Marriage Registration: ಮದುವೆಯಾಗುವ ಗಂಡು ಹೆಣ್ಣಿಗೆ ಗುಡ್ ನ್ಯೂಸ್, ಇನ್ಮುಂದೆ ಮನೆಯಲ್ಲೇ ನಿಮ್ಮ ಮದುವೆ ನೋಂದಣಿ

ಇನ್ಮುಂದೆ ಮನೆಯಲ್ಲಿ ಸುಲಭವಾಗಿ ಮದುವೆಯ ನೋಂದಣಿ ಆನ್ಲೈನ್ ಮೂಲಕ ಮಾಡಬಹುದು

Marriage Registration Online Process: ಹಿಂದೂ ಧರ್ಮದಲ್ಲಿ ಮದುವೆ ಧಾರ್ಮಿಕ ಆಚರಣೆಯಾಗಿದ್ದು, ಮದುವೆ ಹಿಂದೂ ಧರ್ಮದ ಸಂಸ್ಕ್ರತಿಯಾಗಿದೆ. ಭಾರತೀಯ ಕಾನೂನಿನಲ್ಲಿ ಮದುವೆಗೆ ಸಂಬಂಧಿಸಿದಂತೆ ಅನೇಕ ನಿಯಮಗಳಿವೆ. ಸದ್ಯ ದೇಶದಲ್ಲಿ ಮದುವೆಯ ನಂತರ ವಿವಾಹ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ.

ಸದ್ಯ ಮದುವೆಯಾಗುವವರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ ಹೊರಬಿದ್ದಿದೆ. ಹೌದು, ವಿವಾಹ ನೋಂದಣಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮದುವೆ ಆಗುವವರಿಗೆ ಬಿಗ್ ರಿಲೀಫ್ ನೀಡಿದೆ ಎನ್ನಬಹುದು. ಇನ್ನುಮುಂದೆ ವಿವಾಹ ನೋಂದಣಿಗಾಗಿ ದಂಪತಿಗಳು ಕಷ್ಟಪಡುವ ಅಗತ್ಯವಿಲ್ಲ.

Marriage Registration Latest Update
Image Credit: Rabbitloader

ರಾಜ್ಯದಲ್ಲಿ ವಿವಾಹ ನೋಂದಣಿ ಇನ್ನಷ್ಟು ಸುಲಭ
ಸಾಮಾನ್ಯವಾಗಿ ಮದುವೆಯಾದ ದಂಪತಿಗಳು ವಿವಾಹ ನೋಂದಣಿ ಮಾಡಿಸಿಕೊಳ್ಳಬೇಕು. ಕಾನೂನಿನ ನಿಯಮಾನುಸಾರ ದಂಪತಿಗಳು ಸಬ್ ರಿಜಿಸ್ಟ್ರಾರ್ ಕಚೇರಿಗೆ ಭೇಟಿ ನೀಡಿ ವಿವಾಹ ನೋಂದಣಿಯನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಆದರೆ ಇನ್ನುಮುಂದೆ ರಾಜ್ಯದ ಜನತೆಗೆ ಇದಕ್ಕಾಗಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಭೇಟಿ ನೀಡುವ ಅಗತ್ಯವಿಲ್ಲ.

ಬದಲಾಗಿ ನೀವು ಒಂದೇ ಕ್ಲಿಕ್ ನಲ್ಲಿ ಆನ್ಲೈನ್ ನಲ್ಲಿಯೇ ವಿವಾಹ ನೋಂದಣಿಯನ್ನು ಮಾಡಿಕೊಳ್ಳಬಹುದು. ಸದ್ಯ ಎಲ್ಲವು ಡಿಜಿಟಲೀಕರಣ ಆಗುತ್ತಿರುವ ಹಿನ್ನಲೆ Marriage Registration ಕೂಡ ಡಿಜಿಟಲ್ ಮೂಲಕವೇ ಆಗಲಿದೆ. ನೀವು Online ನಲ್ಲಿಯೇ ಅಗತ್ಯ ಮಾಹಿತಿಯನ್ನು ನೀಡುವ ಮೂಲಕ ವಿವಾಹ ನೋಂದಣಿಯನ್ನು ಮಾಡಿಕೊಳ್ಳಬಹುದು.

Marriage Registration Online Process
Image Credit: Itzeazy

ಆನ್ಲೈನ್ ನಲ್ಲಿ ಈ ರೀತಿಯಾಗಿ ವಿವಾಹ ನೋಂದಣಿ ಮಾಡಿಕೊಳ್ಳಿ
https://kaveri.karnataka.gov.in ಗೆ ಭೇಟಿ ನೀಡಿ. ಬಳಕೆದಾರ ಖಾತೆಯನ್ನು ತೆರೆಯಿರಿ.

Join Nadunudi News WhatsApp Group

•ಕಾವೇರಿ ಪೋರ್ಟಲ್‌ ಗೆ ಲಾಗಿನ್ ಮಾಡಿ, ಮದುವೆ ನೋಂದಣಿ ಸೇವೆಯನ್ನು ಆಯ್ಕೆ ಮಾಡಿ ಮತ್ತು ವಿವರಗಳನ್ನು ನಮೂದಿಸಿ ಮತ್ತು ಅರ್ಜಿ ಸಲ್ಲಿಸಿ.

•ಪತಿ, ಪತ್ನಿ ಮತ್ತು ಮೂವರು ಸಾಕ್ಷಿದಾರರ ಆಧಾರ್ ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

•ನೋಂದಣಾಧಿಕಾರಿಗಳ ಮೂಲಕ ಅರ್ಜಿಯನ್ನು ಪರಿಶೀಲಿಸಿದ ನಂತರ, Online ಮೂಲಕ ಶುಲ್ಕ ಪಾವತಿಯನ್ನು ಅನುಮತಿಸಲಾಗುತ್ತದೆ.

•ಕಾವೇರಿ ಪೋರ್ಟಲ್‌ನಲ್ಲಿ ಪ್ರಮಾಣಪತ್ರವನ್ನು Download ಮಾಡಿಕೊಳ್ಳಲು ಅವಕಾಶವಿದೆ.

Join Nadunudi News WhatsApp Group