Maruti LXI: 50 ಸಾವಿರಕ್ಕೆ ಮನೆಗೆ ತನ್ನಿ ಹೊಸ ಮಾರುತಿ ಕಾರ್, ದಸರಾ ಹಬ್ಬಕ್ಕೆ ಕಾರ್ ಖರೀದಿಸುವವರಿಗೆ ಬಂಪರ್ ಆಫರ್.
ದಸರಾ ಹಬ್ಬಕ್ಕೆ ಮಾರುತಿ ಕಾರ್ ಖರೀದಿ ಮಾಡುವವರಿಗೆ ಭರ್ಜರಿ ಆಫರ್ ಘೋಷಣೆ.
Maruti Celerio LXI Financial Planning: ಸದ್ಯ ಮಾರುಕಟ್ಟೆಯಲ್ಲಿ Maruti ಕಾರ್ ಗಳು ಹೆಚ್ಚಿನ ಸೇಲ್ ಕಾಣುತ್ತಿವೆ ಎನ್ನಬಹುದು. ಮಾರುತಿ ಕಂಪನಿಯ ಪ್ರತಿ ಮಾದರಿಯ ಕಾರ್ ಕೂಡ ಹೆಚ್ಚಿನ ಮೈಲೇಜ್ ನೀಡಲು ಹೆಸರುವಾಸಿಯಾಗಿದೆ. ಮೈಲೇಜ್ ವಿಚಾರವಾಗಿ ಮಾರುತಿ ಗ್ರಾಹಕರನ್ನು ಸೆಳೆಯುತ್ತದೆ. ಮಾರುಕಟ್ಟೆಯಲ್ಲಿ ಎಲ್ಲ ಮಾದರಿಯ ಕಾರ್ ಗಳು ಲಭ್ಯವಿದ್ದು, ಮಾರುತಿ ಎಲ್ಲ ಮಾದರಿಯ ಕಾರ್ ಗಳ ಜೊತೆ ಸ್ಪರ್ಧಿಸಲು ಹೊಸ ಹೊಸ ರೂಪಾಂತರವನ್ನು ಪರಿಚಯಿಸುತ್ತ ಇರುತ್ತದೆ.
ಸದ್ಯ ಮಾರುಕಟ್ಟೆಯಲ್ಲಿ Maruti Celerio ಬಿಡುಗಡೆಗೊಂಡಿರುವ ಬಗ್ಗೆ ಎಲರಿಗೂ ತಿಳಿದೇ ಇದೆ. ಈ ಕಾರ್ ವಿವಿದ ಮಾದರಿಯಲ್ಲಿ ಲಭ್ಯವಿದೆ. ಇದೀಗ ಕಂಪನಿಯು ಕಡಿಮೆ ಬಜೆಟ್ ನಲ್ಲಿ ಹೆಚ್ಚು ಕ್ಯಾಬಿನ್ ಮತ್ತು ಬೂಟ್ ಸ್ಪೇಸ್ ಜೊತೆಗೆ ಅತ್ಯಂತ ಶಕ್ತಿಶಾಲಿ ಎಂಜಿನ್ ಅನ್ನು ಹೊಂದಿರುವ Celerio ರೂಪಾಂತರವನ್ನು ಖರೀದಿಸಲು ಗ್ರಾಹಕರಿಗೆ ಉತ್ತಮ ಅವಕಾಶವನ್ನು ನೀಡಿದೆ. ನೀವು ಈ ಕಾರನ್ನು ಅರ್ಧಕ್ಕೂ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.
Maruti Celerio LXI
ಕಂಪನಿಯು ಸದ್ಯ Maruti Celerio LXI ರೂಪಾಂತರವನ್ನು ಪರಿಚಯಿಸಿದೆ. ಇನ್ನು ಈ ರೂಪಾಂತರವನ್ನು ರೂ. 5,36,500 ಆರಂಭಿಕ ಎಕ್ಸ್ ಶೋ ರೂಂ ಬೆಲೆಯಲ್ಲಿ ಪರಿಚಯಿಸಿದ್ದು, ಇದರ ಆನ್ ರೋಡ್ ಬೆಲೆ 5,91,126 ರೂ. ನಿಗಧಿಪಡಿಸಲಾಗಿದೆ. ಆದರೆ ನೀವು ಈ ಮಾದರಿಯ ಖರೀದಿಗೆ ಇಷ್ಟು ಬಜೆಟ್ ಹೊಂದಿಸುವ ಅಗತ್ಯ ಇಲ್ಲ. ಕಂಪನಿಯು ಈ ಕಾರ್ ಖರೀದಿಗೆ ಆಕರ್ಷಕ ಹಣಕಾಸಿನ ಯೋಜನೆಯನ್ನು ನೀಡಿದೆ.
ಕೇವಲ 50 ಸಾವಿರಕ್ಕೆ ಮನೆಗೆ ತನ್ನಿ ಹೊಸ ಮಾರುತಿ ಕಾರ್
ಮಾರುತಿ ಸುಜುಕಿ ಸೆಲೆರಿಯೊ LXI ಖರೀದಿಗೆ ನಿಮಗೆ ಆನ್ ಲೈನ್ ಡೌನ್ ಪೇಮೆಂಟ್ ಮತ್ತು EMI ಆಯ್ಕೆ ಲಭ್ಯವಿದೆ. ನೀವು ಬ್ಯಾಂಕ್ ನಿಂದ Maruti Celerio LXI ರೂಪಾಂತರವನ್ನು ಖರೀದಿಸಲು 9.8 ಶೇಕಡಾ ವಾರ್ಷಿಕ ಬಡ್ಡಿ ದರದಲ್ಲಿ 5,41,126 ರೂ ಸಾಲವನ್ನು ಪಡೆಯಬಹುದು. ಇನ್ನು 5 ವರ್ಷಗಳ ಅವಧಿಗೆ 11,444 ರೂಪಾಯಿಗಳ ಮಾಸಿಕ EMI ಅನ್ನು ಪಾವತಿಸುವ ಮೂಲಕ ಸಾಲದ ಮರುಪಾವತಿ ಮಾಡಬಹುದು. ಕೇವಲ 50 ಸಾವಿರಕ್ಕೆ ನೀವು Maruti Celerio LXI ರೂಪಾಂತರವನ್ನು ಮನೆಗೆ ತರಬಹುದು.
Maruti Celerio LXI ವಿಶೇಷತೆ
Maruti Celerio LXI ನಲ್ಲಿ 3 ಸಿಲಿಂಡರ್‌ಗಳೊಂದಿಗೆ 998cc ಎಂಜಿನ್ ಅನ್ನು ಪಡೆಯುತ್ತೀರಿ. ಇದು 5500 rpm ನಲ್ಲಿ 65.7 bhp ಗರಿಷ್ಠ ಶಕ್ತಿಯನ್ನು ಮತ್ತು 3500 rpm ನಲ್ಲಿ 89 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಕಂಪನಿಯು 5 ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ ಮಿಷನ್ ಅನ್ನು ಬಳಸಿದೆ. ಇನ್ನು ಪ್ರತಿ ಲೀಟರ್ ಗೆ 26 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪನಿಯು ಹೇಳಿದೆ.