Maruti: ಆಲ್ಟೊ 800 ನಿಲ್ಲಿಸಿ ಕಡಿಮೆ ಬೆಲೆಗೆ 35 Km ಮೈಲೇಜ್ ಕೊಡುವ ಐಷಾರಾಮಿ ಕಾರ್ ಲಾಂಚ್ ಮಾಡಿದ ಮಾರುತಿ.
ನೂತನ ಮಾದರಿಯ ಕಾರ್ ಪರಿಚಯಿಸಲು ಹೊರಟ ಮಾರುತಿ ಸುಜುಕಿ.
Maruti Alto K10 Tour H1: ಮಾರುತಿ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಕಾರ್ ಅನ್ನು ಬಿಡುಗಡೆ ಮಾಡುತ್ತಿದೆ. ಮಾರುತಿ (Maruti) ಈಗಾಗಲೇ ಪೆಟ್ರೋಲ್, ಎಲೆಕ್ಟ್ರಿಕ್ ಚಾಲಿತ ವಾಹನವನ್ನು ಪರಿಚಯಿಸಿದೆ. ಮಾರುತಿ ಕಾರ್ ಗಳು ಬಿಡುಗಡೆಗೊಂಡ ಕೆಲವೇ ಕ್ಷಣದಲ್ಲಿ ಅಧಿಕ ಸೇಲ್ ಕಾಣುತ್ತವೆ. ಮಾರುತಿ ಕಾರ್ ಗಳು ಅತಿ ಹೆಚ್ಚಿನ ಮೈಲೇಜ್ ನೀಡುವ ಕಾರ್ ಗಳಿಗೆ ಹೆಸರುವಾಸಿಯಾಗಿದೆ. ಇದೀಗ ಮಾರುತಿ ಗ್ರಾಹಕರಿಗಾಗಿ ನೂತನ ಮಾದರಿಯ ಕಾರ್ ಅನ್ನು ಪರಿಚಯಿಸಿದೆ.
ಮಾರುತಿ ಆಲ್ಟೋ K10 ಟೂರ್ ಹೆಚ್ 1
ಮಾರುಕಟ್ಟೆಯಲ್ಲಿ ಇದೀಗ ಮಾರುತಿ ಆಲ್ಟೋ K10 ಟೂರ್ ಹೆಚ್ 1 ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಇದರ ಬೆಲೆಯನ್ನು 4 .80 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಮಾರುತಿ ಆಲ್ಟೋ K10 ಟೂರ್ ಹೆಚ್ 1 ನಲ್ಲಿ 1.0 ಲೀಟರ್ ನೈಸರ್ಗಿಕ ಪೆಟ್ರೋಲ್ ಎಂಜಿನ್ ಅನ್ನು ನೀಡಲಾಗಿದೆ. ಈ ಎಂಜಿನ್ 66 bhp ನ ಗರಿಷ್ಟ ಶಕ್ತಿ ಹಾಗೂ 89 Nm ಗರಿಷ್ಟ ಟಾರ್ಕ್ ಉತ್ಪದಿಸುವ ಸಾಮರ್ಥ್ಯವನ್ನು ಹೊಂದಿದೆ. ಕಂಪನಿಯು ಇದರಲ್ಲಿ ಸಿಎನ್ ಜಿ ಆಯ್ಕೆಯನ್ನು ನೀಡುತ್ತದೆ.
ಮಾರುತಿ ಆಲ್ಟೋ K10 ಟೂರ್ ಹೆಚ್ 1 ಮೈಲೇಜ್
ಮಾರುತಿ ಆಲ್ಟೋ K10 ಟೂರ್ ಹೆಚ್ 1 ಸಿಎನ್ ಜಿ ಆವೃತ್ತಿಯು 56 bhp ಮತ್ತು ಗರಿಷ್ಟ 82 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಟ್ರಾನ್ ಮಿಷನ್ ಅನ್ನು ನೀಡಲಾಗಿದೆ. ಇನ್ನು ಮಾರುತಿ ಆಲ್ಟೋ K10 ಟೂರ್ ಹೆಚ್ 1 ಮೈಲೇಜ್ ಕುರಿತು ಹೇಳುವುದಾದರೆ, ಪ್ರತಿ ಲೀಟರ್ ಗೆ ಗೆ 25 ಕಿಲೋಮೀಟರ್ ರೇಂಜ್ ನೀಡಲಿದೆ. ಇನ್ನು ಮಾರುತಿ ಆಲ್ಟೋ K10 ಟೂರ್ ಹೆಚ್ 1 ಸಿಎನ್ ಜಿ ಆವೃತ್ತಿಯು ಪ್ರತಿ ಕೆಜಿಗೆ 34 .46 ಕಿಲೋಮೀಟರ್ ಮೈಲೇಜ್ ನೀಡಲಿದೆ.
ಮಾರುತಿ ಆಲ್ಟೋ K10 ಟೂರ್ ಹೆಚ್ 1 ಬೆಲೆ
ಇನ್ನು ಮಾರುತಿ ಆಲ್ಟೋ K10 ಟೂರ್ ಹೆಚ್ 1 ಎರಡು ರೂಪಾಂತರದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಇದರ ಪೆಟ್ರೋಲ್ ಎಂಜಿನ್ ನ ಮಾದರಿಗೆ 4.80 ಲಕ್ಷ ಹಾಗೂ ಮಾರುತಿ ಆಲ್ಟೋ K10 ಟೂರ್ ಹೆಚ್ 1 ಸಿಎನ್ ಜಿ ಮಾದರಿಗೆ 5.70 ಲಕ್ಷ ನಿಗದಿಪಡಿಸಲಾಗಿದೆ. ಈ ಮಾರುತಿ ಆಲ್ಟೋ K10 ಟೂರ್ ಹೆಚ್ 1 ಕಾರ್ ನಲ್ಲಿ ಮೆಟಾಲಿಕ್ ಸಲ್ಕಿ ಸಿಲ್ವರ್, ಮೆಟಾಲಿಕ್ ಗ್ರಾನೈಟ್ ಗ್ರೇ, ಆರ್ಕ್ಟಿಕ್ ವೈಟ್ ಬಣ್ಣಗಳ ಆಯ್ಕೆ ಲಭ್ಯವಿದೆ.