Mahindra XEV 9S vs KIA Clavis Ev: ಪ್ರತಿಯೊಬ್ಬರಿಗೂ ಕೂಡ ಕಾರ್ ಖರೀದಿ ಮಾಡಬೇಕು ಅನ್ನುವ ಆಸೆ ಇರುತ್ತದೆ. ಇದೀಗ ಕುಟುಂಬದ ಜೊತೆ ಪ್ರಯಾಣ ಮಾಡಲು ಒಂದೊಳ್ಳೆ ಕಾರ್ ಲಾಂಚ್ ಆಗಿದೆ. ಹೌದು, ನೀವು ಕುಟುಂಬಕ್ಕಾಗಿ 7 Seater ಎಲೆಕ್ಟ್ರಿಕ್ ಕಾರ್ ಹುಡುಕುತ್ತಿದ್ದರೆ ಈ ಮಾಹಿತಿ ನಿಮಗೆ ಬಹಳ ಉಪಯುಕ್ತವಾಗಲಿದೆ. ಹೌದು, ಇದೀಗ ಜನಪ್ರಿಯ ಕಾರ್ ಕಂಪನಿಗಳಾದ ಮಹಿಂದ್ರಾ ಮತ್ತು ಕಿಯಾ ಹೊಸ ಮಾದರಿಯನ್ನು ಲಾಂಚ್ ಮಾಡಿವೆ. ಈ ಎರಡು ಮಾಡೆಲ್ ಗಳ ಬಗ್ಗೆ ನಾವೀಗ ಸಂಪೂರ್ಣ ಮಾಹಿತಿಯನ್ನ ನೀಡುತ್ತೇವೆ, ನಿಮಗೆ ಯಾವುದು ಉತ್ತಮ ಅದನ್ನ ಆಯ್ಕೆ ಮಾಡಿಕೊಳ್ಳಿ.
ಮಹಿಂದ್ರಾ ಮತ್ತು KIA ಕಾರಿನ ಬೆಲೆ
* ಮಹಿಂದ್ರಾ ತನ್ನ 2025 ರ Mahindra XEV 9S ಕಾರನ್ನು ಬಿಡುಗಡೆ ಮಾಡಿದೆ. ಇದು ಸುಮಾರು 6 ವೆರಿಯಂಟ್ ಗಳಲ್ಲಿ ಲಭ್ಯವಿದೆ. Mahindra XEV 9S ಬೆಲೆ 19.95 ಲಕ್ಷದಿಂದ 29.45 ಲಕ್ಷದ ವರೆಗೆ ಆಗಿದೆ. ಇದು XUV 700 ಇಂಧನ ಮಾಡೆಲ್ ನ EV ಆವೃತ್ತಿಯಂತೆ, SUV ಸ್ಟೈಲ್ ನೊಂದಿಗೆ ಬರುತ್ತದೆ. ಮಹೀಂದ್ರಾ INGLO ಪ್ಲಾಟ್ ಫಾರ್ಮ್ ಮೇಲೆ ನಿರ್ಮಿತವಾಗಿದ್ದು ಈಗಾಗಲೇ 30,000 ಯೂನಿಟ್‌ಗಳಿಗಿಂತ ಹೆಚ್ಚು ಮಾರಾಟವಾಗಿದೆ.
* ಇನ್ನು Kia Carens Clavis EV 6 ವೆರಿಯಂಟ್ ಗಳಲ್ಲಿ ಲಭ್ಯ ಇದ್ದು,ಇದರ ಬೆಲೆ 17.99 ಲಕ್ಷದಿಂದ 24.49 ಲಕ್ಷದವರೆಗೆ ಆಗಿದೆ. ಇದು ಕಿಯಾದ ಮೊದಲ ಮಾಸ್-ಮಾರ್ಕೆಟ್ EV.
ಕಾರುಗಳ ಬ್ಯಾಟರಿ
* Mahindra XEV 9S ನಲ್ಲಿ 3 ಬ್ಯಾಟರಿ ಆಯ್ಕೆಯನ್ನು ನೀಡಲಾಗಿದೆ. 59 kWh (170 kW ಪವರ್, 450 ಕಿ.ಮೀ. ರೇಂಜ್), 70 kWh (180 kW, 600 ಕಿ.ಮೀ.), 79 kWh (210 kW/282 bhp, 380 Nm ಟಾರ್ಕ್, 656 ಕಿ.ಮೀ. ARAI). 0-100 ಕಿ.ಮೀ./ಗಂ. 6.8 ಸೆಕೆಂಡ್‌ಗಳಲ್ಲಿ ಸಾಧ್ಯ, 219 ಮಿ.ಮೀ. ಗ್ರೌಂಡ್ ಕ್ಲಿಯರೆನ್ಸ್ ನೊಂದಿಗೆ SUV ರಸ್ತೆಗಳಿಗೆ ಸೂಕ್ತವಾಗಿದೆ. ಫಾಸ್ಟ್ ಚಾರ್ಜಿಂಗ್ ( 20% ನಿಂದ 80% 20 ನಿಮಿಷಗಳಲ್ಲಿ) ಸೌಲಭ್ಯ, V2L ಸಪೋರ್ಟ್ ಇದೆ.
* ಇನ್ನು Kia Carens Clavis EV, 42 kWh ಬ್ಯಾಟರಿ ( 99 kW ಪವರ್, 404 ಕಿ.ಮೀ. ರೇಂಜ್) ನೀಡುತ್ತದೆ. 51.4 kWh (126 kW, 490 ಕಿ.ಮೀ., 255 Nm ಟಾರ್ಕ್). 0-100 ಕಿ.ಮೀ. ಸು. 9 ಸೆಕೆಂಡ್‌ಗಳು, ನಗರ ಡ್ರೈವ್‌ಗೆ ಉತ್ತಮ ಆಯ್ಕೆ, ಆದರೆ ಹೆಚ್ಚು ಭಾರವಾದ MPV ಆಗಿ ರೇಂಜ್ ಕಡಿಮೆ. 100 kW DC ಚಾರ್ಜರ್ ನೊಂದಿಗೆ 10 ರಿಂದ 80% ಚಾರ್ಜ್ ಆಗಲು 39 ನಿಮಿಷಗಳು ತೆಗೆದುಕೊಳ್ಳುತ್ತದೆ. 11 kW AC ಗೆ 4 – 5 ಗಂಟೆಗಳು.
ಕಾರುಗಳ ಒಳಾಂಗಣ ಮತ್ತು ಹೊರಾಂಗಣ ನೋಟ
* Mahindra XEV 9S ನ ಉದ್ದ 4785 ಮಿ.ಮೀ., ಅಗಲ 1907 ಮಿ.ಮೀ., ಎತ್ತರ 1695 ಮಿ.ಮೀ., ವೀಲ್‌ಬೇಸ್ 2775 ಮಿ.ಮೀ. ಇದ್ದು 7 ಸೀಟರ್ ಕಾರ್ ಆಗಿದೆ. 527 ಲೀಟರ್ ಬೂಟ್ ಸ್ಪೇಸ್, 150 ಲೀಟರ್ ಫ್ರಂಟ್ ಟ್ರಂಕ್. MPV ಗೆ ಹೋಲಿಸಿದರೆ ಕಡಿಮೆ ಸ್ಪೇಸ್. 19-20 ಇಂಚ್ ವೀಲ್ ಗಳು, ಫ್ಲಶ್ ಡೋರ್ ಹ್ಯಾಂಡಲ್‌ಗಳು.
* Kia Carens Clavis EV MPV ಆಗಿದ್ದು ಹೆಚ್ಚು ಸ್ಪೇಸ್ ಹೊಂದಿದೆ. ಉದ್ದ 4540 ಮಿ.ಮೀ., ಅಗಲ 1800 ಮಿ.ಮೀ., ಎತ್ತರ 1708 ಮಿ.ಮೀ., ವೀಲ್‌ಬೇಸ್ 2780 ಮಿ.ಮೀ. 7 ಸೀಟರ್ ಕಾರ್ ಆಗಿದೆ. ಬೂಟ್ ಸ್ಪೇಸ್ 492 ಲೀಟರ್. ಕುಟುಂಬ ಪ್ರಯಾಣಕ್ಕೆ ಉತ್ತಮವಾಗಿದೆ.
ಫೀಚರ್ ಮತ್ತು ಸೇಫ್ಟಿ
* Mahindra XEV 9S ನಲ್ಲಿ ಟ್ರಿಪಲ್ 12.3-ಇಂಚ್ ಸ್ಕ್ರೀನ್‌ಗಳು, ಪ್ಯಾನರಾಮಿಕ್ ಸನ್ ರೂಫ್, 5G ಕನೆಕ್ಟಿವಿಟಿ, ವೈರ್ ಲೆಸ್ ಚಾರ್ಜರ್ , 16 ಸ್ಪೀಕರ್ ಹಾರ್‌ಮನ್ ಕಾರ್ಡನ್ ಡಾಲ್ಬಿ ಅಟ್‌ಮಾಸ್ ಸೌಂಡ್, 16 ಮಿಲಿಯನ್ ಕಲರ್ ಅಂಬಿಯಂಟ್ ಲೈಟಿಂಗ್ ಅನ್ನು ಅಳವಡಿಸಲಾಗಿದೆ. ಇನ್ನು ಸೇಫ್ಟಿಗಾಗಿ, ಲೆವಲ್ 2+ ADAS (20 ಕ್ಕೂ ಅಧಿಕ ಫೀಚರ್ ಗಳು) , 360° ಕ್ಯಾಮರಾ, 12 ಸೆನ್ಸರ್‌ಗಳು.
* Kia Carens Clavis EV ನಲ್ಲಿ 26.62 – ಇಂಚ್ ಡ್ಯುಯಲ್ ಪ್ಯಾನರಾಮಿಕ್ ಡಿಸ್ ಪ್ಲೇ, 8 ಸ್ಪೀಕರ್ ಬೋಸ್ ಆಡಿಯೋ, 64 – ಕಲರ್ ಅಂಬಿಯಂಟ್ ಲೈಟಿಂಗ್, ಡ್ಯುಯಲ್ ಪ್ಯಾನ್ ಸನ್ ರೂಫ್, ವೆಂಟಿಲೇಟೆಡ್ ಸೀಟ್‌ಗಳು, ಏರ್ ಪ್ಯೂರಿಫೈಯರ್. ಇನ್ನು ಸೇಫ್ಟಿಗಾಗಿ ಲೆವಲ್ 2 ADAS ( 20 ಕ್ಕೂ ಅಧಿಕ ಫೀಚರ್ ಗಳು ) , 8 ವರ್ಷ 1.6 ಲಕ್ಷ ಕಿ.ಮೀ. ಬ್ಯಾಟರಿ ವಾರಂಟಿ.
ಬಣ್ಣಗಳು
* Mahindra XEV 9S Nebula Blue, Ruby Velvet, Everest White, Stealth Black ಬಣ್ಣಗಳಲ್ಲಿ ಲಭ್ಯವಿದೆ.
* Kia Carens Clavis EV Glacier White Pearl, Arctic Red Metallic ಬಣ್ಣಗಳಲ್ಲಿ ಲಭ್ಯವಿದೆ.
ಹೆಚ್ಚು ರೇಂಜ್, ಪವರ್ ಮತ್ತು SUV ಸ್ಟೈಲ್ ಬೇಕಿದ್ದರೆ Mahindra XEV 9S ಉತ್ತಮವಾಗಿದೆ. ಇನ್ನು ನಗರ ಡ್ರೈವ್, ಬಜೆಟ್ ಮತ್ತು ಹೆಚ್ಚು ಸೀಟ್ ಸ್ಪೇಸ್ ಬೇಕಿದ್ದರೆ Kia Carens Clavis EV ಉತ್ತಮವಾಗಿದೆ. ನಿಮಗೆ ಯಾವುದು ಉತ್ತಮ ಅನಿಸುತ್ತದೆ ಅದನ್ನು ಆಯ್ಕೆ ಮಾಡಿಕೊಳ್ಳಿ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

