XUV 700: ಈ ಒಂದು ಕಾರಣಕ್ಕೆ ಈ ಮಹಿಂದ್ರಾ ಕಾರನ್ನು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ ಗ್ರಾಹಕರು.

ಈ ಕಾರಣಗಳಿಗೆ ಈ ಮಹಿಂದ್ರಾ ಕಾರನ್ನ ದಾಖಲೆಯ ಮಟ್ಟದಲ್ಲಿ ಖರೀದಿಸುತ್ತಿದ್ದಾರೆ ಜನರು

Mahindra XUV700 Price And Feature: Maruti Suzuki, Hyundai, Tata, Renault, Kia ಸೇರಿದಂತೆ ದೇಶದ ಇನ್ನಿತರ ಜನಪ್ರಿಯ ಕಾರ್ ತಯಾರಕ ಕಂಪನಿಗಳು ಹೆಚ್ಚಿನ ವೈಶಿಷ್ಟ್ಯಗಳಿರುವ SUV ಗಳನ್ನೂ ಪರಿಚಯಿಸಿದೆ. ಸದ್ಯ ಟೆಕ್ ವಲಯದಲ್ಲಿ SUV ಮಾದರಿಗಳು ಬಾರಿ ಬೇಡಿಕೆಯನ್ನು ಪಡೆದುಕೊಂಡಿದೆ. ಮಾರುಕಟ್ಟೆಯಲ್ಲಿ SUV ಖರೀದಿಗೆ ಗ್ರಾಹಕರಿಗೆ ಸಾಕಷ್ಟು ಆಯ್ಕೆಗಳು ಲಭ್ಯವಾಗುತ್ತಿದೆ.

ಗ್ರಾಹಕರು ಕಾರ್ ಖರೀದಿಸುವ ಮುನ್ನ ಕಾರ್ ನ ಮೈಲೇಜ್ ನ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಾರೆ. ಸುರಕ್ಷತಾ ಫೀಚರ್ ನ ಜೊತೆಗೆ ಬಜೆಟ್ ಬೆಲೆಯಲ್ಲಿ ಸಿಗುವಂತಹ ಕಾರ್ ಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಸದ್ಯ ಮಾರುಕಟ್ಟೆಯಲ್ಲಿ Mahindra ಕಂಪನಿಯ ಈ SUV ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಮಹಿಂದ್ರಾದ ಈ ಜನಪ್ರಿಯ ಮಾದರಿಯನ್ನು ಖರೀದಿಸುತ್ತಿದ್ದಾರೆ.

Mahindra XUV700 Price And Features
Image Credit: Autocarindia

ಈ ಒಂದು ಕಾರಣಕ್ಕೆ ಈ ಮಹಿಂದ್ರಾ ಕಾರನ್ನು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ ಗ್ರಾಹಕರು
ನಾವೀಗ ಈ ಲೇಖನದಲ್ಲಿ Mahindra XUV700 SUV ಬಗ್ಗೆ ಮಾಹಿತಿ ನೀಡಲಿದ್ದೇವೆ. ಮಹೀಂದ್ರಾ XUV700 ಭಾರತದಲ್ಲಿ 2 ಲಕ್ಷ ಯುನಿಟ್‌ ಗಳನ್ನು ಮಾರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ, ಕಂಪನಿಯು ಈ ಕಾರಿಗೆ 2 ಹೊಸ ಬಣ್ಣಗಳನ್ನು ಪರಿಚಯಿಸಿದೆ. XUV700 ಈಗ 2 ಹೊಸ ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಇನ್ನುಮುಂದೆ ಮಾರುಕಟ್ಟೆಯಲ್ಲಿ XUV700 ಇನ್ನಷ್ಟು ಜನಸ್ನೇಹಿಯಾಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸಲಿದೆ.

ಪ್ರಸ್ತುತ, ಈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಬ್ಲೂ, ಡ್ಯಾಜ್ಲಿಂಗ್ ಸಿಲ್ವರ್, ಮಿಡ್ನೈಟ್ ಬ್ಲಾಕ್, ಎವರೆಸ್ಟ್ ವೈಟ್, ರೆಡ್ ರೇಜ್ ಮತ್ತು ನಾಪೋಲಿ ಬ್ಲಾಕ್ ಬಣ್ಣಗಳಲ್ಲಿ ಲಭ್ಯವಿದೆ. ಈಗ ಡೀಪ್ ಫಾರೆಸ್ಟ್ ಮತ್ತು ಬರ್ನ್ಟ್ ಸಿಯೆನ್ನಾ ಎಂಬ 2 ಹೊಸ ಬಣ್ಣಗಳನ್ನು ಸೇರಿಸಲಾಗಿದೆ. ಹೊಸ ಮಹೀಂದ್ರಾ XUV700 SUV ಬೆಲೆ 13.99 ಲಕ್ಷ ಮತ್ತು 26.99 ಲಕ್ಷ ರೂ. ಎಕ್ಸ್ ಶೋ ರೂಂ ಬೆಲೆ ಹೊಂದಿದೆ. MX, AX, AX3, AX5 ಸೇರಿದಂತೆ ವಿವಿಧ ರೂಪಾಂತರಗಳ ಆಯ್ಕೆಯಲ್ಲಿ ಲಭ್ಯವಿದೆ. ಗ್ರಾಹಕರು ತಮ್ಮ ಆದ್ಯತೆಯ ರೂಪಾಂತರ ಮತ್ತು ಬಣ್ಣಗಳನ್ನು ಆಯ್ಕೆ ಮಾಡಬಹುದು.

Mahindra XUV700 Price In India
Image Credit: Cartrade

ಒಂದು ಲೀಟರ್ ಪೆಟ್ರೋಲ್ ನಲ್ಲಿ ಇಷ್ಟು ಮೈಲೇಜ್….!
ಈ ಮಾದರಿಯು ಪೆಟ್ರೋಲ್ ಮತ್ತು ಡೀಸೆಲ್ ಪವರ್‌ ಟ್ರೇನ್‌ ಗಳಲ್ಲಿ ಲಭ್ಯವಿದೆ. ಇದರ 2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 200 PS ಗರಿಷ್ಠ ಶಕ್ತಿ ಮತ್ತು 380 NM ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ. 2.2-ಲೀಟರ್ ಡೀಸೆಲ್ ಎಂಜಿನ್ 185 PS ಪವರ್ ಮತ್ತು 450 NM ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೊಸ XUV700 SUV ರೂಪಾಂತರಗಳಿಗೆ ಸರಿಹೊಂದುವಂತೆ 6-ಸ್ಪೀಡ್ ಮ್ಯಾನುವಲ್/6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಇದು AWD (ಆಲ್ ವೀಲ್ ಡ್ರೈವ್) ಮತ್ತು FWD (ಫ್ರಂಟ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದ್ದು, 17KMPL ವರೆಗೆ ಮೈಲೇಜ್ ನೀಡುತ್ತದೆ.

Join Nadunudi News WhatsApp Group

Mahindra XUV700 Mileage
Image Credit: Cartrade

Join Nadunudi News WhatsApp Group