Mahindra EV: ಕಡಿಮೆ ಬೆಲೆ 350 Km ಮೈಲೇಜ್, Comet ಗೆ ಪೈಪೋಟಿ ಕೊಡಲು ಬಂತು ಮಹಿಂದ್ರಾ ಚಿಕ್ಕ ಕಾರ್.
ಕೇವಲ ಒಂದೇ ಚಾರ್ಜ್ ನಲ್ಲಿ 350 km ಮೈಲೇಜ್ ನೀಡಲಿದೆ ಮಹಿಂದ್ರಾ SUV.
Mahindra KUV 100 EV: ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ (Electric Vehicle) ಮೇಲಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬೇಡಿಕೆಗೆ ಅನುಗುಣವಾಗಿ ವಿವಿಧ ಕಾರ್ ತಯಾರಕ ಕಂಪನಿಗಳು ಹೊಸ ಹೊಸ ಎಲೆಕ್ಟ್ರಿಕ್ ರೂಪಾಂತರವನ್ನು ಬಿಡುಗಡೆ ಮಾಡುತ್ತಿವೆ.
ದೇಶಿಯ ಮಾರುಕಟ್ಟೆಯಲ್ಲಿ ಈಗಾಗಲೇ ಟಾಟಾ ಮೋಟರ್ಸ್, ಮಹಿಂದ್ರಾ, ಹ್ಯುಂಡೈ ಸೇರಿದಂತೆ ಇನ್ನಿತರ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳು ವಿಭಿನ್ನ ಮಾದರಿಯ ಎಲೆಕ್ಟ್ರಿಕ್ ಕಾರ್ ಗಳನ್ನೂ ಬಿಡುಗಡೆ ಮಾಡಿವೆ.
ಇತ್ತೀಚಿಗೆ ಕಚ್ಚಾ ತೈಲಗಳ ಬೆಲೆ ಏರಿಕೆ ಆದ ಕಾರಣ ಜನರು ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳ ಖರೀದಿಯತ್ತ ಗಮನ ಹರಿಸುತ್ತಿದ್ದಾರೆ. ಇದೀಗ ಜನಪ್ರಿಯ ಕಂಪನಿಯಾದ ಮಹಿಂದ್ರಾ (Mahindra) ತನ್ನ ಹೊಸ ಎಲೆಕ್ಟ್ರಿಕ್ ರೂಪಾಂತರವನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ.
ಮಹಿಂದ್ರಾ eKUV EV ಎಲೆಕ್ಟ್ರಿಕ್ ಕಾರ್
ಇದೀಗ ಮಹಿಂದ್ರಾ ಕಂಪನಿಯು ಹೊಚ್ಚ ಹೊಸ ಎಲೆಕ್ಟ್ರಿಕ್ ಕಾರ್ ಅನ್ನು ಪರಿಚಯಿಸಿದೆ. ಮಾರುಕಟ್ಟೆಯಲ್ಲಿ ಮಹಿಂದ್ರಾ eKUV EV ಎಲೆಕ್ಟ್ರಿಕ್ ಕಾರ್ ಬಿಡುಗಡೆಗೆ ಸಜ್ಜಾಗಿದೆ. ಈ ಕಾರ್ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ. ಮಹಿಂದ್ರಾ eKUV EV ಎಲೆಕ್ಟ್ರಿಕ್ ಕಾರ್ ಮುಂದಿನ ವರ್ಷದಲ್ಲಿ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಈ ಮಹಿಂದ್ರಾ eKUV EV ಎಲೆಕ್ಟ್ರಿಕ್ ಕಾರ್ ಆಟೋ ಎಕ್ಸ್ ಪೋ 2023 ರಲ್ಲಿ ಪ್ರದರ್ಶಿಸಲಾಗಿದೆ.
ಕೇವಲ ಒಂದೇ ಚಾರ್ಜ್ ನಲ್ಲಿ 350 km ಮೈಲೇಜ್ ನೀಡಲಿದೆ ಮಹಿಂದ್ರಾ KUV 100 EV
ಕಂಪನಿಯು ಮಹಿಂದ್ರಾ KUV 100 EV ಎಲೆಕ್ಟ್ರಿಕ್ ಎಸ್ ಯುವಿನಲ್ಲಿ ಶಕ್ತಿಯುತ ಎಂಜಿನ್ ಅನ್ನು ಅಳವಡಿಸಿದೆ.ಇದರಲ್ಲಿ 26 .4kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅನ್ನು ಪಡೆಯಲಿದೆ.
ಇ ಕಾರ್ ಸಾಮಾನ್ಯ ಚಾರ್ಜರ್ ನ ಮೂಲಕ 6 ಗಂಟೆಗಳಲ್ಲಿ ಹಾಗೂ ಫಾಸ್ಟ್ ಚಾರ್ಜರ್ ನ ಮೂಲಕ ಕೇವಲ 3 ಗಂಟೆಗಲ್ಲಿ ಸಂಪೂರ್ಣ ಚಾರ್ಜ್ ಆಗಲಿದೆ. ಇನ್ನು ಇ ಎಲೆಕ್ಟ್ರಿಕ್ ಕಾರ್ ಒಂದು ಸಂಪೂರ್ಣ ಚಾರ್ಜ್ ನಲ್ಲಿ 350 ಕಿಲೋಮೀಟರ್ ಮೈಲೇಜ್ ನೀಡಲಿದೆ.
ಮಹಿಂದ್ರಾ KUV 100 EV ವಿಶೇಷತೆ
ಸಿಂಗಲ್ ಪೇನ್ ಸನ್ ರೂಫ್ ಜೊತೆಗೆ, ಇದು ವೈರ್‌ಲೆಸ್ ಮೊಬೈಲ್ ಚಾರ್ಜಿಂಗ್, ಪ್ರೀಮಿಯಂ ಆಡಿಯೊ ಸಿಸ್ಟಮ್, ಏರ್‌ಬ್ಯಾಗ್‌ಗಳು, ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಸೇರಿದಂತೆ ಇನ್ನಿತರ ಹತ್ತು ಹಲವು ಫೀಚರ್ ಗಳನ್ನೂ ಗ್ರಾಹಕರಿಗೆ ನೀಡಲಿದೆ.
ಇನ್ನು ಚಾಲಕರ ಸುರಕ್ಷತೆಗಾಗಿ ಎರಡು ಟೈರ್ ಗಳಲ್ಲಿ ಡಿಸ್ಕ್ ಬ್ರೇಕ್ ಗಳನ್ನೂ ಅಳವಡಿಸಲಾಗಿದೆ. ಇನ್ನು ಈ ಮಹಿಂದ್ರಾ KUV 100 EV ಮಾರುಕಟ್ಟೆಯಲ್ಲಿ 9.10 ಲಕ್ಷ ನಿಗದಿಪಡಿಸಲಾಗಿದೆ ಎನ್ನುವ ಬಗ್ಗೆ ವರದಿಯಾಗಿದೆ.