Marriage Certificate: ನವ ದಂಪತಿಗಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಗಿಫ್ಟ್, ದಂಪತಿಗಳ ದೊಡ್ಡ ಸಮಸ್ಯೆಗೆ ಬ್ರೇಕ್ ಹಾಕಿದ ಸರ್ಕಾರ.
ಹೊಸದಾಗಿ ಮದುವೆಯಾದ ದಂಪತಿಗಳಿಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ.
Marriage Certificate Update: ಇದೀಗ ಹೊಸದಾಗಿ ಮದುವೆಯಾದ ಹಾಗು ಮದುವೆಯಾಗುವ ನವ ದಂಪತಿಗಳಿಗೆ ಹೊಸ ಸುದ್ದಿ ಒಂದು ಹೊರ ಬಿದ್ದಿದೆ. ನವ ವಿವಾಹಿತರಿಗೆ ಹೊಸ ಸೌಲಭ್ಯವನ್ನು ಕೇಂದ್ರ ಸರ್ಕಾರ ಒದಗಿಸಿ ಕೊಡುತ್ತಿದೆ.
ನವ ವಿವಾಹಿತರಿಗೆ ಸರ್ಕಾರದಿಂದ ಸಿಹಿ ಸುದ್ದಿ
ಈಗಾಗಲೇ ಜನನ, ಮರಣ ಪತ್ರವನ್ನು ಗ್ರಾಮ ಪಂಚಾಯತಿಗಳಲ್ಲೇ ವಿತರಿಸುವುದಕ್ಕೆ ಸರ್ಕಾರ ಆದೇಶಿಸಿತ್ತು. ಈ ಬೆನ್ನೆಲ್ಲೇ ಇನ್ನುಮುಂದೆ ಹಿಂದೂ ವಿವಾಹ ನೋಂದಣಿ ಪ್ರಮಾಣ ಪತ್ರ ಆನ್ ಲೈನ್ ಮೂಲಕವೇ ಲಭ್ಯವಾಗುವಂತಹ ವ್ಯವಸ್ಥೆ ಜಾರಿಗೊಳಿಸುತ್ತಿದೆ. ಹೀಗಾಗಿ ಶೀಘ್ರವೇ ಆನ್ ಲೈನ್ ನಲ್ಲಿ ನವ ವಿವಾಹಿತರಿಗೆ ವಿವಾಹ ಪ್ರಮಾಣಪತ್ರ ಲಭ್ಯವಾಗಲಿದೆ.
ಈ ಬಗ್ಗೆ ಮಾಹಿತಿಯನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕಾರಿ ಬಿ ಆರ್ ಮಮತಾ ಅವರು ಮಾಹಿತಿ ನೀಡಿದ್ದಾರೆ. ನೋಂದಣಿ ಮತ್ತು ಮುದ್ರಣಕ ಇಲಾಖೆಯಿಂದ ಹಿಂದೂ ವಿವಾಹ ಪ್ರಮಾಣಪತ್ರವನ್ನು ಆನ್ ಲೈನ್ ಮೂಲಕವೇ ವಿತರಿಸಲಾಗುವುದಕ್ಕಾಗಿ ಸಿದ್ಧತೆ ಕೈಗೊಳಲಾಗುತ್ತಿದೆ. ಆ ಪ್ರಕ್ರಿಯೆ ಮುಗಿದ ನಂತರ ಶೀಘ್ರದಲ್ಲಿಯೇ ವಿವಾಹ ನೋಂದಣಿ ಪ್ರಮಾಣ ಪಾತ್ರವನ್ನು ಆನ್ ಲೈನ್ ನಲ್ಲೆ ವಿತರಿಸುವುದಾಗಿ ತಳಿಸಿದರು.
ಇನ್ನುಮುಂದೆ ಆನ್ ಲೈನ್ ನಲ್ಲಿಯೇ ಸಿಗಲಿದೆ ವಿವಾಹ ಪ್ರಮಾಣಪತ್ರ
ಮುದ್ರಾಂಕ ಮತ್ತು ನೋಂದಣಿ ಇಲಾಖೆ ಶೀಘ್ರದಲ್ಲೇ ಹಿಂದೂ ವಿವಾಹ ಪ್ರಮಾಣಪತ್ರಗಳನ್ನು ಆನ್ ಲೈನ್ ನಲ್ಲಿ ವಿತರಿಸಲಿದೆ. ಈ ಪ್ರಕ್ರಿಯೆಯನ್ನು ಪ್ರಸ್ತುತ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಮಾಡಲಾಗುತ್ತದೆ. ಮುದ್ರಾಂಕ ಮತ್ತು ನೊಂದಣಿ ಇಲಾಖೆಯ ಇನ್ಸ್ಪೆಕ್ಟರ್ ಕಚೇರಿಯಲ್ಲಿ ಮಾಡಲಾಗುತ್ತದೆ. ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಇನ್ಸ್ಪೆಕ್ಟರ್ ಜನರಲ್ ಬಿ.ಆರ್.ಮಮತಾ, ಆನ್ಲೈನ್ ಪ್ರಕ್ರಿಯೆಯು ಸಂಪೂರ್ಣವಾಗಿ ಪರೀಕ್ಷಿಸಲ್ಪಟ್ಟಿದೆ ಮತ್ತು ಸಿದ್ಧವಾಗಿದೆ. ಇದನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು. ಶುಲ್ಕವು ಬದಲಾಗದೆ ಉಳಿಯುತ್ತದೆ ಎಂದು ಹೇಳಿದ್ದಾರೆ.
ಪ್ರಸ್ತುತ, ಯಾವುದೇ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅಥವಾ ಆನ್ಲೈನ್ನಲ್ಲಿ ಲಭ್ಯವಿರುವ ಮೆಮೊರಾಂಡಮ್ ಆಫ್ ಮ್ಯಾರೇಜ್ ಫಾರ್ಮ್ ಅನ್ನು 15 ರೂಪಾಯಿ.ಗಳ ಶುಲ್ಕಕ್ಕೆ ಭರ್ತಿ ಮಾಡಬೇಕು. ವಧು ಮತ್ತು ವರರು ಹೆಸರು, ವಯಸ್ಸು, ಪ್ರಸ್ತುತ ವೈವಾಹಿಕ ಸ್ಥಿತಿ, ವಿವಾಹದ ದಿನಾಂಕ, ನಿವಾಸ ವಿಳಾಸ, ವಿವಾಹದ ಸ್ಥಳ ಮತ್ತು ಸಹಿಗಳು ಮತ್ತು ಮೂವರು ಸಾಕ್ಷಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಮದುವೆಯ ಸಮಯದಲ್ಲಿ ತೆಗೆದ ಫೋಟೋ ಮತ್ತು ಆಮಂತ್ರಣ ಪತ್ರಿಕೆಯನ್ನು ಸಹ ಸಲ್ಲಿಸಬೇಕು. ಪ್ರಮಾಣಪತ್ರಕ್ಕೆ ಸಬ್ ರಿಜಿಸ್ಟ್ರಾರ್ ಸಹಿ ಮಾಡುತ್ತಾರೆ.