿದೆ.