ಚಿತ್ರರಂಗಕ್ಕೆ ಯಮರಾಯನ ಪ್ರವೇಶವಾಗಿದೆ ಎಂದು ಹೇಳಬಹುದು. ಹೌದು ಕಳೆದ ಎರಡು ವರ್ಷದಲ್ಲಿ ಚಿತ್ರರಂಗದ ಹಲವು ಗಣ್ಯ ನಟ ನಟಿಯರು ಮತ್ತು ಗಣ್ಯ ಕಲಾವಿದರು ಇಹಲೋಕವನ್ನ ತ್ಯಜಿಸಿದ್ದು ಇದು ಜನರ ಬೇಸರಕ್ಕೆ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಕರೋನ ಮಹಾಮಾರಿ ದೇಶದಲ್ಲಿ ಕಾಣಿಸಿಕೊಂಡ ನಂತರ ದೇಶದಲ್ಲಿ ಅದೆಷ್ಟೋ ಜನರು ಇಹಲೋಕವನ್ನ ತ್ಯಜಿಸಿದ್ದು ಇದು ಜನರ ನೋವಿಗೆ ಕಾರಣವಾಗಿದೆ ಮತ್ತು ಕರೋನ ಮಹಾಮಾರಿಯ ಕಾರಣ ದೇಶದ ಚಿತ್ರರಂಗದ ಹಲವು ಗಣ್ಯ ವ್ಯಕ್ತಿಗಳು ಇಹಲೋಕವನ್ನ ತ್ಯಜಿಸಿದ್ದಾರೆ ಎಂದು ಹೇಳಬಹುದು.
ಇನ್ನು ಈಗ ವಿಷಯಕ್ಕೆ ಬರುವುದಾದರೆ, ಹಲವು ಸಿನಿಮಾಗಳಲ್ಲಿ ನಟನೆಯನ್ನ ಮಾಡಿ, ಅದೆಷ್ಟೋ ಜಾನಪದ ಹಾಡುಗಳನ್ನ ಹಾದಿ ಹಲವು ಅಭಿಮಾನಿಗಳನ್ನ ಗಳಿಸಿಕೊಂಡ ಖ್ಯಾತ ಗಾಯಕರೊಬ್ಬರು ಇಹಲೋಕವನ್ನ ತ್ಯಜಿಸಿದ್ದು ಇಡೀ ಚಿತ್ರರಂಗ ಇವರ ಅಗಲಿಕೆಗೆ ಕಂಬನಿಯನ್ನ ಮಿಡಿದಿದೆ ಎಂದು ಹೇಳಬಹುದು. ಹಾಗಾದರೆ ಈ ಖ್ಯಾತ ನಟ ಮತ್ತು ಗಾಯಕ ಯಾರು ಮತ್ತು ಅವರಿಗೆ ಏನಾಗಿತ್ತು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಹೌದು ಸ್ನೇಹಿತರೆ ತಮಿಳು ಚಿತ್ರರಂಗದ ಜನಪ್ರಿಯ ಹಿನ್ನಲೆಯ ಗಾಯಕ ಮತ್ತು ಜಾನಪದ ಕಲಾವಿದ ಮಾಣಿಕ್ಯ ವಿನಾಯಗಂ ಅವರು ಹೃದಯಸಂಬಂಧಿ ಖಾಯಿಲೆಯಿಂದ ಇಹಲೋಕವನ್ನ ತ್ಯಜಿಸಿದ್ದಾರೆ. ಮಾಣಿಕ್ಯ ವಿನಾಯಗಂ ತಮಿಳುನಾಡಿನ ಜನಪ್ರಿಯ ಜಾನಪದ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ಮಾಣಿಕ್ಯ ವಿನಾಯಗಂ ತಮಿಳು ಚಿತ್ರಗಳಲ್ಲಿ ನಟಿಸುವುದರ ಜೊತೆಗೆ ಮನ್ಮಧ ರಸ (ತಿರುಡ ತಿರುಡಿ), ಸುಬ್ಬಮ್ಮ ಸುಬ್ಬಮ್ಮ (ರೋಜಾ ಕೂಟಂ) ಮತ್ತು ಕಟ್ಟು ಕಟ್ಟು (ತಿರುಪಾಚಿ) ಸೇರಿದಂತೆ ಹಲವು ಜನಪ್ರಿಯ ಗೀತೆಗಳಿಗೆ ಧ್ವನಿ ನೀಡಿದ್ದು ಸುಮಾರು 800 ಕ್ಕೂ ಅಧಿಕ ಹಾಡುಗಳನ್ನ ಹಾಡುವುದರ ಮೂಲಕ ಚಿತ್ರರಂಗಕ್ಕೆ ಅಪಾರವಾದ ಸೇವೆಯನ್ನ ಸಲ್ಲಿಸಿದ್ದರು ಮಾಣಿಕ್ಯ ವಿನಾಯಗಂ ಅವರು.
ಇನ್ನು ಮಾಣಿಕ್ಯ ವಿನಾಯಗಂ ಅವರು ತಿರುಡಾ ತಿರುಡಿ, ವೆಟ್ಟೈಕಾರನ್, ಸಂತೋಷ್ ಮತ್ತು ಸುಬ್ರಮಣ್ಯಂ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಸುಮಾರು 78 ವರ್ಷ ವಯಸ್ಸಿನ ಮಾಣಿಕ್ಯ ವಿನಾಯಗಂ ಅವರು ಕೆಲವು ಸಮಯಗಳಿಂದ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರು ಮತ್ತು ಅದಕ್ಕೆ ಸರಿಯಾದ ಚಿಕಿತ್ಸೆಯನ್ನ ಕೂಡ ಪಡೆದುಕೊಳ್ಳುತ್ತಿದ್ದರು, ಆದರೆ ನಿನ್ನೆ ಹಠಾತ್ ಆರೋಗ್ಯದಲ್ಲಿ ತಿವಾರದ ಏರುಪೇರಾಗಿ ಅವರು ಇಹಲೋಕವನ್ನ ತ್ಯಜಿಸಿದ್ದಾರೆ. ಇನ್ನು ಅವರ ನಿಧನದ ಸುದ್ದಿ ತಮಿಳು ಚಿತ್ರರಂಗಕ್ಕೆ ಬರ ಸಿಡಿಲು ಬಡಿದಂತಾಗಿದ್ದು, ನಟ ಶರತ್‍ಕುಮಾರ್ ಮತ್ತು ಮನೋಬಾಲಾ ಸೇರಿದಂತೆ ಹಲವಾರು ಗಣ್ಯರು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಸ್ನೇಹಿತರೆ ಈ ಖ್ಯಾತ ಗಾಯಕನ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿ ನಾನು ನೀವು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ.