Maruti: 4 ಲಕ್ಷಕ್ಕೆ ಇನ್ನೊಂದು ಮೈಲೇಜ್ ಕಾರ್ ಬಿಡುಗಡೆ ಮಾಡಿದ ಮಾರುತಿ, 25 Km ಮೈಲೇಜ್.
ಮಾರುತಿ ಆಲ್ಟೊ 800 ಬದಲಿಗೆ ಉತ್ತಮ ಇಂಧನ ಸಾಮರ್ಥ್ಯದ ಕಾರ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಹೊರಟ ಮಾರುತಿ ಸುಜುಕಿ.
Maruti Alto K10 Extra: ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸದ ಕಾರ್ ಗಳು ಬಿಡುಗಡೆಯಾಗಿ ಸದ್ದು ಮಾಡುತ್ತಿರುತ್ತವೆ. ಸಾಮಾನ್ಯವಾಗಿ ಜನರು ಕಡಿಮೆ ಬೆಲೆಗೆ ಹೆಚ್ಚಿನ ಮೈಲೇಜ್ ನೀಡುವ ಕಾರನ್ನು ಖರೀದಿಸಲು ಬಯಸುತ್ತಾರೆ. ಹಾಗಾಗಿ ಜನರ ಬೇಡಿಕೆಗೆ ಅನುಗುಣವಾಗಿ ಹೆಚ್ಚು ಮೈಲೇಜ್ ನೀಡುವ ಕಾರ್ ಅನ್ನು ಕಂಪನಿಗಳು ಮಾರುಕಟ್ಟೆಗೆ ಪರಿಚಯಿಸುತ್ತಿವೆ.
ಇದೀಗ ದೇಶದ ಪ್ರತಿಷ್ಠಿತ ವಾಹನ ತಯಾರಕ ಕಂಪೆನಿಯಾಗಿರುವ ಮಾರುತಿ ಸುಜುಕಿ (Maruti Suzuki) ತನ್ನ ಹೆಚ್ಚು ಮಾರಾಟವಾಗುವ ಮಾರುತಿ ಆಲ್ಟೊ 800 (Maruti Alto 800)ಅನ್ನು ಸ್ಥಗಿತಗೊಳಿಸಿದೆ. ಮಾರುತಿ ಆಲ್ಟೊ 800 ಬದಲಿಗೆ ಉತ್ತಮ ಇಂಧನ ಸಾಮರ್ಥ್ಯದ ಕಾರ್ ಅನ್ನು ಮಾರುತಿ ಸುಜುಕಿ ಮಾರುಕಟ್ಟೆಗೆ ಪರಿಚಯಿಸಲು ಹೊರಟಿದೆ.
ಮಾರುತಿ ಆಲ್ಟೊ K10 ಎಕ್ಸ್ಟ್ರಾ (Maruti Alto K10 Extra)
ಮಾರುತಿ ಸುಜುಕಿ ಕಂಪನಿ ಇದೀಗ ಮಾರುತಿ ಆಲ್ಟೊ K10 ಎಕ್ಸ್ಟ್ರಾ ಮಾದರಿಯನ್ನ ಬಿಡುಗಡೆ ಮಾಡಲಿದೆ. ಮಾರುತಿ ಆಲ್ಟೊ 800 ನ ಬದಲಿಗೆ ಹೊಸ ಆಲ್ಟೊ K10 ಅನ್ನು ಪರಿಚಯಿಸಲಿದೆ. ಇದರಲ್ಲಿ ನೀವು ಹೊಸ ವೈಶಿಷ್ಟ್ಯಗಳನ್ನು ಪಡೆಯಬಹುದು. ಹಾಗೆ ಇದರ ನೋಟ ಸಾಮಾನ್ಯ ಮಾದರಿಗಿಂತ ಹೆಚ್ಚು ಆಕರ್ಷಣೀಯವಾಗಿದೆ.
ಮಾರುತಿ ಆಲ್ಟೊ K10 ಎಕ್ಸ್ಟ್ರಾ ಕಾರ್ ನ ಬೆಲೆ 3 .99 ಲಕ್ಷ ಇರಬಹುದು ಎಂದು ಅಂದಾಜಿಸಲಾಗಿದೆ.
ಆಲ್ಟೊ K10 ಎಕ್ಸ್ಟ್ರಾ ಬದಿ ಕಲರ್ ಡೋರ್ ಹ್ಯಾಂಡಲ್ ಗಳು, ಆರೆಂಜ್ ಹೈಲೈಟ್ ಗಳೊಂದಿಗೆ ಬ್ಲ್ಯಾಕ್ಡ್ ಔಟ್ ಸ್ಕಿಡ್ ಪ್ಲೇಟ್ ಗಳು, ಡಿಸೈನರ್ ಕವರ್ ಗಳೊಂದಿಗೆ ಸ್ಟಿಲ್ ವೀಲ್ ಗಳು, ಮಾಸ್ಕ್ಯುಲರ್ ಬಾನೆಟ್, ಹ್ಯಾಲೊಜೆನ್ ಹೆಡ್ ಲ್ಯಾಂಪ್ ಗಳನ್ನೂ ಒಳಗೊಂಡಿದೆ.
ಮಾರುತಿ ಆಲ್ಟೊ K10 ಎಕ್ಸ್ಟ್ರಾ ಎಂಜಿನ್ ಸಾಮರ್ಥ್ಯ
ಮಾರುತಿ ಆಲ್ಟೊ K10 ನವೀಕೃತ ಮಾದರಿಯೂ ಶಕ್ತಿಶಾಲಿ ಎಂಜಿನ್ ಅನ್ನು ಪಡೆದಿದೆ. ಸಾಮಾನ್ಯ ಮಾದರಿಯೊಂದಿಗೆ 1 .0 ಲೀಟರ್ ಕೆ 10 ಸಿ ಪೆಟ್ರೋಲ್ ಎಂಜಿನ್ ಅನ್ನು ನೀಡಲಾಗಿದೆ. ಈ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಈ ಮಾರುತಿ ಆಲ್ಟೊ K10 ಕಾರ್ 67hp ಮತ್ತು 89Nm ಅನ್ನು ಉತ್ಪದಿಸುವ ಸಾಮರ್ಥ್ಯ ಹೊಂದಿದ್ದು, ಪ್ರತಿ ಲೀಟರ್ ಗೆ 25 ಕಿಲೋಮೀಟರ್ ಮೈಲೇಜ್ ನೀಡಲಿದೆ.
ಮಾರುತಿ ಆಲ್ಟೊ K10 ನವೀಕರಿಸಿದ ಮಾದರಿಯ ವೈಶಿಷ್ಟ್ಯಗಳು
ಮಾರುತಿ ಆಲ್ಟೊ K10 ಎಕ್ಸ್ಟ್ರಾ ಮಾದರಿಯಲ್ಲಿ ಅಡ್ವಾನ್ಸ್ ತಂತ್ರಜ್ಞಾನದ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಮಲ್ಟಿ ಪಂಕ್ಷನಲ್ ಸ್ಟಿರಿಂಗ್ ವೀಲ್, ಡ್ಯಾಶ್ ಬೋರ್ಡ್ ಮಾದರಿ, 7 .0 -ಇಂಚಿನ ಸಮರ್ಥ ಪ್ಲೇಪ್ರೊ ಇನ್ಫೋಟೈನೆಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಪವರ್ ವಿಂಡೋಗಳು, ಡ್ಯುಯಲ್ ಏರ್ ಬ್ಯಾಗ್ ಗಳಂತಹ ವೈಶಿಷ್ಟ್ಯವನ್ನು ಪಡೆದಿದೆ. ಇದರ ಜೊತೆಗೆ ಮ್ಯಾನುವೆಲ್ ಎಸಿ ಅನ್ನು ನೀಡಲಾಗಿದೆ.