Ads By Google

Malavika Avinash: ದಿಡೀರ್ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ ಮಾಳವಿಕಾ.

Actress Malavika Avinash seems to be suffering from migraine problem. So no one should take this lightly, he said
Ads By Google

Malavika Avinash Health: ಕನ್ನಡ ಚಿತ್ರರಂಗದ ಖ್ಯಾತ ನಟಿ ಮಾಳವಿಕಾ ಅವಿನಾಶ್ (Malavika Avinash) ಅವರು ಸಾಕಷ್ಟು ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಟಿ ಮಾಳವಿಕಾ ಅವಿನಾಶ್ ಅವರು ಆನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಾಳವಿಕಾ ಅವರು ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಟಿ ಮಾಳವಿಕಾ ಅವರು ತಮಗಾದ ಅರೋಗ್ಯ ಸಮಸ್ಯೆಯ ಬಗ್ಗೆ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಅಲ್ಲದೆ ಈ ರೀತಿಯಾದ ಸಮಸ್ಯೆಯನ್ನು ನೆಗ್ಲೆಟ್ ಮಾಡಬೇಡಿ ಎಂದು ಸಲಹೆಯನ್ನು ಅವರು ನೀಡಿದ್ದಾರೆ.

Image Credit: vijayavani

ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿರುವ ನಟಿ ಮಾಳವಿಕಾ ಅವಿನಾಶ್
ನಟಿ ಮಾಳವಿಕಾ ಅವಿನಾಶ್ ಅವರು ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ. ಹಾಗಾಗಿ ಇದನ್ನು ಯಾರು ಹಗುರವಾಗಿ ತೆಗೆದುಕೊಳ್ಳಬೇಡಿ ಎಂದು ಅವರು ಹೇಳಿದ್ದಾರೆ. ಕೇವಲ ತಲೆನೋವು ಎಂದು ತಾತ್ಸಾರ ಮಾಡಿದರೆ ನನ್ನ ರೀತಿಯಲ್ಲಿಯೇ ನೀವು ಆಸ್ಪತ್ರೆಯಲ್ಲಿ ಮಲಗಬೇಕಾಗುತ್ತದೆ ಎಂದು ಸಣ್ಣ ಎಚ್ಚರಿಕೆಯನ್ನು ಅವರು ನೀಡಿದ್ದಾರೆ.

ನಟಿ ಮಾಳವಿಕಾ ಅವಿನಾಶ್ ಅವರು ಆಸ್ಪತ್ರೆಯಲ್ಲಿರುವ ಫೋಟೋ ವೈರಲ್
ಮೈಗ್ರೇನ್ ಸಮಸ್ಯೆಯನ್ನು ಹೇಳಿಕೊಂಡು ಆಸ್ಪತ್ರೆಯ ಬೆಡ್ ನಿಂದ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಟಿ ಮಾಳವಿಕಾ ಚೇತರಿಸಿಕೊಂಡು ಮನೆಗೆ ಬರಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

Image Credit: instagram

ಇನ್ನು ನಟಿ ಮಾಳವಿಕಾ ಅವಿನಾಶ್ ಅವರ ಫೋಟೋ ನೋಡಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ನಟಿ ಮಾಳವಿಕಾ ಅವರ ಈ ಫೋಟೋ ನೋಡಿದರೆ ನಟಿ ಮುಖ ಬದಲಾಗಿದೆ. ಮಾಳವಿಕಾ ಹೌದೋ ಅಲ್ಲವೋ ಎಂಬ ಪ್ರಶ್ನೆ ಕೆಲವರಿಗೆ ಮೂಡಿದೆ. ಆದರೆ ನಟಿಯ ಅರೋಗ್ಯ ಸಮಸ್ಯೆಯಿಂದ ಅವರ ಮುಖ ಹಾಗೆ ಕಾಣಿಸುತ್ತಿದೆ.

Ads By Google
Sujatha Poojari: Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in