Father’s Property: ಮದುವೆಯಾದ ಮಗಳಿಗೆ ತಂದೆಯ ಆಸ್ತಿಯಲ್ಲಿ ಎಷ್ಟು ಪಾಲಿದೆ, ಕೋರ್ಟಿನಿಂದ ಬಂತು ದೊಡ್ಡ ಆದೇಶ.
ಮದುವೆಯಾದ ಬಳಿಕ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಎಷ್ಟು ಪಾಲಿರುತ್ತದೆ, ಕಾನೂನಿನ ನಿಯಮ ತಿಳಿಯಿರಿ.
Married Daughter Property Right: ಭಾರತೀಯ ನ್ಯಾಯಾಲಯದಲ್ಲಿ (Indian Law) ಆಸ್ತಿ ಹಂಚಿಕೆಗೆ ಸಂಬಂಧಿಸಿದಂತೆ ಕಾನೂನುಗಳನ್ನು ಮಾಡಲಾಗಿದೆ. ಈಗಾಗಲೇ ಕಾನೂನಿನ ನಿಯಮದಲ್ಲಿ ಹೆಣ್ಣುಮಕ್ಕಳು ತಂದೆ ತಾಯಿಯ ಆಸ್ತಿಯ ಸಮಾನ ಅಧಿಕಾರವನ್ನು ಹೊಂದಿರುತ್ತಾರೆ. ಆದರೂ ಕೂಡ ಕೆಲವೊಂದು ಕಡೆ ಹೆಣ್ಣು ಮಕ್ಕಳಿಗೆ ಆಸ್ತಿ ನೀಡುವಲ್ಲಿ ತಕರಾರು ನಡೆಯುತ್ತದೆ.
ಇನ್ನು 2005 ರ ನಂತರದ ತಿದ್ದುಪಡಿಯ ಪ್ರಕಾರ, ಹೆಣ್ಣು ಮಕ್ಕಳು ಪಿತ್ರಾರ್ಜಿತ ಹಾಗೂ ಸ್ವಯಾರ್ಜಿತ ಆಸ್ತಿಯ ಮೇಲೆ ಸಂಪೂರ್ಣ ಅಧಿಕಾರವನ್ನು ಹೊಂದಿರುತ್ತಾರೆ. ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಪಾಲನ್ನು ನೀಡದಿದ್ದರೆ ಅವರು ಕಾನೂನಿನ ಮೊರೆ ಹೋಗಬಹುದು.
ಮದುವೆಯಾದ ಮಗಳಿಗೆ ತಂದೆಯ ಆಸ್ತಿಯಲ್ಲಿ ಎಷ್ಟು ಪಾಲಿದೆ
ಇನ್ನು ಮದುವೆಯಾದ ಬಳಿಕ ಹೆಣ್ಣು ಮಕ್ಕಳ ಆಸ್ತಿ ಹಕ್ಕಿನ ಬಗೆ ಸಾಕಷ್ಟು ಗೊಂದಲಗಳು ಉಂಟಾಗುತ್ತದೆ. ಮದುವೆಯಾದ ಬಳಿಕ ಹೆಣ್ಣು ಮಕ್ಕಳು ಗಂಡನ ಮನೆಗೆ ಸೇರುತ್ತಾರೆ ಈ ಕಾರಣ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ (Father’s Property) ಆಧಿಕಾರ ಇರುವುದಿಲ್ಲ ಎಂದು ಪರಿಗಣಿಸುತ್ತಾರೆ. ಆದರೆ ಹೆಣ್ಣು ಮಕ್ಕಳು ತಮ್ಮ ತಂದೆಯ ಆಸ್ತಿಯಲ್ಲಿ ಹುಟ್ಟಿನಿಂದಲೇ ಹಕ್ಕನ್ನು ಹೊಂದಿರುತ್ತಾರೆ.
ಗಂಡು ಮಕ್ಕಳಿಗೆ ಯಾವ ರೀತಿ ಆಸ್ತಿಯಲ್ಲಿ ಅಧಿಕಾರ ಇರುತ್ತದೋ ಅದೇ ರೀತಿ ಹೆಣ್ಣು ಮಕ್ಕಳು ಕೂಡ ತಂದೆಯ ಆಸ್ತಿಯಲ್ಲಿ ಸಮಾನ ಅಧಿಕಾರವನ್ನು ಪಡೆಯುತ್ತಾರೆ. ಮದುವೆ ಆದ ಬಳಿಕ ಹೆಣ್ಣು ಮಕ್ಕಳ ಆಸ್ತಿ ಹಕ್ಕಿನಲ್ಲಿ ಯಾವುದೇ ರೀತಿಯ ಬದಲಾವಣೆ ಆಗುವುದಿಲ್ಲ . ಹೆಣ್ಣು ಮಕ್ಕಳು ಮದುವೆ ಆದ ಮೇಲು ತಂದೆಯ ಆಸ್ತಿಯಲ್ಲಿ ಗಂಡು ಮಕ್ಕಳಷ್ಟೇ ಅಧಿಕಾರವನ್ನು ಪಡೆಯುತ್ತಾರೆ. ಮದುವೆಯಾದ ಮಾತ್ರಕ್ಕೆ ಹೆಣ್ಣು ತನ್ನ ತಂದೆ ಆಸ್ತಿಯ ಹಕ್ಕನ್ನು ಕಳೆದುಕೊಳ್ಳುವುದಿಲ್ಲ.
ಯಾವಾಗ ಹೆಣ್ಣು ಮಕ್ಕಳಿಗೆ ತನ್ನ ತಂದೆಯ ಆಸ್ತಿಯಲ್ಲಿ ಅಧಿಕಾರ ಇರುವುದಿಲ್ಲ
ಭಾರತೀಯ ಕಾನೂನಿನ ಪ್ರಕಾರ ಕೆಲ ಸಂದರ್ಭದಲ್ಲಿ ಹೆಣ್ಣು ಮಕ್ಕಳು ತಂದೆಯ ಆಸ್ತಿಯನ್ನು ಪಡೆದುಕೊಳ್ಳುವ ಹಕ್ಕನ್ನು ಹೊಂದಿರುವುದಿಲ್ಲ. ತಂದೆಯು ಸ್ವತಃ ದುಡಿದು ಆಸ್ತಿಯನ್ನು ಸಂಪಾದಿಸಿದ್ದರೆ ಅದು ಅವರ ಸ್ವಯಾರ್ಜಿತ ಆಸ್ತಿ ಆಗುತ್ತದೆ. ಈ ಸ್ವಯಾರ್ಜಿತ ಆಸ್ತಿಯು ತಂದೆಯ ಸ್ವಇಚ್ಛೆಗೆ ಅನುಗುಣವಾಗಿರುತ್ತದೆ. ಅಂದರೆ ತಂದೆಯು ತನ್ನ ಮಗನಿಗೆ ಮಾತ್ರ ಸ್ವಯಾರ್ಜಿತ ಆಸ್ತಿ ತಲುಪಬೇಕು ಎಂದು ವಿಲ್ ಮಾಡಿದ್ದರೆ ಆಗ ಹೆಣ್ಣು ಮಕ್ಕಳಿಗೆ ಆಸ್ತಿಯ ಪಾಲನ್ನು ಕೇಳುವ ಅಧಿಕಾರ ಇರುವುದಿಲ್ಲ.