Mahindra Thar: ಮಹಿಂದ್ರಾ ಥಾರ್ 5 ಡೋರ್ ಬೆಲೆ ಮತ್ತು ಫೀಚರ್ ಲೀಕ್, ಬಿಡುಗಡೆಗೂ ಮುನ್ನವೇ ಮೆಚ್ಚುಗೆ ಗಳಿಸಿಕೊಂಡ ಥಾರ್.
ಇದೀಗ ಮಹಿಂದ್ರಾ ತನ್ನ ಜನಪ್ರಿಯ Mahindra Thar 5 door Car ಹೊಸ ಕಾರನ್ನ ಲಾಂಚ್ ಮಾಡಿದೆ.
Mahindra Thar 5 Door Car: ದೇಶಿಯ ಆಟೋ ವಲಯದಲ್ಲಿ ಇದೀಗ ನೂತನ ಮಾದರಿಯ SUV ಮಾಡೆಲ್ ಗಳು ಹೆಚ್ಚು ಹೆಚ್ಚು ಬಿಡುಗಡೆಗೊಳ್ಳುತ್ತಿವೆ. ಪ್ರಸ್ತುತ ಮಾರುಕಟ್ಟೆಯಲ್ಲಿ SUV ಮಾದರಿಗಳಿಗೆ ಹೆಚ್ಚಿನ ಬೇಡಿಕೆ ಇದೆ ಎನ್ನಬಹುದು. Maruti Suzuki, Hyundai, Tata, Renault, Kia ಸೇರಿದಂತೆ ಇನ್ನಿತರ ಕಂಪನಿಗಳು ಮಾರುಕಟ್ಟೆಯಲ್ಲಿ SUV ಬಿಡುಗಡೆ ಮಾಡುವ ಮೂಲಕ ಮಾರಾಟವನ್ನು ಹೆಚ್ಚಿಸಿಕೊಳ್ಳುತ್ತಿದೆ.
Mahindra ನೂತನ ಮಾದರಿಯ SUV ಬಿಡುಗಡೆ
ಸದ್ಯ ಮಾರುಕಟ್ಟೆಯಲ್ಲಿ ಟಾಪ್ ಸ್ಥಾನದಲ್ಲಿರುವ Mahindra ಎಲ್ಲ ಮಾದರಿಯ SUV ಗಳಿಗೆ ಪೈಪೋಟಿ ನೀಡಲು ಹೊಚ್ಚ ಹೊಸ ಮಾದರಿಯಲ್ಲಿ ನವೀಕರಿಸಿದ ವಿನ್ಯಾಸದ Mahindra Thar ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಮಾರುಕಟ್ಟೆಯಲ್ಲಿ ಈಗಾಗಲೇ ಮಹಿಂದ್ರಾ ತನ್ನ ಥಾರ್ 3 ಡೋರ್ SUV ಯನ್ನು ಪರಿಚಯಿಸಿದೆ. ಮಹಿಂದ್ರಾ ಥಾರ್ 3 ಡೋರ್ ಎಸ್ ಯುವಿ ಕೂಡ ಮಾರುಕಟ್ಟೆಯಲ್ಲಿ ಬಾರಿ ಬೇಡಿಕೆ ಪಡೆಯುತ್ತಿರುವ ಬೆನ್ನಲ್ಲೇ ಇದೀಗ ಮಹಿಂದ್ರಾ ತನ್ನ ಜನಪ್ರಿಯ Mahindra Thar 5 door Car ಹೊಸ ಕಾರನ್ನ ಲಾಂಚ್ ಮಾಡಿದೆ.
Mahindra Thar 5 Door Car
ಮಹಿಂದ್ರಾ ಥಾರ್ 5 ಡೋರ್ ಕಾರ್ 1820 mm ಅಗಲ ಮತ್ತು 1850 mm ಎತ್ತರವನ್ನು ಹೊಂದಿದೆ. ಮಹಿಂದ್ರಾ ಥಾರ್ 5 ಡೋರ್ ಕಾರ್ ಅನ್ನು 2024 ರಲ್ಲಿ ದೇಶಿಯ ಮಾರುಕಟ್ಟೆಗೆ ಪರಿಚಯಿಸುವ ಸಾಧ್ಯತೆ ಇದ್ದು, ಮಾರುಕಟ್ಟೆಯಲ್ಲಿ 14 ಲಕ್ಷದಿಂದ 15 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದೆ. ನೂತನ 5 Door Thar ನಲ್ಲಿ Touchscreen system and Sunroof , Dual-zone climate control, Keyless entry, Steering-mounted controls and cruise control ವೈಶಿಷ್ಟ್ಯವನ್ನು ಅಳವಡಿಸಾಲಾಗಿದೆ.
ಮಹಿಂದ್ರಾ Thar 5 Door Car ಮೈಲೇಜ್
Mahindra Thar 5 Door Car ನಲ್ಲಿ ಕಂಪನಿಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ನ ಆಯ್ಕೆಯನ್ನು ನೀಡಿದೆ. ಕಂಪನಿಯು ಈ ಕಾರ್ ನಲ್ಲಿ 2.2 ಲೀಟರ್ ಡೀಸೆಲ್ ಮತ್ತು 2.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ನೀಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಬರೋಬ್ಬರಿ 15 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು ವಾಹನ ಸವಾರರ ಸುರಕ್ಷತೆಗಾಗಿ ಕಂಪನಿಯು 6 airbags , Tire pressure monitoring system , Electronic stability control (ESC) and reversing camera ಫೀಚರ್ ನ್ನು ಅಳವಡಿಸಾಲಾಗಿದೆ.