Mahindra: 8 ಲಕ್ಷದ ಈ ಮಹಿಂದ್ರಾ ಕಾರ್ ಖರೀದಿಸಲು ಮುಗಿಬಿದ್ದ ಜನರು, ಸ್ಟಾಕ್ ಇಲ್ಲದೆ ಬುಕಿಂಗ್ ಸ್ಥಗಿತ

8 ಲಕ್ಷದ ಈ ಮಹಿಂದ್ರಾ ಕಾರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್, ಬುಕಿಂಗ್ ಸ್ಥಗಿತ

Mahindra XUV300 Booking Stop: ಭಾರತೀಯ ಆಟೋ ವಲಯದಲ್ಲಿ Mahindra ಕಂಪನಿಯ ಕಾರ್ ಗಳಿಗೆ ಹೆಚ್ಚಿನ ಬೇಡಿಕೆ ಇದೆ ಎನ್ನಬಹುದು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಮಹಿಂದ್ರಾ ಕಾರ್ ಗಳನ್ನೂ ಖರೀದಿಸುತ್ತಿದ್ದಾರೆ. ಇನ್ನು ದೇಶದ ಜನಪ್ರಿಯ ಕಾರ್ ತಯಾರಕ ಕಂಪನಿಯಾದ Mahindra ಮಾರುಕಟ್ಟೆಯಲ್ಲಿ ಈಗಾಗಲೇ XUV300 ಮಾದರಿಯನ್ನು ಪರಿಚಯಿಸಿದೆ. ಈ ಮಾದರಿಯು ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆಯನ್ನು ಪಡೆದುಕೊಂಡಿದೆ. ಆದರೆ ಕಂಪನಿಯು ಮಹಿಂದ್ರಾ XUV300 ಬುಕಿಂಗ್ ಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಂಡಿದೆ.

Mahindra XUV300 Booking Stop
Image Credit: Cardekho

ಮಹಿಂದ್ರಾ XUV300 ಕಾರಿನ ಬುಕಿಂಗ್ ಸ್ಥಗಿತ
ದೇಶದ ಜನಪ್ರಿಯ ಕಾರ್ ತಯಾಕರ ಕಂಪೆನಿಗಳಲ್ಲಿ ಒಂದಾದ Mahindra ತನ್ನ XUV300 ಮಾದರಿಯ ಬುಕಿಂಗ್ ಅನ್ನು ಸ್ಥಗಿತಗೊಳಿಸಿದೆ. ಉಳಿದಿರುವ ಸ್ಟಾಕ್ ಮುಗಿಯುವವರೆಗೆ ಕಾಂಪ್ಯಾಕ್ಟ್ ಎಸ್‌ಯುವಿ ಮಾರಾಟವಾಗಲಿದೆ. ಇನ್ನು XUV300 ಬುಕಿಂಗ್ ಅನ್ನು ಸ್ಥಗಿತಗೊಳಿಸಿದ ಬೆನ್ನಲ್ಲೇ ಶೀಘ್ರದಲ್ಲೇ facelift ಮಾದರಿಯನ್ನು ಬಿಡುಗಡೆ ಮಾಡಲಿದೆ. ಆ ಕಾರಣಕ್ಕೆ Order ಸ್ವೀಕರಿಸುವುದನ್ನು ನಿಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.

ನವೀಕರಿಸಿದ ವಿನ್ಯಾಸದೊಂದಿಗೆ ಬರಲಿದೆ XUV300
ಇನ್ನು ಮಾರುಕಟ್ಟೆಯಲ್ಲಿ ಹತ್ತು ಹಲವು ನವೀಕರಣದೊಂದಿಗೆ 2024 ರಲ್ಲಿಯೇ XUV300 ಅನ್ನು ಕಂಪನಿಯು ಪರಿಚಯಿಸಲಿದೆ. ವಿನ್ಯಾಸ, ವೈಶಿಷ್ಟ್ಯ, ಕಾರ್ಕ್ಷಮತೆಯ ವಿಚಾರದಲ್ಲಿ ನವೀಕರಣ ಮಾದರಿಯಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ. ಇನ್ನು ಮುಂಭಾಗ ಹೊಸದಾದ ಫ್ರಾಂಟ್ ಗ್ರಿಲ್, ಮರುವಿನ್ಯಾಸಗೊಳಿಸಲಾದ ಬಂಪರ್ ಪಡೆಯಲಿದೆ.

ಮಹೀಂದ್ರಾ XUV300 ಫೇಸ್‌ ಲಿಫ್ಟ್ ಆಕರ್ಷಕ DRL ಗಳೊಂದಿಗೆ ಸ್ಪ್ಲಿಟ್ LED ಹೆಡ್‌ ಲೈಟ್‌ ಗಳನ್ನು ಹೊಂದಿರಬಹುದು. ಹಿಂಭಾಗವು ಉತ್ತಮ ವಿನ್ಯಾಸವನ್ನು ಪಡೆಯುತ್ತದೆ ಮತ್ತು ಹೊಚ್ಚ ಹೊಸ LED ಟೈಲ್‌ ಲೈಟ್‌ ಗಳನ್ನು ಪಡೆಯುವ ಜೊತೆಗೆ ಹೊಸ ಬಂಪರ್ ಅನ್ನು ಒಳಗೊಂಡಿರಬಹುದು.

Mahindra XUV300 Features
Image Credit: Live Hindustan

8 ಲಕ್ಷ ಬೆಲೆಯ ಈ ನೂತನ ಮಾದರಿಯಲ್ಲಿನ ವೈಶಿಷ್ಟ್ಯಗಳೇನು…?
XUV300 1.5-ಲೀಟರ್ ಟರ್ಬೊ ಡೀಸೆಲ್, 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಪಡೆಯುವ ಸಾಧ್ಯತೆಯಿದೆ. ಅಲ್ಲದೆ ರೂಪಾಂತರಗಳನ್ನು ಅವಲಂಬಿಸಿ, ಇದು 6-ಸ್ಪೀಡ್ ಮ್ಯಾನುವಲ್ ಮತ್ತು ಸ್ವಯಂಚಾಲಿತ ಗೇರ್ ಬಾಕ್ಸ್ ಆಯ್ಕೆಗಳಲ್ಲಿ ಹೊಂದಬಹುದು. ಇದು ಪ್ರತಿ ಲೀಟರ್ ಗೆ 20 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಮಹೀಂದ್ರಾ XUV300 ಭಾರತೀಯ ಮಾರುಕಟ್ಟೆಯಲ್ಲಿ ರೂ.7.99 ಲಕ್ಷದಿಂದ ರೂ.14.76 ಲಕ್ಷದವರೆಗೆ ಎಕ್ಸ್ ಶೋರೂಂ ಬೆಲೆ ಹೊಂದಿದೆ.

Join Nadunudi News WhatsApp Group

ಇನ್ನು 10.25-ಇಂಚಿನ ಫ್ಲೋಟಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಡುಯಲ್ ಕ್ಲೇಮೇಟ್ ಕಂಟ್ರೋಲ್, ರೇರ್ ಎಸಿ ವೆಂಟ್ಸ್, ಎಲೆಕ್ಟ್ರಿಕ್ ಸನ್‌ರೂಫ್, 6 ಏರ್‌ ಬ್ಯಾಗ್‌, 4 ಡಿಸ್ಕ್ ಬ್ರೇಕ್ಸ್, TPMS (ಟ್ರೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ರೇರ್ ಪಾರ್ಕಿಂಗ್ ಕ್ಯಾಮೆರಾದಂತಹ ಹತ್ತಾರು ವೈಶಿಷ್ಟ್ಯಗಳನ್ನು ನೀವು XUV300 ಮಾದರಿಯಲ್ಲಿ ನೋಡಬಹುದು.

Mahindra XUV300 Price In India
Image Credit: Drive Spark

Join Nadunudi News WhatsApp Group