Mahindra XUV: 20 Km ಮೈಲೇಜ್ ಮತ್ತು 11 ಲಕ್ಷಕ್ಕಿಂತ ಕಡಿಮೆ ಬೆಲೆ, ಈ ಮಹಿಂದ್ರಾ ಕಾರ್ ಮುಂದೆ ಸೋತ ಕ್ರೆಟಾ ಮತ್ತು ಕಿಯಾ.
ಇದೀಗ ಮಹಿಂದ್ರಾ XUV 700 ಬೆನ್ನಲ್ಲೇ ನೂತನ ವೈಶಿಷ್ಟ್ಯದ ಕಾರ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಸಂಪೂರ್ಣ ಸಿದ್ಧತೆ ನಡೆಸಿದೆ.
Mahindra XUV Cars: ಮಹಿಂದ್ರಾ (Mahindra) ಇತ್ತೀಚೆಗಷ್ಟೇ XUV 700 ಎಸ್ ಯುವಿಯನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಇನ್ನು 14 ರಿಂದ 26 ಲಕ್ಷ ಬೆಲೆಯಲ್ಲಿ ಕಂಪನಿಯು XUV 700 ಅನ್ನು ಪರಿಚಯಿಸಿದೆ. ನೂತನ ಸುಧಾರಿತ ಫೀಚರ್ ಇರುವ ಈ XUV 700 ಮಾರುಕಟ್ಟೆಯಲ್ಲಿ ಭರ್ಜರಿ ಸೇಲ್ ಕಂಡಿದೆ.
ಇದೀಗ ಮಹಿಂದ್ರಾ XUV 700 ಬೆನ್ನಲ್ಲೇ ನೂತನ ವೈಶಿಷ್ಟ್ಯದ XUV 300 ಅನ್ನು ಮಾರುಕಟ್ಟೆಗೆ ಪರಿಚಯಿಸಲು ಸಂಪೂರ್ಣ ಸಿದ್ಧತೆ ನಡೆಸಿದೆ. ಹಳೆಯ ಮಾದರಿಯ ಕಾರ್ ನಷ್ಟೇ ಈ ಕಾರ್ ಕೂಡ ನೂತನ ವಿನ್ಯಾಸವನ್ನು ಹೊಂದಿದ್ದು ಹೆಚ್ಚಿನ ಸೇಲ್ ಕಾಣುವುದರಲ್ಲಿ ಯಾವುದೇ ಸಂದೇಹವಿಲ್ಲ.
ಮಹಿಂದ್ರಾ XUV 300 ಬೆಲೆ
ಮಹಿಂದ್ರಾ XUV 300 ಎಸ್ ಯುವಿಯನ್ನು ಇತರ ರೂಪಾಂತರಗಳಿಂಗಿಂತ ಹೆಚ್ಚಿನ ಫೀಚರ್ ಅನ್ನು ಅಳವಡಿಸಿದೆ. ಈ ನೂತನ ಎಸ್‌ಯುವಿಯಲ್ಲಿ ಸಾಕಷ್ಟು ಕಾಸ್ಮೆಟಿಕ್ ಬದಲಾವಣೆಗಳನ್ನು ಕಾಣಬಹುದಾಗಿದೆ. ವಿಭಿನ್ನ ಶೈಲಿಯ LED ಹೆಡ್ ಲ್ಯಾಂಪ್‌ಗಳು ಮತ್ತು ಇಂಡಿಕೇಟರ್‌ಗಳು ಹಾಗೂ ಟೈಲ್ ಲ್ಯಾಂಪ್‌ಗಳು ಮತ್ತು ಮುಂಭಾಗದ ಗ್ರಿಲ್ ಅನ್ನು ಪಡೆಯಲಿದ್ದು ಈ ಮಾದರಿಯು ಮಾರುಕಟ್ಟೆಯಲ್ಲಿ 12.90 ಲಕ್ಷಕ್ಕೆ ಲಭ್ಯವಾಗಲಿದೆ.
ಮಹಿಂದ್ರಾ XUV 300 ವಿಶೇಷತೆ
ಮೂರು ಹೊಸ ಡ್ಯುಯಲ್-ಟೋನ್ ಬಣ್ಣದ ಆಯ್ಕೆಗಳಲ್ಲಿ XUV 300 ಅನ್ನು ಖರೀದಿಸಬಹುದು. ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ರೈನ್ ಸೆನ್ಸಿಂಗ್ ವೈಪರ್‌ಗಳು, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು, ಎಲೆಕ್ಟ್ರಿಕ್ ಸನ್‌ರೂಫ್ ನಾಲ್ಕು ಚಕ್ರಗಳಲ್ಲಿ ಡಿಸ್ಕ್ ಬ್ರೇಕ್ಗಳು, ಮುಂಭಾಗದ ಪಾರ್ಕಿಂಗ್ ಸಂವೇದಕಗಳು, 6 ಏರ್ಬ್ಯಾಗ್ಗಳು, ಕಾರ್ನರಿಂಗ್ ಬ್ರೇಕ್ ಕಂಟ್ರೋಲ್, ABS, ISOFIX ಚೈಲ್ಡ್ ಸೀಟ್ ಮೌಂಟ್ಗಳಂತಹ ವಿಭಿನ್ನ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಹೆಚ್ಚಿನ ಮೈಲೇಜ್ ನೀಡಲಿದೆ ಈ XUV 300 ಎಸ್ ಯುವಿ
ಈ ನೂತನ ಮಾದರಿಯಲ್ಲಿಶಕ್ತಿಶಾಲಿ ಎಂಜಿನ್ ನ್ನು ಅಳವಡಿಸಲಾಗಿದೆ. 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದ್ದು, 5,000 rpm ನಲ್ಲಿ 130 PS ಮತ್ತು 1,500-3,750 rpm ನಲ್ಲಿ 230 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು W6, W8 ಮತ್ತು W8(O) ನ ಮೂರು ರೂಪಾಂತರದಲ್ಲಿ ಈ ಎಸ್ ಯುವಿಯನ್ನು ಪರಿಚಯಿಸಲಾಗಿದೆ. ಇನ್ನು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಬೆಂಬಲದೊಂದಿಗೆ ಈ ಎಸ್ ಯುವಿ ಬರೋಬ್ಬರಿ 20 ಕಿಲೋಮೀಟರ್ ಮೈಲೇಜ್ ನೀಡಲಿದೆ.