Maruti Dzire: ಕೇವಲ 470 ರೂ ಖರ್ಚಿನಲ್ಲಿ ಮನೆಗೆ ತನ್ನಿ 31 Km ಮೈಲೇಜ್ ಕೊಡುವ ಈ ಕಾರ್, 25 ಲಕ್ಷ ಜನರು ಖರೀದಿಸಿದ್ದಾರೆ.
ಕಡಿಮೆ ಖರ್ಚಿನಲ್ಲಿ ಮನೆಗೆ ತನ್ನಿ ಹೊಸ ಮಾರುತಿ ಕಾರ್.
Maruti Dzire EMI Offer: ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಕಂಪನಿಗಳು ಒಂದಕ್ಕಿಂತ ಹೆಚ್ಚು ಸೆಡಾನ್ ಕಾರುಗಳನ್ನು ಬಿಡುಗಡೆ ಮಾಡಿದ್ದು, ಕಾರ್ ಖರೀದಿಸಲು ಬರುವವರಿಗೆ ಆಯ್ಕೆಗಳಲ್ಲಿ ಯಾವುದೇ ಕೊರತೆ ಇಲ್ಲ ಎನ್ನಬಹುದು. ದೇಶದಲ್ಲಿ Maruti ಕಾರುಗಳು ಹೆಚ್ಚಿನ ಬೇಡಿಕೆ ಪಡೆದುಕೊಂಡಿದ್ದು ಬಿಡುಗಡೆಗೊಂಡು ಸ್ವಲ್ಪ ದಿನದಲ್ಲೇ ಹೆಚ್ಚಿನ ಸೇಲ್ ಕಂಡಿದೆ.
ಇನ್ನು Maruti Dzire ಖರೀದಿ ಜನರಿಗೆ ಇನ್ನಷ್ಟು ಸುಲಭವಾಗಲು ಕಂಪನಿಯು ವಿಶೇಷ ರಿಯಾಯಿತಿಯನ್ನು ನೀಡಿದೆ. ಗ್ರಾಹಕರು ತಮ್ಮ ಬಜೆಟ್ ಬೆಲೆಯಲ್ಲಿ ಮಾರುತಿ ಡಿಜೈರ್ ಅನ್ನು ಖರೀದಿಸಲಿ ಎಂದು ಕಂಪನಿಯು ವಿವಿಧ ಹಣಕಾಸಿನ ಯೋಜನೆಯನ್ನು ಬಿಡುಗಡೆಗೊಳಿಸಿದೆ.
Maruti Dzire ಖರೀದಿಗೆ ಬಂಪರ್ ಆಫರ್
ಮಾರುತಿ ಕಂಪನಿಯ ಡಿಜೈರ್ ಕಾರು ಅತ್ತ್ಯುತ್ತಮ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಕಾರ್ ಅನ್ನು ಖರೀದಿಸಲು 6.51 ರಿಂದ 9.39 ಲಕ್ಷ ರೂ. ಅನ್ನು ನೀಡಬೇಕಾಗುತ್ತದೆ. ಆದರೆ ಅನೇಕ ಆನ್ ಲೈನ್ ವೆಬ್ ಸೈಟ್ ಗಳಲ್ಲಿ ಈ ಕಾರನ್ನು ನೀವು ಅರ್ಧದಷ್ಟು ಬೆಲೆಗೆ ಖರೀದಿಸಬಹುದು. ಹಾಗೆಯೆ EMI ನ ಮೂಲಕ ಅತಿ ಕಡಿಮೆ ಡೌನ್ ಪೇಮೆಂಟ್ ನಲ್ಲಿ ಈ ಕಾರ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.
ಹೆಚ್ಚು ಮೈಲೇಜ್ ನೀಡುವ ಈ ಕಾರ್ ಅನ್ನು ನೀವು ಅತಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. Maruti Suzuki Dzire 1.2 ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಸಿಎನ್‌ಜಿ ಎಂಜಿನ್ ಅನ್ನು ನೀಡಿದ್ದು, ಇದರಲ್ಲಿ 5 ಸ್ಪೀಡ್ ಮ್ಯಾನುವಲ್ ಅಥವಾ 5 ಸ್ಪೀಡ್ ಆಟೋಮೇಟೆಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಆಯ್ಕೆಗಳು ಲಭ್ಯವಿದೆ. Dzire ನ ಪೆಟ್ರೋಲ್ ರೂಪಾಂತರವು ಪ್ರತಿ ಲೀಟರ್ ಗೆ 22.41 km ಮೈಲೇಜ್ ನೀಡಿದರೆ, Dzire CNG ರೂಪಾಂತರವು ಪ್ರತಿ ಕೆಜಿಗೆ 31.12 km ಮೈಲೇಜ್ ನೀಡುತ್ತದೆ.
ಕೇವಲ 470 ರೂ ಖರ್ಚಿನಲ್ಲಿ ಮನೆಗೆ ತನ್ನಿ 31 Km ಮೈಲೇಜ್ ಕೊಡುವ ಈ ಕಾರ್
ಮಾರುತಿ Dzire ಕಾರ್ ಅನ್ನು ನೀವು ಕೇವಲ 77,352 ರೂ. ಡೌನ್ ಪೇಮೆಂಟ್ ಮಾಡುವಾ ಮೂಲಕ ಖರೀದಿಸಬಹುದು.ಬ್ಯಾಂಕುಗಳು ನಿಮಗೆ Maruti Dzire ಖರೀದಿಗೆ 6.60 ಲಕ್ಷ ಸಾಲವನ್ನು ನೀಡುತ್ತದೆ. ಇನ್ನು ಶೇ.9.8 ರ ಬಡ್ಡಿದರದಲ್ಲಿ ಮಾಸಿಕ 13,976 ರೂ. EMI ಪಾವತಿಸಿ ಸಾಲವನ್ನು ಮರುಪಾವತಿಸಬಹುದಾಗಿದೆ. ನೀವು ದೈನಂದಿನ ವೆಚ್ಚವಾಗಿ ಕೇವಲ 470 ರೂ. ಗಳಲ್ಲಿ ಈ ಕಾರ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.