Thar Roxx: ಹೊಸ ಮಹಿಂದ್ರಾ ಥಾರ್ Roxx ಕಾರಿನಲ್ಲಿ ಏನೇನು ಹೊಸ ಫೀಚರ್ ಇದೆ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಮಹಿಂದ್ರಾ ಥಾರ್ ರಾಕ್ಸ್ ನಲ್ಲಿ ಹೊಸ ಅಪ್ಡೇಟ್
Mahindra Thar Roxx New Feature: ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ Mahindra Thar Roxx ಶೀಘ್ರದಲ್ಲೇ ಎಂಟ್ರಿ ಕೊಡಲಿದೆ. ಕಂಪನಿಯು ಈ ಮಾದರಿಯ ಲಾಂಚ್ ದಿನಾಂಕವನ್ನು ಸಹ ಅಧಿಕೃತವಾಗಿ ನಿರ್ಧರಿಸಲಾಗಿದೆ. ಮಹೀಂದ್ರ ಥಾರ್ ರೋಕ್ಸ್ ಕಾರು ಮಾರುಕಟ್ಟೆಯಲ್ಲಿ ಸದ್ದು ಮಾಡಲು ಸಿದ್ಧವಾಗಿದ್ದು, ಎಲ್ಲಾ ಷರತ್ತುಗಳೊಂದಿಗೆ ಬಿಡುಗಡೆ ದಿನಾಂಕವನ್ನು ಸಹ ನಿಗದಿಪಡಿಸಲಾಗಿದೆ.
ಮಹೀಂದ್ರ ಥಾರ್ ರೋಕ್ಸ್ ವಾಹನವನ್ನು 15 ಆಗಸ್ಟ್ 2024 ರಂದು ಬಿಡುಗಡೆ ಮಾಡಲಾಗುವುದು ಎಂದು ಕಂಪನಿಯು ಅಧಿಕೃತವಾಗಿ ಘೋಷಿಸಿದೆ. ಮಾರುಕಟ್ಟೆಯಲ್ಲಿ ಥಾರ್ ರಾಕ್ಸ್ ಆಗಿ ಮಹೀಂದ್ರ ಥಾರ್ ಐದು-ಬಾಗಿಲಿನ ಕಾರ್ ಲಾಂಚ್ ಆಗಲಿದೆ. ಸದ್ಯ ಮಹಿಂದ್ರಾ ಥಾರ್ ರಾಕ್ಸ್ ಮಾದರಿಯಲ್ಲಿನ ಹೊಸ ಅಪ್ಡೇಟ್ ಬಗ್ಗೆ ಮಾಹಿತಿ ಲಭ್ಯವಿದೆ.
ಮಹಿಂದ್ರಾ ಥಾರ್ ರಾಕ್ಸ್ ನಲ್ಲಿ ಹೊಸ ಅಪ್ಡೇಟ್
ಮಹೀಂದ್ರ ಥಾರ್ 5 ಡೋರ್ ನಲ್ಲಿ ಹೊಸ ಮಿಶ್ರಲೋಹದ ಚಕ್ರಗಳನ್ನು ನೀಡಲಾಗಿದೆ. 10-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ ಪ್ಲೇ, ದೊಡ್ಡ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್, ಸಿಂಗಲ್ ಪೇನ್ ಸನ್ ರೂಫ್, ಎಸಿ ವೆಂಟ್, ಇನ್ಸೈಡ್ ರಿಯರ್ ವ್ಯೂ ಮಿರರ್ ಮತ್ತು ಇನ್ನೂ ಹೆಚ್ಚಿನ ವೈಶಿಷ್ಟ್ಯಗಳನ್ನು ಇದರಲ್ಲಿ ಕಾಣಬಹುದು. ಕಂಪನಿಯು ತನ್ನ 5 ಡೋರ್ ಥಾರ್ ನಲ್ಲಿ ಉತ್ತಮ ವೈಶಿಷ್ಟ್ಯಗಳನ್ನು ನೀಡುತ್ತಿದೆ. ಇದರಿಂದಾಗಿ ಅದರ ಮಾರಾಟವು ಉತ್ತಮವಾಗಿರುತ್ತದೆ.
ಬಿಡುಗಡೆಗೂ ಮುನ್ನ ಥಾರ್ ನ 5 ಡೋರ್ ಮಾದರಿಯು ಮಾರುಕಟ್ಟೆಯಲ್ಲಿ ಬಾರಿ ಕ್ರೇಜ್ ಹುಟ್ಟಿಸುತ್ತಿದೆ. ಇನ್ನು Mahindra Thar 5-Door ಮಾದರಿಯಲ್ಲಿ ಪನೋರಮಿಕ್ ಸನ್ ರೂಫ್ ಅನ್ನು ಒದಗಿಸಲಾಗುವುದಿಲ್ಲ. ಬದಲಿಗೆ ಕಂಪನಿಯು ತನ್ನ ಉನ್ನತ ರೂಪಾಂತರದಲ್ಲಿ ಸಿಂಗಲ್-ಪೇನ್ ಸನ್ ರೂಫ್ ಅನ್ನು ನೀಡಬಹುದು. ಇನ್ನು ಮಾರುಕಟ್ಟೆಯಲ್ಲಿ Mahindra Thar 2024 ಸರಿಸುಮಾರು 16 ರಿಂದ 20 ಲಕ್ಷ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.
ನೂತನ ಥಾರ್ ರಾಕ್ಸ್ ನಲ್ಲಿರಲಿದೆ ಈ ಮೂರು ಬೆಸ್ಟ್ ಫೀಚರ್ಸ್
•ವೈರ್ ಲೆಸ್ ಫೋನ್ ಚಾರ್ಜರ್ ನ ಅಗತ್ಯವನ್ನು ಮನಗಂಡ ಮಹೀಂದ್ರಾ ಕಂಪನಿಯು ಥಾರ್ ರಾಕ್ಸ್ ನಲ್ಲಿ ಈ ಹೊಸ ವೈಶಿಷ್ಟ್ಯವನ್ನು ಸೇರಿಸಲು ಮುಂದಾಗಿದೆ. ಥಾರ್ 3-ಡೋರ್ ಆವೃತ್ತಿಯು ಈ ವೈಶಿಷ್ಟ್ಯವನ್ನು ಹೊಂದಿಲ್ಲ. ಈ ಬಗ್ಗೆ ಈ ಹಿಂದೆಯೇ ಹಲವರು ಕಂಪನಿಗೆ ಮನವಿ ಸಲ್ಲಿಸಿದ್ದರು. ಅಂತಿಮವಾಗಿ Thor Roxx ಈ ವೈಶಿಷ್ಟ್ಯವನ್ನು ಪಡೆದುಕೊಂಡು ಮಾರುಕಟ್ಟೆಗೆ ಪ್ರವೇಶವನ್ನು ನೀಡುತ್ತದೆ.
•ಇನ್ನು ಡ್ಯುಯಲ್-ಝೋನ್ ಎಸಿ ಮುಂಭಾಗದ ಪ್ರಯಾಣಿಕರಿಗೆ ಆಯಾ ಪ್ರತ್ಯೇಕ ವಲಯಗಳಿಗೆ ತಮ್ಮ ಆದ್ಯತೆಯ ತಾಪಮಾನವನ್ನು ಹೊಂದಿಸಲು ಅನುಮತಿಸುತ್ತದೆ. ಈ ವೈಶಿಷ್ಟ್ಯವು ಮಹೀಂದ್ರ XUV400 ಬಿಡುಗಡೆಯಾದಾಗಿನಿಂದ ಲಭ್ಯವಿದೆ. ಇದನ್ನು ಥಾರ್ ರಾಕ್ಸ್ ನಲ್ಲಿಯೂ ಸೇರಿಸುವ ಸಾಧ್ಯತೆ ಇದೆ. ಆದ್ದರಿಂದ ಥಾರ್ ರಾಕ್ಸ್ ಹಿಂದಿನ ಸೀಟಿನ ಪ್ರಯಾಣಿಕರಿಗೆ ಎಸಿ ವೆಂಟ್ ಗಳನ್ನು ಪಡೆಯುವ ನಿರೀಕ್ಷೆಯಿದೆ.
•ಹೊಸ ಥಾರ್ ರಾಕ್ಸ್ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್ ಪ್ಲೇಯನ್ನು ಒಳಗೊಂಡಿರುವುದು ಬಹುತೇಕ ಖಚಿತವಾಗಿದೆ. ಇದು XUV 400 ರಂತೆ ಅದೇ 10.25-ಇಂಚಿನ ಘಟಕದೊಂದಿಗೆ ಸಜ್ಜುಗೊಳ್ಳುವ ನಿರೀಕ್ಷೆಯಿದೆ. ಇದರಲ್ಲಿ ನ್ಯಾವಿಗೇಷನ್ ಮತ್ತು ಟೈರ್ ಪ್ರೆಶರ್ ಮಾನಿಟರ್ ನಂತಹ ಮಾಹಿತಿಯನ್ನು ನೋಡಬಹುದು.