Solar Car: ಈ ಕಾರ್ ಕೇವಲ 80 ಪೈಸೆಗೆ 1 ಕಿಲೋ ಮೀಟರ್ ಚಲಿಸಲಿದೆ, ಹೊಸ ಸೋಲಾರ್ ಕಾರ್ ಬಿಡುಗಡೆ.
Solar Car Mileage: ಇದೀಗ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚುತ್ತಿದೆ. ಇದೀಗ ಯಾವುದೇ ರೀತಿಯಲ್ಲಿ ಪೆಟ್ರೋಲ್ (Petrol), ಡೀಸೆಲ್ (Diesel) ಖರ್ಚಿಲ್ಲದೆ ಚಲಿಸಲು ವಿಭಿನ್ನವಾದ ಸೋಲಾರ್ ಕಾರ್ ಪರಿಚಯಗೊಂಡಿದೆ.
ಗಂಟೆಗೆ 80 ಕಿಲೋಮೀಟರ್ ವೇಗದಲ್ಲಿ ಈ ಸೋಲರ್ ಕಾರ್ ಚಲಿಸುತ್ತದೆ. ಎಂಜಿನ್ ಇಲ್ಲದ ಕಾರಣ ಕಾರ್ ಸ್ಟಾರ್ ಮಾಡಿದರು ಶಬ್ದ ಬರುವುದಿಲ್ಲ, ಎಂಜಿನ್ ಇಲ್ಲದಿದ್ದರೂ ಕೂಡ ಗೇರ್ ನ ವ್ಯವಸ್ಥೆ ಸೋಲಾರ್ ಕಾರ್ ನಲ್ಲಿದೆ.
ಸೋಲಾರ್ ಕಾರ್
ಇದೀಗ ತಮ್ಮ ಬಳಿ ಇರುವ ಕಾರನ್ನೇ ಸೋಲಾರ್ ಕಾರ್ ನನ್ನಾಗಿ ಬದಲಿಸಿ ವ್ಯಕ್ತಿಯೊಬ್ಬರು ಎಲ್ಲರ ಗಮನ ಸೆಳೆದಿದ್ದಾರೆ. ಪಶ್ಚಿಮ ಬಂಗಾಳದ ಬಂಕುರಾ ನಿವಾಸಿ ಮನೋಜಿತ್ ಮೊಂಡಲ್ (Manojith Mondal) ಅವರೇ ಸೌರಶಕ್ತಿ ಚಾಲಿತ ಕಾರನ್ನು ಓಡಿಸಿ ಗಮನ ಸೆಳೆದಿದ್ದಾರೆ. ವೃತ್ತಿಯಲ್ಲಿ ಉದ್ಯಮಿಯಾಗಿರುವ ಮನೋಜಿತ್, ನ್ಯಾನೋ ಕಾರನ್ನು ಸೋಲಾರ್ ಕಾರ್ ಆಗಿ ಪರಿವರ್ತಿಸಿದ್ದಾರೆ.
ಈ ಪೆಟ್ರೋಲ್ ರಹಿತ ಸೋಲರ್ ಕಾರ್ ಕೇವಲ 30 ರಿಂದ 35 ರೂ. ಗೆ 100 ಕಿಲೋಮೀಟರ್ ದೂರ ಓಡುತ್ತದೆ. ಅಲ್ಲದೆ ಪ್ರತಿ ಕಿಲೋಮೀಟರ್ ಗೆ ಕಾರಿಗೆ ತಗಲುವ ವೆಚ್ಚ ಕೇವಲ 80 ಪೈಸೆ. ಈ ಸೋಲಾರ್ ಕಾರು ಸದ್ದೇ ಇಲ್ಲದಂತೆ ನಾಲ್ಕನೇ ಗೇರ್ ನಲ್ಲಿ ಗಂಟೆಗೆ 80 ಕಿಲೋಮೀಟರ್ ವೇಗದಲ್ಲಿ ಈ ಸೋಲರ್ ಕಾರ್ ಚಲಿಸುತ್ತದೆ.
ಇತೀಚಿನ ದಿನಗಳಲ್ಲಿ ಪೆಟ್ರೋಲ್ ಡೀಸೆಲ್ ನ ಬೆಲೆ ಹೆಚ್ಚಾಗುತ್ತಿದೆ. ಹಾಗಾಗಿ ಜನರು ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗುತ್ತಿದ್ದಾರೆ. ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಾಗುತ್ತಿರುವ ಸಮಯದಲ್ಲಿ ಇದೀಗ ಈ ಸೋಲರ್ ಕಾರ್ ಎಲ್ಲರ ಗಮನ ಸೆಳೆಯುತ್ತಿದೆ.