XUV 700: 17 Km ಮೈಲೇಜ್ ಕೊಡುವ ಈ ಮಹಿಂದ್ರಾ ಕಾರ್ ದೇಶದಲ್ಲಿ ದಾಖಲೆಯ ಮಾರಾಟ, ಬೆಸ್ಟ್ ಫ್ಯಾಮಿಲಿ ಕಾರ್
17 Km ಮೈಲೇಜ್ ಕೊಡುವ ಈ ಮಹಿಂದ್ರಾ ಕಾರ್ ದೇಶದಲ್ಲಿ ದಾಖಲೆಯ ಮಾರಾಟ
Mahindra XUV700: Maruti Suzuki, Hyundai, Tata, Renault, Kia ಸೇರಿದಂತೆ ದೇಶದ ಇನ್ನಿತರ ಜನಪ್ರಿಯ ಕಾರ್ ತಯಾರಕ ಕಂಪನಿಗಳು ಹೆಚ್ಚಿನ ವೈಶಿಷ್ಟ್ಯಗಳಿರುವ ಕಾರ್ ಗಳನ್ನ ಪರಿಚಯಿಸುತ್ತಿರುತ್ತವೆ. ಇವುಗಳ ಜೊತೆಗೆ ಭಾರತದಲ್ಲಿ ವಿಶ್ವಾಸಾರ್ಹ ವಾಹನ ತಯಾರಕ ಸಂಸ್ಥೆಯಾಗಿ Mahindra ಗುರುತಿಸಿಕೊಂಡಿದೆ.
ಮಹಿಂದ್ರಾ ಕಂಪನಿ ಅತ್ಯಾಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯವನ್ನು ಅಳವಡಿಸುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ. ಇದೀಗ ನೀವು ನಿಮ್ಮ ಕುಟುಂಬಕ್ಕಾಗಿ ಒಂದೊಳ್ಳೆ ಕಾರನ್ನು ತೆಗೆದುಕೊಳ್ಳುವ ಯೋಜನೆ ಹಾಕಿಕೊಂಡಿದ್ದರೆ, ಈ ಮಾಹಿತಿ ನಿಮಗೆ ಉಪಯುಕ್ತವಾಗಲಿದೆ.
Mahindra XUV700 Features
ಮಹೀಂದ್ರಾ ಎಕ್ಸ್ ಯುವಿ 700 ನಲ್ಲಿ10.25-inch touchscreen infotainment system, 10.25-inch digital instrument cluster, 6-way power driver’s seat, 12-speaker audio system, sunroof, dual-zone climate control ಅನ್ನು ಅಳವಡಿಸಲಾಗಿದೆ. ಹಾಗೆ ಸುರಕ್ಷತಾ ಫೀಚರ್ ಆಗಿ 7 airbags, ESP, TPMS, ADAS and 360-degree camera ಅನ್ನು ಅಳವಡಿಸಲಾಗಿದೆ.
Mahindra XUV700 Mileage
Mahindra XUV700 ಪೆಟ್ರೋಲ್ ಮತ್ತು ಡೀಸೆಲ್ ಪವರ್ ಟ್ರೇನ್ ಗಳಲ್ಲಿ ಲಭ್ಯವಿದೆ. ಇದರ 2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 200 PS ಗರಿಷ್ಠ ಶಕ್ತಿ ಮತ್ತು 380 NM ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ. 2.2-ಲೀಟರ್ ಡೀಸೆಲ್ ಎಂಜಿನ್ 185 PS ಪವರ್ ಮತ್ತು 450 NM ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೊಸ XUV700 SUV ರೂಪಾಂತರಗಳಿಗೆ ಸರಿಹೊಂದುವಂತೆ 6-ಸ್ಪೀಡ್ ಮ್ಯಾನುವಲ್/ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಇದು AWD ಮತ್ತು FWD ತಂತ್ರಜ್ಞಾನವನ್ನು ಹೊಂದಿದ್ದು, ಪ್ರತಿ ಲೀಟರ್ ಗೆ 17 ಕಿಲೋಮೀಟರ್ ಮೈಲೇಜ್ ನೀಡುತ್ತದೆ.
Mahindra XUV700 Price
ದೇಶೀಯ ಮಾರುಕಟ್ಟೆಯಲ್ಲಿ Mahindra XUV700 13.99 ಲಕ್ಷದಿಂದ 26.04 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಹಾಗೆ Everest White, Midnight Black, Napoli Black ಸೇರಿದಂತೆ ಹಲವು ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರ ಕೈ ಸೇರುತ್ತದೆ.