Maruti: 3 ಲಕ್ಷಕ್ಕೆ 35 Km ಮೈಲೇಜ್ ಕೊಡುವ ಕಾರ್ ಲಾಂಚ್ ಮಾಡಿದ ಮಾರುತಿ, ಒಂದೇ ದಿನದಲ್ಲಿ 1 ಲಕ್ಷ ಬುಕಿಂಗ್.
ಮಾರುತಿ ಆಲ್ಟೊ 800 ಕಾರಿನ ಬೆಲೆ ಮತ್ತು ಮೈಲೇಜ್ ಬಗ್ಗೆ ತಿಳಿದುಕೊಳ್ಳಿ.
Maruti Alto 800 Car: ಮಾರುಕಟ್ಟೆಯಲ್ಲಿ ಮಾರುತಿ (Maruti Suzuki) ಕಂಪನಿಯ ಕಾರ್ ಗಳು ಹೆಚ್ಚಿನ ಬೇಡಿಕೆ ಪಡೆಯುತ್ತಿದೆ. ಕಂಪನಿಯು ಗ್ರಾಹಕರಿಗೆ ಇಷ್ಟವಾಗುವ ರೀತಿಯಲ್ಲಿ ಕಾರ್ ಗಳನು ಬಿಡುಗಡೆ ಮಾಡುತ್ತಿದೆ. ಮಾರುತಿ ಈಗಾಗಲೇ ವಿಭಿನ್ನ ಮಾದರಿಯ ಕಾರ್ ಗಳನ್ನೂ ಬಿಡುಗಡೆ ಮಾಡಿದೆ.
ಇನ್ನು ಮಾರುಕಟ್ಟೆಯಲ್ಲಿ ಮಾರುತಿ ಆಲ್ಟೊ ಹೆಚ್ಚಿನ ಸೆಲ್ ಕಾಣುತ್ತಿದೆ. ಇದೀಗ ಕಂಪನಿಯು ಮಾರುತಿ ಆಲ್ಟೊ 800 ಅನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಈ ನೂತನ ಮಾದರಿಯಲ್ಲಿ ಹೆಚ್ಚಿನ ಸುಧಾರಿತ ಫೀಚರ್ ಅನ್ನು ಅಳವಡಿಸಲಾಗಿದೆ.
ಮಾರುತಿ ಆಲ್ಟೊ 800 ಕಾರು
ಮಾರುತಿ ಆಲ್ಟೊ 800 ಕಾರು ಹಾರ್ಡ್ ಡೆಕ್ ಪ್ಲಾಟ್ ಫಾರ್ಮ್ ನ್ನು ಆಧರಿಸಿದೆ. ಇದು ಹೊಸ ಹೆಡ್ ಲ್ಯಾಂಪ್ ಗಳು ಮತ್ತು ಟೈಲ್ ಲ್ಯಾಂಪ್ ಗಳು, ಸ್ಪೋರ್ಟಿ ಫ್ರಂಟ್ ಗ್ರಿಲ್ ಬಂಪರ್ ಮತ್ತು ಉದ್ದ ಮತ್ತು ಅಗಲವಾದ ವಿನ್ಯಾಸವನ್ನು ಹೊಂದಿದೆ. ಮಾರುತಿ ಸುಝುಕಿಯು ಹೊಸ ಕಾರನ್ನು ಮೂರೂ ರೂಪಾಂತರದಲ್ಲಿ ಬಿಡುಗಡೆ ಮಾಡಲಾಗಿದೆ. STD, L ಮತ್ತು V.L ಟ್ರಿಮ್ ಸಹ CNG ಕಿಟ್ ನೊಂದಿಗೆ ಲಭ್ಯವಿದೆ.
ಮಾರುತಿ ಆಲ್ಟೊ 800 ಕಾರಿನ ಬೆಲೆ ಮತ್ತು ಮೈಲೇಜ್
ಈ ಮಾರುತಿ ಆಲ್ಟೊ 800 ಕಾರು 796 ಸಿಸಿ ಬಿಎಸ್ 6 ಎಂಜಿನ್ ಅನ್ನು ಹೊಂದಿದೆ. ಇಂಜಿನ್ ಅನ್ನು ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ನೊಂದಿಗೆ ಜೋಡಿಸಲಾಗುತ್ತದೆ. ಕಾರಿನ ಪೆಟ್ರೋಲ್ ರೂಪಾಂತರವು 22.05 kmpl ಮೈಲೇಜ್ ನೀಡುತ್ತದೆ, ಆದರೆ CNG ರೂಪಾಂತರವು 35 km/kg ಮೈಲೇಜ್ ನೀಡುತ್ತದೆ. ಇನ್ನು ಕಂಪನಿಯು ಮಾರುತಿ ಆಲ್ಟೊ 800 ಕಾರಿಗೆ 3 ರಿಂದ 5 ಲಕ್ಷ ಬೆಲೆಯನ್ನು ನಿಗದಿಪಡಿಸಿದೆ.
ಮಾರುತಿ ಆಲ್ಟೊ 800 ಕಾರಿನ ವಿಶೇಷತೆ
ಕಾರು 850 ಕೆಜಿ ಕರ್ಬ್ ತೂಕ, ಉತ್ತಮ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಬೂಟ್ ಸ್ಪೇಸ್ ಅನ್ನು ಸಹ ಹೊಂದಿದೆ. ಆಲ್ಟೊ ಮಾರುತಿ 800 ಕಾರು ಆರು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ರೇಷ್ಮೆಯಂತಹ ಬೆಳ್ಳಿ, ಅಪ್ ಡೌನ್ ಕೆಂಪು, ಮೊಜಿತೋ ಹಸಿರು, ಗ್ರಾನೈಟ್ ಬೂದು, ಬಿಳಿ ಮತ್ತು ಸೇರುಲಿಯನ್ ನೀಲಿ ಬಣ್ಣದ ಆಯ್ಕೆಗಳನ್ನು ಹೊಂದಿದೆ. ಇನ್ನು ಮಾರುತಿ ಆಲ್ಟೊ 800 ಶೋ ರೂಮ್ ಗಳಲ್ಲಿ ಲಭ್ಯವಿದೆ. ಇದು ಸಣ್ಣ ಕಾರ್ ಆಗಿದ್ದು ಮಾಧ್ಯಮ ವರ್ಗದ ಕುಟುಂಬಕ್ಕೆ ಉತ್ತಮವಾಗಿದೆ.