Marriage Certificate: ಹೊಸದಾಗಿ ಮದುವೆ ಆಗುವವರಿಗೆ ಕೇಂದ್ರದಿಂದ ಗುಡ್ ನ್ಯೂಸ್, ಹೊಸ ಆದೇಶ

ಹೊಸದಾಗಿ ಮದುವೆಯಾಗುವವರು ಇನ್ನುಮುಂದೆ ಮ್ಯಾರೇಜ್ ಸರ್ಟಿಫಿಕೇಟ್ ಪಡೆಯಲು ಕಚೇರಿಗೆ ಹೋಗುವ ಅಗತ್ಯ ಇಲ್ಲ.

Marriage Registration Online: ಮದುವೆ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಳ್ಳುತ್ತದೆ. ನೀವು ವಿವಾಹಿತರಾಗಿದ್ದರೆ, ಮದುವೆ ಪ್ರಮಾಣ ಪತ್ರವನ್ನು ಹೊಂದಿರುದು ಅವಶ್ಯಕವಾಗಿದೆ.

Marriage Certificate ನೀವು ಮದುವೆ ಆಗಿದ್ದೀರಿ ಎಂಬುದಕ್ಕೆ ಖಚಿತವಾದ ದಾಖಲೆಯಾಗಿದೆ. ಇದೀಗ ಕೇಂದ್ರ ಸರ್ಕಾರ ನವ ದಂಪತಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಅದರ ಬಗ್ಗೆ ನಾವೀಗ ತಿಳಿದುಕೊಳ್ಳೋಣ.

Marriage Registration Online
Image Credit: Pmmodiyojana

Marriage Certificate Benefits
*ಮದುವೆಯಾದ ನಂತರ ನೀವು ಬ್ಯಾಂಕ್ ನಲ್ಲಿ ಜಂಟಿ ಖಾತೆಯನ್ನು ತೆರಯಲು ಮದುವೆ ಪ್ರಮಾಣ ಪತ್ರ ಕಡ್ಡಾಯವಾಗಿದೆ.

*ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸುವಾಗ Marriage Certificate ಅವಶ್ಯಕತೆಯಿದೆ.
*ಗಂಡ ಮತ್ತು ಹೆಂಡತಿ ಪ್ರಯಾಣ ವೀಸಾ ಅಥವಾ NRI ಗೆ ಅರ್ಜಿ ಸಲ್ಲಿಸಲು ಬಯಸಿದರೆ Marriage Certificate ಅಗತ್ಯವಾಗಿದೆ.

*ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವಾಗ ಹಾಗೂ ವಂಚನೆಯ ಬಗ್ಗೆ ದೂರು ನೀಡುವಾಗ Marriage Certificate ಬಹಳ ಮುಖ್ಯವಾಗಿರುತ್ತದೆ.

Join Nadunudi News WhatsApp Group

ಇದೀಗ ಮನೆಯಲ್ಲೇ ಕುಳಿತು Marriage Certificate ಗೆ ಅರ್ಜಿ ಸಲ್ಲಿಸಬಹುದು
ಈ ಮೊದಲು ರಿಜಿಸ್ಟರ್ ಕಚೇರಿಗೆ ಹೋಗಿ ಮದುವೆ ನೋಂದಣಿಯನ್ನು ಮಾಡಿಸಬೇಕಿತ್ತು. ಆದರೆ ಈಗ ಗಂಡ ಹೆಂಡತಿ ಮನೆಯಲ್ಲೇ ಕುಳಿತು Marriage Certificate ಮಾಡಿಸಿಕೊಳ್ಳಬಹುದು. ಹೌದು ಇದೀಗ ನೀವು ನಿಮ್ಮ ಮದುವೆ ನೋಂದಣಿಯನ್ನು ಆನ್ಲೈನ್ ಮೂಲಕ ಮಾಡಿಕೊಳ್ಳಬಹುದಾಗಿದೆ. ನೀವು ನಿಮ್ಮ ರಾಜ್ಯ ಸರ್ಕಾರದ ಪೋರ್ಟಲ್ ಗೆ ಭೇಟಿ ನೀಡುವ ಮೂಲಕ ನಿಮ್ಮ ಮದುವೆ ನೋಂದಣಿಯನ್ನು ಮಾಡಿಸಿಕೊಳ್ಳಬಹುದಾಗಿದೆ. ಅದು ಹೇಗೆಂದು ನಾವೀಗ ತಿಳಿಯೋಣ.

Marriage certificate latest update
Image Credit: Barristerng

Marriage Certificate ಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
*ಮೊದಲು https://edistrict.delhigovt.nic.in/ ಗೆ ಭೇಟಿ ನೀಡಿ ಆಧಾರ್ ಅಥವಾ ಮತದಾರರ ಸಂಖ್ಯೆಯೊಂದಿಗೆ ಲಾಗಿನ್ ಆಗಬೇಕು.

*ಹೊಸ ಪುಟ ತೆರೆದ ನಂತರ ಅಲ್ಲಿ ಕೇಳಿದ ಮಾಹಿತಿಯನ್ನು ಭರ್ತಿಮಾಡಬೇಕು.

*ಇ-ಡಿಸ್ಟ್ರಿಕ್ಟ್ ಗೆ ಲಾಗಿನ್ ಆದ ನಂತರ ಮದುವೆ ನೋಂದಣಿಗೆ ಹೋಗಿ ಕ್ಲಿಕ್ ಮಾಡಬೇಕು.

*Marriage Certificate ಗೆ ಅರ್ಜಿ ಸಲ್ಲಿಸಲು ಇಬ್ಬರ ಜನನ ಪ್ರಮಾಣ ಪತ್ರ ಲಗತ್ತಿಸಬೇಕು. ಹಾಗೆ 4 ಪಾಸ್ ಪೋರ್ಟ್ ಅಳತೆಯ ಫೋಟೋ, ಮದುವೆ ಕಾರ್ಡ್ ಅನ್ನು ನೀಡಬೇಕು.

*ಇದರ ನಂತರ ನೀವು ಸ್ವೀಕೃತಿ ಚೀಟಿಯನ್ನು ಪಡೆಯಬಹುದು. ಹಾಗೆ ಅದರ ವಿವರ ಗಳನ್ನೂ ಮೊಬೈಲ್ ಸಂಖ್ಯೆಗೆ ಮತ್ತು ಇಮೇಲ್ ಐಡಿ ಗೆ ಕಳುಹಿಸಲಾಗುತ್ತದೆ.

Marriage Registration Online
Image Credit: Vidhikarya

ನೋಂದಣಿ ಶುಲ್ಕ
Marriage Certificate ನೋಂದಣಿ ಸಮಯದಲ್ಲಿ ಶ್೭ಉಲ್ಕವನ್ನು ಪಾವತಿಸಬೇಕಾಗುತ್ತದೆ. ಪ್ರತಿ ರಾಜ್ಯದಲ್ಲಿ ಈ ಶುಲ್ಕ ವಿಭಿನ್ನವಾಗುತ್ತದೆ. ದೆಹಲಿಯಲ್ಲಿ ಸಾಮಾನ್ಯ ಪ್ರಮಾಣ ಪತ್ರಕ್ಕೆ 100 ರೂ. ಹಾಗೆ ನೀವು ಅರ್ಜಿ ಸಲ್ಲಿಸಿದ ದಿನದಂದು ಪ್ರಮಾಣ ಪತ್ರ ಪಡೆಯಲು 10000 ಹೆಚ್ಚುವರಿ ಶುಲ್ಕವನ್ನು ವಿಧಿಸಬೇಕಾಗುತ್ತದೆ.

Join Nadunudi News WhatsApp Group