Thar EV: ಬಂತು ಮಹಿಂದ್ರಾ ಥಾರ್ ಎಲೆಕ್ಟ್ರಿಕ್ ಕಾರ್, ಭರ್ಜರಿ ಮೈಲೇಜ್ ಮತ್ತು ಕಡಿಮೆ ಬೆಲೆ.

ಮಹಿಂದ್ರಾ ಕಂಪನಿಯ ಹೊಸ ಎಲೆಕ್ಟ್ರಿಕ್ ರೂಪಾಂತರ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲಿದೆ.

Mahindra Thar Electric Car: ದೇಶಿಯ ಮಾರುಕಟ್ಟೆಯಲ್ಲಿ ಮಹಿಂದ್ರಾ (Mahindra) ಕಂಪನಿಯ ಕಾರ್ ಗಳ ಮೇಲಿನ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಬೇಡಿಕೆಗೆ ಅನುಗುಣವಾಗಿ ಮಹಿಂದ್ರಾ ಕಂಪನಿ ಕಾರುಗಳ ಮಾರಾಟ ಕೂಡ ಹೆಚ್ಚುತ್ತಿದೆ. ಇನ್ನು ಮಹಿಂದ್ರಾ ಕಂಪನಿ ಕಾರ್ ಪ್ರಿಯರಿಗಾಗಿ ಹೊಸ ಮಾದರಿಯ ಕಾರ್ ಗಳನ್ನೂ ಮಾರುಕಟ್ಟೆಗೆ ಪರಿಚಯಿಸುತ್ತಿದೆ.

ಕಂಪನಿಯು ಈಗಾಗಲೇ ಪೆಟ್ರೋಲ್, ಡೀಸೆಲ್ ಮಾದರಿಯ ಸಾಕಷ್ಟು ಕಾರ್ ಗಳನ್ನೂ ಪರಿಚಯಿಸಿದೆ. ಇದೀಗ ಕಂಪನಿಯು ಗ್ರಾಹಕರಿಗೆ ಪೆಟ್ರೋಲ್ ಡೀಸೆಲ್ ಖರ್ಚನ್ನು ಉಳಿಸಲು ಹೊಸ ವಿನ್ಯಾಸದ ಎಲೆಕ್ಟ್ರಿಕ್ ರೂಪಾಂತರವನ್ನು ಪರಿಚಯಿಸಲು ಸಂಪೂರ್ಣ ಸಿದ್ಧತೆ ನಡೆಸುತ್ತಿದೆ. 

Mahindra Thar Electric launched
Image Credit: Cartoq

ಮಹಿಂದ್ರಾ ಥಾರ್ ಎಲೆಕ್ಟ್ರಿಕ್ ಕಾರ್ (Mahindra Thar Electric Car) 
ದೇಶದ ವಿವಿಧ ಪ್ರತಿಷ್ಠಿತ ಕಾರ್ ತಯಾರಕ ಕಂಪನಿಗಳು ವಿವಿದ ಮಾದರಿಯ ಎಲೆಕ್ಟ್ರಿಕ್ ರೂಪಾಂತರವನ್ನು ಪರಿಚಯಿಸುತ್ತಿದ್ದಂತೆ ಇದೀಗ ಮಹಿಂದ್ರಾ ಕಂಪನಿ ಹೊಸ ಮಾದರಿಯ ಎಲೆಕ್ಟ್ರಿಕ್ ರೂಪಾಂತರಗಳ ಜೊತೆ ಸ್ಪರ್ದಿಸಲು ಹೊಸ ಮಹಿಂದ್ರಾ ಥಾರ್ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆ ಮಾಡಿದೆ.

ಈ ಹಿಂದೆ ಕಂಪನಿಯು ಮಹಿಂದ್ರಾ XUV 400 ಎಲೆಕ್ಟ್ರಿಕ್ ರೂಪಾಂತರವನ್ನು ಬಿಡುಗಡೆ ಮಾಡಿತ್ತು.ಈ ಎಲೆಕ್ಟ್ರಿಕ್ ರೂಪಾಂತರ ಮಾರುಕಟ್ಟೆಯಲ್ಲಿ ಹೆಚ್ಚಿನ ಸೇಲ್ ಕಂಡಿದೆ. ಇದೀಗ ಮುಂಬರುವ ಮಹಿಂದ್ರಾ ಥಾರ್ ಎಲೆಕ್ಟ್ರಿಕ್ ಕಾರ್ ಹೆಚ್ಚಿನ ಬೇಡಿಕೆ ಪಡೆಯುವ ಸಾಧ್ಯತೆ ಇದೆ.

ಮಹಿಂದ್ರಾ ಥಾರ್ ಎಲೆಕ್ಟ್ರಿಕ್ ಬಿಡುಗಡೆ
ಮುಂದಿನ ಇವೆಂಟ್ ನಲ್ಲಿ ಕಂಪನಿಯು ಮಹಿಂದ್ರಾ ಥಾರ್ ಎಲೆಕ್ಟ್ರಿಕ್ ಪರಿಕಲ್ಪನೆಯ ಮಾದರಿಯನ್ನು ಬಿಡುಗಡೆ ಮಾಡುತ್ತದೆ ಎನ್ನುವ ಬಗ್ಗೆ ವರದಿಯಾಗಿದೆ. ಇದರ ಜೊತೆಗೆ ಮಹೀಂದ್ರ ಸ್ಕಾರ್ಪಿಯೋ ಎನ್ ನ ಪಿಕಪ್ ಮಾದರಿಯ ಚಿತ್ರವೂ ಬಿಡುಗಡೆಯಾಗಲಿದೆ.

Join Nadunudi News WhatsApp Group

SUV with a mileage of 500 km
Image Credit: Automobiles

ಮಹಿಂದ್ರಾ ಥಾರ್ ಎಲೆಕ್ಟ್ರಿಕ್ ಮುಂದಿನ ವರ್ಷ 2024 ರಲ್ಲಿ ಬಿಡುಗಡೆ ಆಗಲಿದೆ. ಇನ್ನು ಭಾರತದಲ್ಲಿ ಎಲೆಕ್ಟ್ರಿಕ್ ಮಾದರಿಯ ಕಾರ್ ಗಳ ಮೇಲಿನ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲೂ ಮಹಿಂದ್ರಾ ಕಂಪನಿಯ ಕಾರ್ ಹೆಚ್ಚಿನ ಮೈಲೇಜ್ ಗೆ ಹೆಸರುವಾಸಿ ಆಗಿರುವ ಕಾರಣ ಬಿಡುಗಡೆಗೊಂಡ ಬಳಿಕ ಹೆಚ್ಚಿನ ಸೇಲ್ ಕಾಣುತ್ತದೆ.

ಬರೋಬ್ಬರಿ 500 ಕಿಲೋಮೀಟರ್ ಮೈಲೇಜ್ ನೀಡುವ SUV
ಇನ್ನು ಈ ನೂತನ ವಿನ್ಯಾಸದ ಮಹಿಂದ್ರಾ ಥಾರ್ ಎಲೆಕ್ಟ್ರಿಕ್ ಬರೋಬ್ಬರಿ 500 ಕಿಲೋ ಮೀಟರ್ ವ್ಯಾಪ್ತಿ ನೀಡಲಿದೆ ಎಂದು ಹೇಳಲಾಗುತ್ತಿದೆ. ಮಹಿಂದ್ರಾ ಥಾರ್ ಎಲೆಕ್ಟ್ರಿಕ್ ರೂಪಾಂತರದ ಬಗ್ಗೆ ಗ್ರಾಹಕರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಇನ್ನು ಈ ಎಲೆಕ್ಟ್ರಿಕ್ ರೂಪಾಂತರದ ಬೆಲೆ 25 ಲಕ್ಷ ಇರಬಹುದು ಎಂದು ಅಂದಾಜಿಸಲಾಗಿದೆ.

ಇನ್ನು ಕಂಪನಿಯು ತನ್ನ ಹೊಸ ರೂಪಾಂತರದ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ. ಕಂಪನಿಯು ಕಾರ್ ಮಾಹಿತಿಯ ಬಗ್ಗೆ ಅಧಿಕೃತ ಘೋಷಣೆ ಮಾಡುವವರೆಗೂ ಕಾದುನೋಡಬೇಕಿದೆ.

Join Nadunudi News WhatsApp Group