Maruti Baleno: 70 ಸಾವಿರಕ್ಕೆ ಸಿಗುತ್ತಿದೆ ಈ ಹೊಸ ಕಾರು, ಬೆಸ್ಟ್ ಲುಕ್ ಜೊತೆ 20Km ಮೈಲೇಜ್
ಮಾರುತಿ ಸುಜುಕಿ ಬಲೆನೊ ಕಾರ್ ಮೇಲೆ ಬಂಪರ್ ಆಫರ್.
Maruti Baleno Offer: ಸಾಮಾನ್ಯವಾಗಿ ವಾಹನ ಖರೀದಿಸುವವರು ಹೆಚ್ಚಾಗಿ ಮೈಲೇಜ್ (Mileage) ನ ಬಗ್ಗೆ ಗಮನಹರಿಸುತ್ತಾರೆ. ಕಡಿಮೆ ಬಜೆಟ್ ನಲ್ಲಿ ಹೆಚ್ಚಿನ ಮೈಲೇಜ್ ನೀಡುವ ವಾಹನಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಇನ್ನು ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಕಾರ್ ಗಳು ಲಗ್ಗೆ ಇಡುತ್ತಲೇ ಇರುತ್ತವೆ. ವಿವಿಧ ಕಾರ್ ತಯಾರಕ ಕಂಪನಿಗಳು ಹೊಸ ಹೊಸ ಮಾದರಿಯ ಕಾರ್ ಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತವೆ.
ಇನ್ನು ಮಾರುತಿ, ಹ್ಯುಂಡೈ ಸೇರಿದಂತೆ ಇನ್ನಿತರ ಕಾರ್ ಗಳು ಮಾರುಕಟ್ಟೆಯಲ್ಲಿ ಪೈಪೋಟಿ ನಡೆಸುತ್ತಲೇ ಇರುತ್ತವೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಸಾಕಷ್ಟು ಮಾದರಿಯ ಕಾರ್ ಗಳಿವೆ.
ಪ್ರತಿಷ್ಠಿತ ಕಾರು ತಯಾರಕ ಕಂಪನಿಯಾದ ಮಾರುತಿ (Maruti) ಇದೀಗ ಗ್ರಾಹಕರಿಗಾಗಿ ಬಂಪರ್ ಆಫರ್ ನೀಡಿದೆ. ನೀವು ಮಾರುತಿ ಕಾರ್ ಖರೀದಿಸಲು ಬಯಸುತ್ತಿದ್ದರೆ ಈ ಆಫರ್ ನ ಬಗ್ಗೆ ತಿಳಿದುಕೊಳ್ಳಿ. ಮಾರುತಿ ಸುಜುಕಿ ಕಾರುಗಳ ಮೇಲೆ ಗಮನ ಸೆಳೆಯುವ ರಿಯಾಯಿತಿಗಳು ಲಭ್ಯವಿದೆ.
ಮಾರುತಿ ಸುಜುಕಿ ಬಲೆನೊ (Maruti Baleno)
ಮಾರುತಿ ಸುಜುಕಿ ಕಂಪನಿ ಇದೀಗ ತನ್ನ ಗ್ರಾಹಕರಿಗಾಗಿ ಹೊಸ ಮಾದರಿಯ, ವಿಭಿನ್ನ ಫೀಚರ್ ಹೊಂದಿದ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬಲೆನೊ ಮತ್ತು ಇತ್ತೀಚೆಗೆ ಬಿಡುಗಡೆಯಾದ ಮಾರುತಿ ಸುಜುಕಿ ಫ್ರಾಕ್ಸ್ ಸೇರಿವೆ. ಮಾರುತಿ ಹ್ಯಾಚ್ ಬ್ಯಾಕ್ ಬಲೆನೊ ಕಾರು 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು 89bhp ಪವರ್ ನೀಡುತ್ತದೆ.
ಮಾರುತಿ ಸುಜುಕಿ ಬಲೆನೊ ಕಾರನ್ನು ಪವರ್ ಮಾಡುವುದು 1.2-ಲೀಟರ್ NA ಪೆಟ್ರೋಲ್ ಎಂಜಿನ್ ಆಗಿದ್ದು, 89 Bhp ಶಕ್ತಿಯನ್ನು ನೀಡುತ್ತದೆ, 5-ಸ್ಪೀಡ್ MT ಮತ್ತು CVT ನಡುವಿನ ಆಯ್ಕೆಗೆ ಜೋಡಿಸಲಾಗಿದೆ. ಮಾರುತಿ ಹ್ಯಾಚ್ ಬ್ಯಾಕ್ ಬಲೆನೊ ಕಾರಿನಲ್ಲಿ CNG ಆಯ್ಕೆಯನ್ನು ಸಹ ಪಡೆಯಬಹುದು, ಇದು 76 Bhp ನಲ್ಲಿ ರೇಟ್ ಮಾಡಲ್ಪಟ್ಟಿದೆ, ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಗೆ ಮಾತ್ರ ಸಂಯೋಜಿತವಾಗಿದೆ.
ಕೇವಲ 70 ಸಾವಿರಕ್ಕೆ ಮನೆಗೆ ತನ್ನಿ ಮಾರುತಿ ಬಲೆನೊ
ಮಾರುತಿ ಸುಜುಕಿ ಬಲೆನೊ ಕಾರ್ ನ ಆರಂಭಿಕ ಬೆಲೆ 6,61,000 ರೂ. ಆಗಿದೆ. ಈ ಬೆಲೆ ನಿಮಗೆ ಅಧಿಕವೆನಿಸಿದರೆ ಕಂಪನಿಯು ನಿಮಗೆ ಹಣಕಾಸಿನ ಯೋಜನೆಯನ್ನು ನೀಡಿದೆ .ಮಾರುತಿ ಸುಜುಕಿ ಬಲೆನೊ ಕಾರ್ ಅನ್ನು ಕೇವಲ 70,000 ಡೌನ್ ಪೇಮೆಂಟ್ ನ ಮೂಲಕ ಖರೀದಿಸಬಹುದಾಗಿದೆ.
ಐದು ವರ್ಷದವರೆಗೆ ಅಂದರೆ 60 ತಿಂಗಳು ಮಾಸಿಕ 14,262 ರೂ. ಕಂತಿನಲ್ಲಿ ಪಾವತಿಸುವ ಮೂಲಕ ಈ ಮಾರುತಿ ಸುಜುಕಿ ಬಲೆನೊ ಕಾರ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು. ಈ ಕಾರ್ ಖರೀದಿದಾರರು ವಾರ್ಷಿಕವಾಗಿ ಶೇ. 9 .8 ಬಡ್ಡಿದರದಲ್ಲಿ 6,74,351 ರೂ. ಸಾಲವನ್ನು ಪಡೆಯಬಹುದಾಗಿದೆ. ಪ್ರತಿ ತಿಂಗಳ ಕಂತನ್ನು ಪಾವತಿಸುವ ಮೂಲಕ ಈ ಕಾರ್ ಅನ್ನು ಖರೀದಿಸಬಹುದಾಗಿದೆ.