Manaswini: ಮದುವೆಯಾಗದ ಎಲ್ಲಾ ಮಹಿಳೆಯರಿಗೆ ಪ್ರತಿ ತಿಂಗಳು 500 ರೂ, ಸಿದ್ದರಾಮಯ್ಯ ಸರ್ಕಾರದ ಇನ್ನೊಂದು ಘೋಷಣೆ.
ಮನಸ್ವಿನಿ ಯೋಜನೆಯ ಅಡಿಯಲ್ಲಿ ಮದುವೆಯಾದ ಮಹಿಳೆಯರಿಗೆ ಸಿಗಲಿದೆ ಪ್ರತಿ ತಿಂಗಳು 500 ರೂಪಾಯಿ.
Karnataka Govt Manaswini Scheme: ಸದ್ಯ ರಾಜ್ಯ ಸರ್ಕಾರ (State Govt) ಮಹಿಳೆಯರಿಗಾಗಿ ಸಾಲು ಸಾಲು ಯೋಜನೆಗಳನ್ನು ನೀಡುತ್ತಿದೆ. ವಿಧಾನಸಭಾ ಚುನಾವಣಾ ಸಮಯದಲ್ಲಿ ಕಾಂಗ್ರೆಸ್ ಸರ್ಕಾರ ಘೋಷಿಸಿದ್ದ ಐದು ಯೋಜನೆಗಳು ಕೂಡ ಮಹಿಳೆಯರಿಗೆ ಹೆಚ್ಚು ಅನುಕೂಲವನ್ನು ಮಾಡಿಕೊಟ್ಟಿದೆ ಎಂದರೆ ತಪ್ಪಾಗಲಾರದು. ಇತ್ತೀಚೆಗಂತೂ ಹಲವು ಯೋಜನೆಯನ್ನು ಸರ್ಕಾರ ಮಹಿಳೆಯರಿಗಾಗಿ ಅಭಿವೃದ್ಧಿ ಪಡಿಸುತ್ತಿದೆ.
ಮಹಿಳಾ ಸಬಲೀಕರಣ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಬಡ್ಡಿ ರಹಿತ ಸಾಲ ನೀಡುವುದಾಗಿ ಘೋಷಿಸಿದ ರಾಜ್ಯ ಸರ್ಕಾರ ಇದೀಗ ಅವಿವಾಹಿತ ಮಹಿಳೆಯರಿಗೆ ಪ್ರತಿ ತಿಂಗಳು ಆರ್ಥಿಕ ನೆರವಾಗಲು ಹೊಸ ಯೋಜನೆಯನ್ನು ಪರಿಚಯಿಸಲು ಮುಂದಾಗಿದೆ. ಅವಿವಾಹಿತ ಮಹಿಳೆಯರಿಗೆ ಪರಿಚಯಿಸಿರುವ ಯೋಜನೆ ಯಾವುದು..? ಮಹಿಳೆಯರಿಗೆ ಈ ಯೋಜನೆಯಡಿ ಎಷ್ಟು ಹಣ ಸಿಗಲಿದೆ ಎನ್ನುವುದ ಬಗ್ಗೆ ವಿವರ ಇಲ್ಲಿದೆ.
ಮಹಿಳೆಯರಿಗಾಗಿ ರಾಜ್ಯ ಸರ್ಕಾರದ ಹೊಸ ಯೋಜನೆ
ನವರಾತ್ರಿ ಹಾಗೂ ದೀಪಾವಳಿ ಹಬ್ಬದ ವಿಶೇಷಕ್ಕೆ ಸರ್ಕಾರ ಮಹಿಳೆಯರಿಗೆ ಸಾಲು ಸಾಲು ಸಿಹಿಸುದ್ದಿ ನೀಡುತ್ತಿದೆ. ಈ ಹಬ್ಬದ ವಿಶೇಷಕೆ ರಾಜ್ಯ ಸರ್ಕಾರ ಮಹಿಳೆಯರಿಗಾಗಿ ಮಗದೊಂದು ಯೋಜನೆಯನ್ನು ಜಾರಿಗೊಳಿಸಿದೆ. ರಾಜ್ಯ ಸರ್ಕಾರದ ಈ ಯೋಜನೆಯು 40 ರಿಂದ 64 ವರ್ಷ ಒಳಗಿನ ವಿಚ್ಛೇಧಿತ ಹಾಗೂ ಅವಿವಾಹಿತ ಮಹಿಳೆಯರಿಗೆ ಲಭ್ಯವಾಗಲಿದೆ.
ಅವಿವಾಹಿತ ಮಹಿಳೆಯರಿಗೆ ಸಿಗಲಿದೆ ಮಾಸಿಕ 500 ರೂ.
ಇನ್ನು 2013 ರಲ್ಲಿ ಜಾರಿಗೊಳಿಸಿದ “ಮನಸ್ವಿನಿ ಯೋಜನೆ” (Manaswini Scheme) ಯನ್ನು ಇದೀಗ ಪುನಃ ಜಾರಿಗೆ ತಂದು ಈ ಯೋಜನೆಯಡಿ ವಿಚ್ಛೇದಿತ ಮಹಿಳೆ ಹಾಗೂ ಅವಿವಾಹಿತ ಮಹಿಳೆಯರಿಗೆ ಆರ್ಥಿಕ ನೆರವಾಗುವ ಯೋಜನೆಯನ್ನು ಸರ್ಕಾರ ಹೂಡಿದೆ. ರಾಜ್ಯ ಸರ್ಕಾರದ ಈ ಮನಸ್ವಿನಿ ಯೋಜನೆಯ ಅಡಿಯಲ್ಲಿ 40 ರಿಂದ 64 ವರ್ಷ ಒಳಗಿನ ವಿಚ್ಛೇದಿತ ಹಾಗೂ ಅವಿವಾಹಿತ ಮಹಿಳೆಯಾರು ಮಾಸಿಕ 500 ರೂ. ನೀಡಲು ಮುಂದಾಗಿದೆ.
ಮಹಿಳೆಯರಿಗಾಗಿ 2 ಲಕ್ಷ ರೂ. ಬಡ್ಡಿರಹಿತ ಸಾಲ
ಸ್ತ್ರೀಶಕ್ತಿ ಸಂಘಗಳ ಮೂಲಕ ಮಹಿಳಾ ಸಬಲೀಕರಣ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಒಟ್ಟು 1 ಲಕ್ಷ 65 ಸಾವಿರ ಸ್ತ್ರೀ ಶಕ್ತಿ ಗುಂಪುಗಳಿಗೆ ತಲಾ ರೂ. 25000 ಆವರ್ತ ನಿಧಿ ನೀಡಲು ಸರ್ಕಾರ ನಿರ್ಧರಿಸಿದೆ. ಇದಲ್ಲದೆ ಸ್ತ್ರೀ ಶಕ್ತಿ ಸಂಘಟನೆಗಳಿಗೆ ರೂ. 2 ಲಕ್ಷದವರೆಗೆ ಬಡ್ಡಿರಹಿತ ಸಾಲ ಸೌಲಭ್ಯವನ್ನು ನೀಡಲು ಯೋಜನೆ ಹೂಡಲಾಗಿದೆ.