Thar Electric: 5 ಡೋರ್ ಮಹಿಂದ್ರಾ ಥಾರ್ ಎಲೆಕ್ಟ್ರಿಕ್ ಬಿಡುಗಡೆಗೆ ಸಿದ್ದ, ಕಡಿಮೆ ಬೆಲೆ ಮತ್ತು 350 Km ಮೈಲೇಜ್.
ಬರೋಬ್ಬರಿ 350 ಕಿಲೋಮೀಟರ್ ಮೈಲೇಜ್ ನೀಡುವ ಮಹಿಂದ್ರಾ ಥಾರ್.
Mahindra Thar Electric Car: ಮಹಿಂದ್ರಾ (Mahindra) ಕಂಪನಿಯು ಈಗಾಗಲೇ ಪೆಟ್ರೋಲ್, ಡೀಸೆಲ್ ಮಾದರಿಯ ಸಾಕಷ್ಟು ಕಾರ್ ಗಳನ್ನೂ ಪರಿಚಯಿಸಿದೆ. ಇದೀಗ ಕಂಪನಿಯು ಗ್ರಾಹಕರಿಗೆ ಪೆಟ್ರೋಲ್ ಡೀಸೆಲ್ ಖರ್ಚನ್ನು ಉಳಿಸಲು ಹೊಸ ವಿನ್ಯಾಸದ ಎಲೆಕ್ಟ್ರಿಕ್ ರೂಪಾಂತರವನ್ನು ಪರಿಚಯಿಸಲು ಸಂಪೂರ್ಣ ಸಿದ್ಧತೆ ನಡೆಸುತ್ತಿದೆ. ಇತ್ತೀಚಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಹೆಚ್ಚು ಎಲೆಕ್ಟ್ರಿಕ್ ರೂಪಾಂತರಗಳು ಪರಿಚಯವಾಗುತ್ತಿದೆ.
ದೇಶಿಯ ಮಾರುಕಟ್ಟೆಯಲ್ಲಿ ಮಹಿಂದ್ರಾ ಕಂಪನಿಯ ಕಾರ್ ಗಳ ಮೇಲಿನ ಹೆಚ್ಚಿನ ಬೇಡಿಕೆ ಹೆಚ್ಚುತ್ತಿರುವ ಕಾರಣ ಕಂಪನಿಯು ಹೊಸ ಹೊಸ ಮಾದರಿಯ ಕಾರ್ ಅನ್ನು ಪರಿಚಯಿಸುತ್ತಿದೆ. ಬೇಡಿಕೆಗೆ ಅನುಗುಣವಾಗಿ ಮಹಿಂದ್ರಾ ಕಂಪನಿ ಕಾರುಗಳ ಮಾರಾಟ ಕೂಡ ಹೆಚ್ಚುತ್ತಿದೆ. ಇನ್ನು ಮಹಿಂದ್ರಾ ಕಂಪನಿ ಕಾರ್ ಪ್ರಿಯರಿಗಾಗಿ ಹೊಸ ಮಾದರಿಯ ಎಲೆಕ್ಟ್ರಿಕ್ ಕಾರ್ ಗಳನ್ನೂ ಮಾರುಕಟ್ಟೆಗೆ ಪರಿಚಯಿಸುತ್ತಿದೆ.
ಮಹಿಂದ್ರಾ ಥಾರ್ ಎಲೆಕ್ಟ್ರಿಕ್ ಕಾರ್ (Mahindra Thar Electric Car)
ದೇಶದ ವಿವಿಧ ಪ್ರತಿಷ್ಠಿತ ಕಾರ್ ತಯಾರಕ ಕಂಪನಿಗಳು ವಿವಿದ ಮಾದರಿಯ ಎಲೆಕ್ಟ್ರಿಕ್ ರೂಪಾಂತರವನ್ನು ಪರಿಚಯಿಸುತ್ತಿದ್ದಂತೆ ಇದೀಗ ಮಹಿಂದ್ರಾ ಕಂಪನಿ ಹೊಸ ಮಾದರಿಯ ಎಲೆಕ್ಟ್ರಿಕ್ ರೂಪಾಂತರಗಳ ಜೊತೆ ಸ್ಪರ್ದಿಸಲು ಹೊಸ ಮಹಿಂದ್ರಾ ಥಾರ್ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆ ಮಾಡಿದೆ. ಮಾರುಕಟ್ಟೆಯಲ್ಲಿ ಮುಂಬರುವ ಮಹಿಂದ್ರಾ ಥಾರ್ ಎಲೆಕ್ಟ್ರಿಕ್ ಕಾರ್ ಹೆಚ್ಚಿನ ಬೇಡಿಕೆ ಪಡೆಯುವ ಸಾಧ್ಯತೆ ಇದೆ.
ಮಹಿಂದ್ರಾ ಥಾರ್ ಎಲೆಕ್ಟ್ರಿಕ್ ಬಿಡುಗಡೆ
ಮಹಿಂದ್ರಾ ಥಾರ್ ಎಲೆಕ್ಟ್ರಿಕ್ ಮುಂದಿನ ವರ್ಷ 2024 ರಲ್ಲಿ ಬಿಡುಗಡೆ ಆಗಲಿದೆ. ಇನ್ನು ಭಾರತದಲ್ಲಿ ಎಲೆಕ್ಟ್ರಿಕ್ ಮಾದರಿಯ ಕಾರ್ ಗಳ ಮೇಲಿನ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲೂ ಮಹಿಂದ್ರಾ ಕಂಪನಿಯ ಕಾರ್ ಹೆಚ್ಚಿನ ಮೈಲೇಜ್ ಗೆ ಹೆಸರುವಾಸಿ ಆಗಿರುವ ಕಾರಣ ಬಿಡುಗಡೆಗೊಂಡ ಬಳಿಕ ಹೆಚ್ಚಿನ ಸೇಲ್ ಕಾಣುತ್ತದೆ. 5 ಡೋರ್ ಮಹಿಂದ್ರಾ ಥಾರ್ ಎಲೆಕ್ಟ್ರಿಕ್ ಬಿಡುಗಡೆಗೆ ಕಂಪನಿಯು ಸಂಪೂರ್ಣ ಸಿದ್ಧತೆ ನಡೆಸುತ್ತಿದೆ.
ಈ ಮಹಿಂದ್ರಾ ಥಾರ್ ರೆಟ್ರೋ ಲುಕ್ ನಲ್ಲಿ ಬರಲಿದೆ. ಸಣ್ಣ ವಿಂಡ್‌ಸ್ಕ್ರೀನ್, ಎರಡು ಚದರ ಎಲ್ಇಡಿ ಡಿಆರ್ಎಲ್ಗಳು, ಸಿಗ್ನೇಚರ್ ಫ್ಲಾಟ್ ರೂಫ್ ಮತ್ತು ದೊಡ್ಡ ಚಕ್ರಗಳೊಂದಿಗೆ ಚೌಕಾಕಾರದ ಮುಂಭಾಗವನ್ನು ಹೊಂದಿದ್ದು ಈ ಕಾರ್ ಬಹಳ ಆಕರ್ಷಣೀಯವಾಗಿದೆ.
ಬರೋಬ್ಬರಿ 350 ಕಿಲೋಮೀಟರ್ ಮೈಲೇಜ್ ನೀಡುವ ಮಹಿಂದ್ರಾ ಥಾರ್
ಇನ್ನು ಈ ನೂತನ ವಿನ್ಯಾಸದ ಮಹಿಂದ್ರಾ ಥಾರ್ ಎಲೆಕ್ಟ್ರಿಕ್ ಬರೋಬ್ಬರಿ 350 ಕಿಲೋ ಮೀಟರ್ ವ್ಯಾಪ್ತಿ ನೀಡಲಿದೆ ಎನ್ನುವ ಬಗ್ಗೆಮಾಹಿತಿ ಮೂಲಗಳಿಂದ ತಿಳಿದುಬಂದಿದೆ. ಮಹಿಂದ್ರಾ ಥಾರ್ ಎಲೆಕ್ಟ್ರಿಕ್ ರೂಪಾಂತರದ ಬಗ್ಗೆ ಗ್ರಾಹಕರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಇನ್ನು ಈ ಎಲೆಕ್ಟ್ರಿಕ್ ರೂಪಾಂತರದ ಬೆಲೆ 25 ಲಕ್ಷ ಇರಬಹುದು ಎಂದು ಅಂದಾಜಿಸಲಾಗಿದೆ. ಇನ್ನು ಕಂಪನಿಯು ತನ್ನ ಹೊಸ ರೂಪಾಂತರದ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ. ಕಂಪನಿಯು ಕಾರ್ ಮಾಹಿತಿಯ ಬಗ್ಗೆ ಅಧಿಕೃತ ಘೋಷಣೆ ಮಾಡುವವರೆಗೂ ಕಾದು ನೋಡಬೇಕಿದೆ.