Mahindra Oja: ಬಡವರಿಗಾಗಿ ಕಡಿಮೆ ಬೆಲೆಗೆ ಟ್ರಾಕ್ಟರ್ ಲಾಂಚ್ ಮಾಡಿದ ಮಹಿಂದ್ರಾ, ಸರ್ಕಾರದಿಂದ ಸಬ್ಸಿಡಿ ಕೂಡ ಲಭ್ಯ.
ಗ್ರಾಹಕರಿಗೆ ಬಜೆಟ್ ಬೆಲೆಯಲ್ಲಿ ಈ ಮಹಿಂದ್ರಾ ಓಜಾ ಟ್ರಾಕ್ಟರ್ ಲಭ್ಯವಾಗಲಿದೆ.
Mahindra Oja Tractor: ದೇಶಿಯ ಮಾರುಕಟ್ಟೆಯ್ಲಲಿ ಮಹಿಂದ್ರಾ (Mahindra) ಹೆಚ್ಚು ಜನಪ್ರಿಯ ಕಂಪನಿಯಾಗಿದೆ. ಮಹಿಂದ್ರಾ ಮಾರುಕಟ್ಟೆಯಲ್ಲಿ ತನ್ನ ಹೊಸ ಹೊಸ ರೂಪಾಂತರವನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತಲೇ ಇರುತ್ತದೆ.
ಮಹಿಂದ್ರಾ ಕಂಪನಿಯ ವಾಹನಗಳು ಅತಿ ಹೆಚ್ಚು ಮೈಲೇಜ್ ನೀಡುತ್ತದೆ ಎಂದರೆ ತಪ್ಪಾಗಲಾರದು. ಮಹಿಂದ್ರಾ ತನ್ನ ಗ್ರಾಹಕರಿಗಾಗಿ ವಿಭಿನ್ನ ವಿನ್ಯಾಸದ ಕಾರ್ ಗಳನ್ನೂ ಪರಿಚಯಿಸುತ್ತಲೇ ಇರುತ್ತದೆ. ಇತ್ತೀಚೆಗಷ್ಟೇ ಮಹಿಂದ್ರಾ KUV100 NXT ಕಾರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿತ್ತು.
ಮಹಿಂದ್ರಾ ಹೊಸ ಟ್ರಾಕ್ಟರ್ ಬಿಡುಗಡೆ
ಈ ಕಾರ್ ಮಾರುಕಟ್ಟೆಯಲ್ಲಿ 7 ರಿಂದ 8 ಲಕ್ಷ ಬೆಲೆ ನಿಗದಿಪಡಿಸಲಾಗಿದೆ. ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ಈ KUV100 NXT ಕಾರ್ ಭರ್ಜರಿ ಬುಕಿಂಗ್ ಕಂಡುಕೊಂಡಿದೆ. ಮಹಿಂದ್ರಾ ಕಾರ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುತ್ತಿರುವ ಹೊತ್ತಿನಲ್ಲೇ ಇದೀಗ ಮಹಿಂದ್ರಾ ಹೊಸ ಟ್ರಾಕ್ಟರ್ ಅನಾವರಗೊಳಿಸಿದೆ. ಅಧಿಕ ಕಾರ್ಯಕ್ಷಮತೆಯ ಮಹಿಂದ್ರಾ ‘ಓಜಾ’ ಟ್ರಾಕ್ಟರ್ ಅನ್ನು ಕಂಪನಿಯು ಜಾಗತಿಕ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಮಹಿಂದ್ರಾ ಟ್ರಾಕ್ಟರ್ ಜೊತೆಗೆ ಬ್ಯಾಟರಿ ಚಾಲಿತ ಥಾರ್ ಹಾಗೂ ಪಿಕಪ್ ಅನ್ನು ಬಿಡುಗಡೆಗೊಳಿಸಿದೆ.
ಅಧಿಕ ಕಾರ್ಯಕ್ಷಮತೆಯ ಮಹಿಂದ್ರಾ ಓಜಾ ಟ್ರಾಕ್ಟರ್ (Mahindra Oja)
ಈ ಮಹಿಂದ್ರಾ ಓಜಾ ಟ್ರಾಕ್ಟರ್ ಅನ್ನು ಜನಪ್ರಿಯ ಸಂಗೀತಗಾರ ಎ. ಆರ್ ರೆಹಮಾನ್ ಅವರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು. ಈ ಟ್ರಾಕ್ಟರ್ ನ ವಿಶೇಷವೆಂದರೆ ಎ. ಆರ್ ರೆಹಮಾನ್ ಅವರ ಹಾಡುಗಳು ಈ ಟ್ರಾಕ್ಟರ್ ನಲ್ಲಿ ಪ್ರಸಾರವಾಗುವಂತೆ ಕಂಪನಿ ಒಪ್ಪಂದ ಮಾಡಿಕೊಂಡಿದೆ.
ಈ ನೂತನ ಟ್ರಾಕ್ಟರ್ ಏಳು ಮಾದರಿಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಗ್ರಾಹಕರಿಗೆ ಬಜೆಟ್ ಬೆಲೆಯಲ್ಲಿ ಈ ಮಹಿಂದ್ರಾ ಓಜಾ ಟ್ರಾಕ್ಟರ್ ಲಭ್ಯವಾಗಲಿದೆ. ಇನ್ನು ಮುಂದಿನ ದಿನಗಳಲ್ಲಿ ಸರ್ಕಾರ ಬಡವರು ಖರೀದಿ ಮಾಡುವ ಟ್ರಾಕ್ಟರ್ ಮೇಲೆ ಸಬ್ಸಿಡಿ ಕೂಡ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಸದ್ಯದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಮಹಿಂದ್ರಾ ಓಜಾ ಟ್ರಾಕ್ಟರ್
ರೈತರಿಗೆ ಟ್ರಾಕ್ಟರ್ ಗಳು ಅಗತ್ಯವಾಗಿದೆ. ಕೃಷಿ ಉಳುಮೆಗೆ ಟ್ರಾಕ್ಟರ್ ಹೆಚ್ಚಿನ ಸಹಾಯ ಮಾಡುತ್ತದೆ. ರೈತರ ಅಗತ್ಯವನ್ನು ಪೂರೈಸುವ ದೃಷ್ಟಿಯಿಂದ ಮಹಿಂದ್ರಾ ಈ ನೂತನ ಓಜಾ ಟ್ರಾಕ್ಟರ್ ಅನ್ನು ಸಿದ್ಧಪಡಿಸಿದೆ. ಈ ಮಹಿಂದ್ರಾ ಓಜಾ ಟ್ರಾಕ್ಟರ್ ಗೆ ಸುಮಾರು 5.64 ಲಕ್ಷದಿಂದ 7.35 ಲಕ್ಷವನ್ನು ಕಂಪನಿಯು ನಿಗದಿಪಡಿಸಿದೆ. ಹೊಸಾ ಥಾರ್ ಇವಿ ಮಾದರಿಯಲ್ಲಿ ಈ ನೂತನ ಮಹಿಂದ್ರಾ ಓಜಾ ಟ್ರಾಕ್ಟರ್ ಅನ್ನು ಅಭಿವೃದ್ದಿಪಡಿಸಲಾಗಿದೆ.