Avinash Son: ನಟ ಅವಿನಾಶ್ ಮಗ ಹೀಗಿರಲು ಕಾರಣ ಏನು, ಮಗನ ಬಗ್ಗೆ ಮಾಳವಿಕಾ ಅವಿನಾಶ್ ಮಾತು.
ಇವನು ನಮಗೆ ದೇವರು ಕೊಟ್ಟ ಮಗ ಎಂದು ಮಗನ ಬಗೆಗಿನ ಪ್ರೀತಿಯನ್ನ ವೀಕೆಂಡ್ ವಿಥ್ ರಮೇಶ್ ಶೋ ನಲ್ಲಿ ವ್ಯಕ್ತಪಡಿಸಿದ್ದಾರೆ ಮಾಳವಿಕಾ ಅವಿನಾಶ್.
Actor Avinash In Weekend With Ramesh: ಕನ್ನಡಿಗರ ನೆಚ್ಚಿನ ವೀಕೆಂಡ್ ವಿತ್ ರಮೇಶ್ ಶೋ (Weekend With Ramesh Season 5) ಆರಂಭಗೊಂಡು ಈಗಾಗಲೇ ನಾಲ್ಕು ವಾರಗಳನ್ನು ಪೂರೈಸಿದೆ. ನಾಲ್ಕು ವಾರಗಳಲ್ಲಿ ಐದು ಸಾಧಕರ ಪರಿಚಯವನ್ನು ವೀಕೆಂಡ್ ವಿತ್ ವೇದಿಕೆ ಪರಿಚಯಿಸಿದೆ.
ಇನ್ನು ಈ ವಾರ ಆರನೇ ಸಾಧಕರಾಗಿ ಕನ್ನಡದ ಹೆಸರಾಂತ ನಟರಾದ ಅವಿನಾಶ್ (Avinash) ಅವರು ಸಾಧಕರ ಕುರ್ಚಿಯನ್ನು ಏರಲಿದ್ದಾರೆ. ನಟ ಅವಿನಾಶ್ ಅವರು ಬಂದಿರುವ ಎಪಿಸೋಡ್ ಇಂದು ರಾತ್ರಿ 9 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಸಾಧಕರ ಕುರ್ಚಿಯಲ್ಲಿ ಕುಳಿತು ನಟ ಅವಿನಾಶ್ ಅವರು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಮಗನೆ ದೇವರು ಎಂದ ಮಾಳವಿಕ ಅವಿನಾಶ್
ವೀಕೆಂಡ್ ವಿತ್ ರಮೇಶ್ ಶೋ ನಲ್ಲಿ ಅವಿನಾಶ್ ಮತ್ತು ಮಾಳವಿಕ ಅವರ ಮಗನ ಪರಿಚಯ ಆಗಿದೆ. ಅವಿನಾಶ್ ಮಾಳವಿಕ ಅವರಿಕೆ ವಿಶೇಷಚೇತನ ಒಬ್ಬ ಮುದ್ದಾದ ಮಗ ಇದ್ದಾನೆ. ತಮ್ಮ ಮಗನ ಬಗ್ಗೆ ಮಾತಾನಾಡಿದ ಅವಿನಾಶ್ ದಂಪತಿ ಮಗ ದೇವರ ಕೊಡುಗೆಯಲ್ಲ, ಅವನೇ ದೇವರು ಎಂದಿದ್ದಾರೆ.
ಪ್ರತಿಯೊಬ್ಬರಿಗೂ ತಮ್ಮ ಮಕ್ಕಳ ಬಗ್ಗೆ ನೂರಾರೂ ಕನಸು ಕಂಡಿರುತ್ತಾರೆ. ಕೆಲವೊಂದು ಬಾರಿ ನಮ್ಮ ನೀರಿಕ್ಷೆ ಸುಳ್ಳಾದಾಗ ನೋವು ಆಗುವುದು ಸಹಜ. ಕಾರಣ ಸಮಾಜದ ದೃಷ್ಠಿಕೋನವೇ ಸರಿ ಇಲ್ಲದಿದ್ದಾಗ ನಮ್ಮ ಕಾರ್ಯಕ್ಷಮತೆ ಬಗ್ಗೆ ತಲೆಕೆಡಿಸಿಕೊಳ್ಳಬಾರದು ಎಂದು ಮಾಳವಿಕ ಅವಿನಾಶ್ ದಂಪತಿ ತಮ್ಮ ಮಗನ ಬಗ್ಗೆ ಹೇಳಿದ್ದಾರೆ.
ಅವಿನಾಶ್ ಅವರ ಮಗನ ಹುಟ್ಟಿನಿಂದಲೇ ಹೀಗೆ ಇದ್ದಾನೆ ಅನ್ನುವ ವಿಷಯವನ್ನ ಮಾಳವಿಕಾ ಅವರು ಹೇಳಿಕೊಂಡಿದ್ದಾರೆ. ಅವನು ಹುಟ್ಟಿನಿಂದಲೇ ಹೀಗೆ ಇದ್ದು ಇವನೇ ನಮ್ಮ ಪ್ರಪಂಚ ಎಂದು ಮಾಳವಿಕಾ ಅವಿನಾಶ್ ಮಟ್ಟಿ ಅವಿನಾಶ್ ಅವರು ಹೇಳಿದ್ದಾರೆ.
ವೀಕೆಂಡ್ ವಿತ್ ರಮೇಶ್ ಶೋ ನಲ್ಲಿ ಮಗನ ಬಗ್ಗೆ ಹೇಳಿಕೊಂಡ ಮಾಳವಿಕ ಅವಿನಾಶ್ ದಂಪತಿ
ಅವನ ಬಗ್ಗೆ ಒಬ್ಬೊಬ್ಬರು ಒಂದು ರೀತಿ ಮಾತನಾಡಿದ್ದರು. ಕೆಲವೊಮ್ಮೆ ಅನಿಸುತ್ತದೆ, ನಮ್ಮ ಮನೆಯಲ್ಲಿ ಮಾತ್ರ ಯಾಕೆ ಹೀಗೆ, ಎಲ್ಲರ ಮನೆಯ ಮಕ್ಕಳು ಶಾಲೆಗೆ ಹೋಗುತ್ತಾರೆ. ನಾವು ಸೋಶಿಯಲ್ ಗ್ಯಾದರಿಂಗ್ ಹೋಗಲ್ಲ. ಅಲ್ಲೊಂದು ದೇವಸ್ಥಾನ ಇದೆ ತಾಯತ ಕಟ್ಟಿಸಿ ಎನ್ನುತ್ತಾರೆ ಎಂದು ಭಾವನಾತ್ಮಕ ಮಾತುಗಳನ್ನು ಮಾಳವಿಕ ಅವಿನಾಶ್ ವೀಕೆಂಡ್ ವಿತ್ ರಮೇಶ್ ಶೋ ನಲ್ಲಿ ಹೇಳಿದ್ದಾರೆ.