Suzuki CNG: ಈಗ ಕೇವಲ 1 ಲಕ್ಷಕ್ಕೆ ಖರೀದಿ ಮಾಡಿ 36Km ಮೈಲೇಜ್ ಕೊಡುವ ಈ ಮಾರುತಿ ಕಾರ್, ಸೀಮಿತ ಅವಧಿಯ ಆಫರ್.
ಮಾರುತಿ ಕಂಪನಿಯ ಈ ಹೆಚ್ಚಿನ ಮೈಲೇಜ್ ನೀಡುವ ಕಾರನ್ನು ನೀವು ಅತಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.
Maruti Celerio CNG: ದೇಶಿಯ ಮಾರುಕಟ್ಟೆಯಲ್ಲಿ CNG ಮಾದರಿಯ ಕಾರ್ ಗಳು ಹೆಚ್ಚಿನ ಬೇಡಿಕೆ ಪಡೆದಿದೆ. CNG ಕಾರ್ ಗಳು ಹೆಚ್ಚಿನ ಮೈಲೇಜ್ ನೀಡುವ ಕಾರಣದಿಂದ CNG ಮಾದರಿಯ ಕಾರ್ ಗಳ ಬೇಡಿಕೆ ಹೆಚ್ಚಿದೆ. ಸಾಮಾನ್ಯವಾಗಿ ಗ್ರಾಹಕರು ಹೆಚ್ಚಿನ ಮೈಲೇಜ್ ನೀಡುವ ವಾಹನವನ್ನೇ ಖರೀದಿಸುತ್ತಾರೆ. ಇನ್ನು ಮಾರುತಿ (Maruti) ಕಂಪನಿಯು ತನ್ನ CNG ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಮಾರುತಿ ಕಂಪನಿಯ ಈ CNG ಮಾದರಿಯ ಕಾರ್ ಕೇವಲ 1KG CNG ನಲ್ಲಿ ಹೆಚ್ಚಿನ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಈ CNG ಮಾದರಿಯ ಖರೀದಿಗೆ ಕಂಪನಿಯು ಹನಕ್ಸಿನ ಯೋಜನೆನ್ನು ಬಿಡುಗಡೆ ಮಾಡಿದೆ. ಈ ಆಫರ್ ನ ಮೂಲಕ ಗ್ರಾಹಕರು ಅತಿ ಕಡಿಮೆ ಬೆಲೆಯಲ್ಲಿ ಮಾರುತಿ CNG ಮಾದರಿಯನ್ನು ಖರೀದಿಸಬಹುದಾಗಿದೆ.
Maruti Celerio CNG 2023
ಮಾರುತಿ ಸೆಲೆರಿಯೊ ಸಿ ಎನ್ ಜಿ ದೇಶದಲ್ಲಿ ಅತ್ತ್ಯುತ್ತಮ ಮೈಲೇಜ್ ನೀಡುವ ಕಾರು ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ ಎಂದರೆ ತಪ್ಪಾಗಲಾರದು. ಮಾರುತಿ ಸೆಲೆರಿಯೊ CNG ನ ಬೆಲೆಯೂ ಮಾರುತಿ ಆಲ್ಟೊ K10 CNG ಮಾದರಿಯ ಕಾರ್ ನ ಬೆಲೆಗೆ ಸಮವಾಗಿದೆ. ಇನ್ನು ಮಾರುತಿ ಸೆಲೆರಿಯೊದಲ್ಲಿ 998 cc ಎಂಜಿನ್ ಅನ್ನು ಅಳವಡಿಸಲಾಗಿದೆ.
ಇದು 5300 rpm ನಲ್ಲಿ 55.92 bhp ಮತ್ತು 3400 rpm ನಲ್ಲಿ 82.1 NM ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್‌ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಲಭ್ಯವಿದ್ದು, ಪ್ರತಿ ಕೆಜಿ CNG ಗೆ 35 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಹೆಚ್ಚಿನ ಮೈಲೇಜ್ ನೀಡುವ ಕಾರನ್ನು ನೀವು ಅತಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.
ಕೇವಲ 1 ಲಕ್ಷಕ್ಕೆ ಖರೀದಿ ಮಾಡಿ ಹೆಚ್ಚು ಮೈಲೇಜ್ ಕೊಡುವ Maruti Celerio
ಮಾರುತಿ ಸೆಲೆರಿಯೊ CNG VXI ಮೂಲ ಮಾದರಿಯಾಗಿದೆ. ಮಾರುತಿ ಸೆಲೆರಿಯೊ CNG ಮಾದರಿಯು ಮಾರುಕಟ್ಟೆಯಲ್ಲಿ 7,58,106 ರೂ. ಗೆ ನಿಗದಿಯಾಗಿದೆ. ಈ ಬೆಲೆ ಮಧ್ಯಮ ವರ್ಗದವರಿಗೆ ಅಧಿಕವೆನಿಸುತ್ತದೆ. ಹೀಗಾಗಿ ಕಂಪನಿಯು ಕಡಿಮೆ ಡೌನ್ ಪೇಮೆಂಟ್ ನಲ್ಲಿ ಈ ಕಾರ್ ಖರೀದಿಗೆ ಅವಕಾಶ ನೀಡಿದೆ. ಕೇವಲ 1 ಲಕ್ಷ ಹಣ ಪಾವತಿಸುವ ಮೂಲಕ ನೀವು ಈ Celerio ಕಾರ್ ಅನ್ನು ಖರೀದಿಸಬಹುದು.
ಮಾಸಿಕ 13,918 ರಲ್ಲಿ ಖರೀದಿಸಿ ಈ ಸೆಲೆರಿಯೊ
ಈ ಕಾರ್ ಖರೀದಿಯ ವೇಳೆ ಸಂಪೂರ್ಣ ಹಣ ನೀಡಬೇಕೆಂದಿಲ್ಲ. 1 ಲಕ್ಷ ಹಣ ನೀಡಿದರೆ ಬ್ಯಾಂಕ್ ನಿಮಗೆ 6,58,106 ರೂ. ಗಳ ಸಾಲವನ್ನು ನೀಡುತ್ತದೆ. ನೀವು 5 ವರ್ಷದವರೆಗೆ 9.8 ಬಡ್ಡಿದರದಲ್ಲಿ ಸಾಲವನ್ನು ಮಾರುಪಾವತಿಸಬಹುದು. ಪ್ರತಿ ತಿಂಗಳು 13,918 ರೂ. EMI ಪಾವತಿಸುವ ಮೂಲಕ 5 ವರ್ಷಗಳಲ್ಲಿ ನೀವು ಸಾಲವನ್ನು ತೀರಿಸಬಹುದಾಗಿದೆ. ಕಂಪನಿಯ ಈ ಆಫರ್ ಅನ್ನು ಬಳಸಿಕೊಂಡು ಇಂದೇ ಕಾರ್ ಖರೀದಿಸಿ.