Ads By Google

Mahindra Truck: ಬಾಡಿಗೆ ಬಿಸಿನೆಸ್ ಮಾಡುವವರಿಗೆ ಮಹಿಂದ್ರದಿಂದ ಬಂತು ಅಗ್ಗದ ಟ್ರಕ್, ಕಡಿಮೆ ಬೆಲೆ ಮತ್ತು ಆಕರ್ಷಕ ಮೈಲೇಜ್

Mahindra Supro Profit Truck Excel Series

Image Credit: Original Source

Ads By Google

Mahindra Supro Profit Truck Excel Series: ದೇಶಿಯ ಮಾರುಕಟ್ಟೆಯಲ್ಲಿ MAHINDRA ಹೊಸ ಹೊಸ ಮಾದರಿಯ ವಾಹನಗಳನ್ನು ಪರಿಚಯಿಸುತ್ತ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಿವೆ. ಜನರು ಹೆಚ್ಚಾಗಿ ಮಹಿಂದ್ರಾ ಕಂಪನಿಯ ವಾಹನಗಳ ಖರೀದಿಗೆ ಮುಂದಾಗುತ್ತಿದ್ದಾರೆ. ಇನ್ನು ಕಂಪನಿಯು ಹೊಸ ಮಾದರಿಯ SUV ಗಳ ಯೋಜನೆಯ ಒಂದಿಷ್ಟು ವಾಣಿಜ್ಯ ವಾಹನಗಳನ್ನು ಕೂಡ ಬಿಡುಗಡೆ ಮಾಡುತ್ತಿರುತ್ತದೆ. ಸದ್ಯ ಮಹಿಂದ್ರಾ ಕಂಪನಿ ಹೊಸತಾಗಿ ಇದೀಗ ಲಘು ವಾಣಿಜ್ಯ ವಾಹನವನ್ನು ಪರಿಚಯಿಸಿದೆ. ಈ ವಾಹನದ ಬಗ್ಗೆ ಮಾಹಿತಿ ತಿಳಿಯೋಣ.

Image Credit: Bwautoworld

ಭರ್ಜರಿ ಮೈಲೇಜ್ ನೀಡುವ ಮಹಿಂದ್ರಾ ನೂತನ ಮಾದರಿಯ ಮಾರುಕಟ್ಟೆ ಬೆಲೆ ಎಷ್ಟಿದೆ..?
ಸದ್ಯ ಮಹಿಂದ್ರಾ ಕಂಪನಿಯು ಇದೀಗ ನೂತನವಾಗಿ Mahindra Supro Profit Truck Excel Series ಅನ್ನು ಪರಿಚಯಿಸಿದೆ. ಈ ನೂತನ ಮಾದರಿ ಮಾರುಕಟ್ಟೆಯಲ್ಲಿ ಬಾರಿ ಸಂಚಲನ ಸೃಷ್ಟಿಸಲಿದೆ. ವಾಣಿಜ್ಯ ವಾಹನಗಳ ಉತ್ಪಾದನೆಯಲ್ಲಿ ಮಹಿಂದ್ರಾ ಮುಂಚೂಣಿಯಲ್ಲಿದ್ದು, ಸದ್ಯ ವಾಣಿಜ್ಯ ವಿಭಾಗದಲ್ಲಿ ಹೊಸ ವಾಹನ ಸೇರಿಕೊಳ್ಳಲಿದೆ. ಮಹೀಂದ್ರ ಸುಪ್ರೊ ಪ್ರಾಫಿಟ್ ಟ್ರಕ್ ಎಕ್ಸೆಲ್ ಸರಣಿಯಾ ಲಘು ವಾಹನವು ಎಕ್ಸ್ ಶೋ ಪ್ರಕಾರ 6 .61 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದೆ.

2015 ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಬಿಡುಗಡೆಯಾದ ಸುಪ್ರೊ ಸರಣಿಯ ವಾಣಿಜ್ಯ ವಾಹನವು ತನ್ನ ವಿಶೇಷ ವೈಶಿಷ್ಟ್ಯಗಳೊಂದಿಗೆ ಭಾರಿ ಬೇಡಿಕೆಯನ್ನು ಸೃಷ್ಟಿಸಿದೆ ಮತ್ತು ಇದೀಗ ಪ್ರತಿಸ್ಪರ್ಧಿ ಮಾದರಿಗಳಿಗೆ ಪೈಪೋಟಿ ನೀಡಲು ಹೊಸ ಫೇಸ್‌ಲಿಫ್ಟ್‌ನೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಹೊಸ ವಾಣಿಜ್ಯ ವಾಹನವು ಡೀಸೆಲ್ ಮತ್ತು ಸಿಎನ್‌ಜಿ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದ್ದು, ಡೀಸೆಲ್ ಮಾದರಿಯು ರೂ. 6.61 ಲಕ್ಷ CNG ಮಾದರಿಯ ಬೆಲೆ ರೂ. 6.93 ಲಕ್ಷ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.

Image Credit: Bwautoworld

ಅಗ್ಗದ ಬೆಲೆ ಕಮರ್ಷಿಯಲ್ ವೆಹಿಕಲ್ ಲಾಂಚ್ ಮಾಡಿದ ಮಹಿಂದ್ರಾ
ಸುಪ್ರೊ ಪ್ರಾಫಿಟ್ ಟ್ರಕ್ ಎಕ್ಸೆಲ್ ಡೀಸೆಲ್ ಮಾದರಿಯು 900 ಕೆಜಿಯ ಅತ್ಯುತ್ತಮ ಪೇಲೋಡ್ ಸಾಮರ್ಥ್ಯವನ್ನು ಹೊಂದಿದೆ, ಹಾಗೆಯೆ ಸಿಎನ್‌ಜಿ ಮಾದರಿಯು ಗರಿಷ್ಠ 750 ಕೆಜಿ ಪೇಲೋಡ್ ಸಾಮರ್ಥ್ಯವನ್ನು ಹೊಂದಿದೆ.

ಇದು 2050 ಎಂಎಂ ವೀಲ್‌ ಬೇಸ್ ಮೂಲಕ ಪೇಲೋಡ್ ಸ್ಥಿರತೆಯನ್ನು ನಿರ್ವಹಿಸುವ ಆಂಟಿ-ರೋಲ್ ಬಾರ್‌ ನೊಂದಿಗೆ ವರ್ಧಿತ ಸುರಕ್ಷತಾ ವೈಶಿಷ್ಟ್ಯವನ್ನು ಹೈಲೈಟ್ ಮಾಡುತ್ತದೆ. ಅಲ್ಲದೆ, ಹೊಸ ಸುಪ್ರೊ ಎಕ್ಸೆಲ್ ಡೀಸೆಲ್ ಮಾದರಿಯು 23.6 kmpl ಇಂಧನ ದಕ್ಷತೆಯನ್ನು ಹೊಂದಿದ್ದರೆ CNG ಮಾದರಿಯು 24.8 kmpl ಮೈಲೇಜ್ ನೀಡುತ್ತದೆ. ಪೂರ್ಣ ಟ್ಯಾಂಕ್‌ ನೊಂದಿಗೆ, ಸಿಎನ್‌ಜಿ ಮಾದರಿಯು ಗರಿಷ್ಠ 500 ಕಿಮೀ ಮೈಲೇಜ್ ನೀಡುತ್ತದೆ.

Ads By Google
Sujatha Poojari: Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in