Thar SUV: ಲೀಕ್ ಆಯಿತು ಥಾರ್ 5 ಡೋರ್ SUV ಬೆಲೆ, 15 Km ಕೊಡುವ ಥಾರ್ ಕಾರಿಗೆ ಜನರು ಫಿದಾ.
ಹೊಸ ಮಹಿಂದ್ರಾ ಥಾರ್ 5 ಡೋರ್ ಕಾರಿಗೆ ಜನರು ಫಿದಾ ಆಗಿದ್ದಾರೆ.
Mahindra Thar 5 Door Car: SUV ಬ್ರಾಂಡ್ ಗಳು ಇತ್ತೀಚಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಸೆಲ್ ಕಾಣುತ್ತಿದೆ. ಮಾರುತಿ ಸುಜುಕಿ, ಹ್ಯುಂಡೈ, ಟಾಟಾ, ರೆನಾಲ್ಟ್, ಕಿಯಾ ಸೇರಿದಂತೆ ಇನ್ನಿತರ ಕಂಪನಿಗಳು ತಮ್ಮ ಎಸ್ ಯುವಿ ಮಾದರಿಯನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಎಲ್ಲ ಕಂಪನಿಗಳು ಒಂದಕ್ಕಿಂತ ಒಂದು ಹೆಚ್ಚಿನ ಫೀಚರ್ ಅನ್ನು ಅಳವಡಿಸಿ ನೂತನ ವಿನ್ಯಾಸದಲ್ಲಿ ಎಸ್ ಯೂವಿಯನ್ನು ತಯಾರಿಸಿದೆ.
ಇನ್ನು ಜನಪ್ರಿಯ ಕಂಪನಿಯಾಗಿರುವ ಮಹಿಂದ್ರಾ (Mahindra) ಕೂಡ ಈ ಎಲ್ಲ ಮಾದರಿಯ ಎಸ್ ಯೂವಿಗಳಿಗೆ ಠಕ್ಕರ್ ನೀಡಲು ಹೊಚ್ಚ ಹೊಸ ಮಾದರಿಯಲ್ಲಿ ನವೀಕರಿಸಿದ ವಿನ್ಯಾಸದ ಮಹಿಂದ್ರಾ ಥಾರ್ ಅನ್ನು ಮಾರುಕಟ್ಟೆಗೆ ಗ್ರಾಂಡ್ ಎಂಟ್ರಿ ನೀಡಿದೆ. ಈ ಮಹಿಂದ್ರಾ ಥಾರ್ ನ ವಿಶೇಷ ಫೀಚರ್ ಗಳು ಗ್ರಾಹಕರನ್ನು ಸೆಳೆಯಲಿದೆ.
ಮಹಿಂದ್ರಾ ಥಾರ್ 5 ಡೋರ್ ಕಾರ್ (Mahindra Thar 5 door Car)
ಮಾರುಕಟ್ಟೆಯಲ್ಲಿ ಈಗಾಗಲೇ ಮಹಿಂದ್ರಾ ತನ್ನ ಥಾರ್ 3 ಡೋರ್ ಎಸ್ ಯುವಿಯನ್ನು ಪರಿಚಯಿಸಿದೆ. ಮಹಿಂದ್ರಾ ಥಾರ್ 3 ಡೋರ್ ಎಸ್ ಯುವಿ ಕೂಡ ಮಾರುಕಟ್ಟೆಯಲ್ಲಿ ಬಾರಿ ಬೇಡಿಕೆ ಪಡೆಯುತ್ತಿದೆ. ಇದೀಗ ಮಹಿಂದ್ರಾ ತನ್ನ ಜನಪ್ರಿಯ ಮಹಿಂದ್ರಾ ಥಾರ್ 5 ಬಾಗಿಲಿನ ಹೊಸ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿ ಮಾರುತಿ ಸುಜುಕಿ, ಹ್ಯುಂಡೈ, ಟಾಟಾ, ರೆನಾಲ್ಟ್, ಕಿಯಾ ಎಸ್ ಯುವಿ ಮಾದರಿಗಳ ಜೊತೆ ಸ್ಪರ್ದಿಸಲಿದೆ.
ಮಹಿಂದ್ರಾ ಥಾರ್ 5 ಡೋರ್ ಕಾರ್ ಮೈಲೇಜ್
ಮಹಿಂದ್ರಾ ಕಂಪನಿ ತನ್ನ ಹೊಸ ರೂಪಾಂತರದ 5 ಬಾಗಿಲಿನ ಕಾರ್ ಅನ್ನು ಬಿಡುಗಡೆ ಮಾಡುವ ಮೂಲಕ ತನ್ನ SUV ಶ್ರೇಣಿಯ ಮಾರಾಟವನ್ನು ಹೆಚ್ಚಿಸುತ್ತಿದೆ. ಮಹಿಂದ್ರಾ ಥಾರ್ 5 ಡೋರ್ ಕಾರ್ ನಲ್ಲಿ ಕಂಪನಿಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ನ ಆಯ್ಕೆಯನ್ನು ನೀಡಿದೆ.ಕಂಪನಿಯು ಈ ಕಾರ್ ನಲ್ಲಿ 2 .2 ಲೀಟರ್ ಡೀಸೆಲ್ ಮತ್ತು 2 .0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ನೀಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಬರೋಬ್ಬರಿ 15 ಕಿಲೋಮೀಟರ್ ಮೈಲೇಜ್ ನೀಡಲಿದೆ.
ಮಹಿಂದ್ರಾ ಥಾರ್ 5 ಡೋರ್ ಕಾರ್ ಬೆಲೆ ಮತ್ತು ವಿಶೇಷತೆ
ಮಹಿಂದ್ರಾ ಥಾರ್ 5 ಡೋರ್ ಕಾರ್ 1820 mm ಅಗಲ ಮತ್ತು 1850 mm ಎತ್ತರವನ್ನು ಹೊಂದಿದೆ. ಮಹಿಂದ್ರಾ ಥಾರ್ 5 ಡೋರ್ ಕಾರ್ ಅನ್ನು 2024 ರಲ್ಲಿ ದೇಶಿಯ ಮಾರುಕಟ್ಟೆಗೆ ಪರಿಚಯಿಸುವ ಸಾಧ್ಯತೆ ಇದೆ ಎಂದು ಕಂಪನಿ ಹೇಳಿಕೊಂಡಿದೆ. ಇನ್ನು ಮಹಿಂದ್ರಾ ಥಾರ್ 3 ಡೋರ್ ಎಸ್ ಯುವಿ ಮಾರುಕಟ್ಟೆಯಲ್ಲಿ 14 ಲಕ್ಷದಿಂದ 19 ಲಕ್ಷ ಬೆಲೆಯಲ್ಲಿ ಲಭ್ಯವಿದ್ದು, ಮಹಿಂದ್ರಾ ಥಾರ್ 5 ಡೋರ್ ಎಸ್ ಯುವಿ 19 ರಿಂದ 21 ಲಕ್ಷದಲ್ಲಿ ಲಭ್ಯವಾಗಬಹದು ಎಂದು ನಿರೀಕ್ಷಿಸಲಾಗಿದೆ.