Maruti Dzire: ಕೇವಲ 1 ಲಕ್ಷಕ್ಕೆ ಮನೆಗೆ ತನ್ನಿ 25 Km ಮೈಲೇಜ್ ಕೊಡುವ ಮಾರುತಿ Dezire, ಸ್ವಾತಂತ್ರ್ಯ ದಿನದ ಆಫರ್.
ಗ್ರಾಹಕರು ತಮ್ಮ ಬಜೆಟ್ ಬೆಲೆಯಲ್ಲಿ ಮಾರುತಿ ಡಿಜೈರ್ ಅನ್ನು ಖರೀದಿಸಲಿ ಎಂದು ಕಂಪನಿಯು ವಿವಿಧ ಹಣಕಾಸಿನ ಯೋಜನೆಯನ್ನು ಬಿಡುಗಡೆಗೊಳಿಸಿದೆ.
Maruti Dzire Car Offer: ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಹೊಸ ಕಾರುಗಳು ಬಿಡುಗಡೆಯಾಗುತ್ತಿವೆ. ಹಲವಾರು ಕಂಪನಿಗಳು ಒಂದಕ್ಕಿಂತ ಹೆಚ್ಚು ಸೆಡಾನ್ ಕಾರುಗಳನ್ನು ಬಿಡುಗಡೆ ಮಾಡಿದೆ. ಮಾರುಕಟ್ಟೆಯಲ್ಲಿ ಕಾರು ಖರೀದಿಸಲು ಬರುವವರಿಗೆ ಆಯ್ಕೆಗಳಲ್ಲಿ ಯಾವುದೇ ಕೊರತೆ ಇಲ್ಲ. ಹೊಸ ಹೊಸ ಮಾದರಿಯ ಕಾರ್ ಬಿಡುಗಡೆಗೊಳ್ಳುತ್ತಿದ್ದಂತೆ ಹೆಚ್ಚಿನ ಸೇಲ್ ಕಾಣುತ್ತಿದೆ.
ದೇಶದಲ್ಲಿ ಮಾರುತಿ ಕಾರುಗಳು ಹೆಚ್ಚಿನ ಬೇಡಿಕೆ ಪಡೆದುಕೊಂಡಿದ್ದು ಬಿಡುಗಡೆಗೊಂಡು ಸ್ವಲ್ಪ ದಿನದಲ್ಲೇ ಹೆಚ್ಚಿನ ಸೇಲ್ ಕಂಡಿದೆ. ಇನ್ನು ಮಾರುತಿ ಡಿಸೈರ್ ಖರೀದಿ ಜನರಿಗೆ ಇನ್ನಷ್ಟು ಸುಲಭವಾಗಲು ಕಂಪನಿಯು ವಿಶೇಷ ರಿಯಾಯಿತಿಯನ್ನು ನೀಡಿದೆ. ಗ್ರಾಹಕರು ತಮ್ಮ ಬಜೆಟ್ ಬೆಲೆಯಲ್ಲಿ ಮಾರುತಿ ಡಿಜೈರ್ ಅನ್ನು ಖರೀದಿಸಲಿ ಎಂದು ಕಂಪನಿಯು ವಿವಿಧ ಹಣಕಾಸಿನ ಯೋಜನೆಯನ್ನು ಬಿಡುಗಡೆಗೊಳಿಸಿದೆ.
ಮಾರುತಿ ಡಿಜೈರ್ ಕಾರು
ಮಾರುತಿ ಕಂಪನಿಯ ಡಿಜೈರ್ ಕಾರು ಅತ್ತ್ಯುತ್ತಮ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಕಾರ್ ಅನ್ನು ಖರೀದಿಸಲು 7,34,897 ರೂ. ಅನ್ನು ನೀಡಬೇಕಾಗುತ್ತದೆ. ಆದರೆ ಅನೇಕ ಆನ್ ಲೈನ್ ವೆಬ್ ಸೈಟ್ ಗಳಲ್ಲಿ ಈ ಕಾರನ್ನು ನೀವು ಅರ್ಧದಷ್ಟು ಬೆಲೆಗೆ ಖರೀದಿಸಬಹುದು.
ಹಾಗೆಯೆ EMI ನ ಮೂಲಕ ಅತಿ ಕಡಿಮೆ ಡೌನ್ ಪೇಮೆಂಟ್ ನಲ್ಲಿ ಈ ಕಾರ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು. ಈ ಮಾರುತಿ ಡಿಜೈರ್ ನಿಮಗೆ ಬರೋಬ್ಬರಿ 25 ಕಿಲೀಮೀಟರ್ ಮೈಲೇಜ್ ಅನ್ನು ನೀಡುತ್ತದೆ. ಹೆಚ್ಚು ಮೈಲೇಜ್ ನೀಡುವ ಈ ಕಾರ್ ಅನ್ನು ನೀವು ಅತಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.
ಕೇವಲ 1 ಲಕ್ಷಕ್ಕೆ ಮನೆಗೆ ತನ್ನಿ 25 Km ಮೈಲೇಜ್ ಕೊಡುವ ಮಾರುತಿ Dezire
ಮಾರುತಿ ಡಿಜೈರ್‌ನ ಮೂಲ ಮಾದರಿಯನ್ನು ಖರೀದಿಸಲು ನೀವು ಆನ್‌ಲೈನ್ ಡೌನ್ ಪೇಮೆಂಟ್ ಮತ್ತು EMI ನ ಮೂಲಕ ಕೇವಲ 1 ಲಕ್ಷದಲ್ಲಿ ಖರೀದಿಸಬಹುದು. ಬ್ಯಾಂಕ್ ನಿಮಗೆ 9.8 ಶೇ. ವಾರ್ಷಿಕ ಬಡ್ಡಿ ದರದಲ್ಲಿ 6,34,897 ರೂ. ಸಾಲವನ್ನು ನೀಡುತ್ತದೆ. ನೀವು 5 ವರ್ಷಗಳ ಅವಧಿಯ ಬ್ಯಾಂಕ್ ಸಾಲವನ್ನು ಪಡೆಯಬಹುದು. ಇನ್ನು ಮಾಸಿಕ 13,427 ರ ಮಾಸಿಕ EMI ಪಾವತಿಸುವ ಮೂಲಕ ಸಾಲದ ಮರುಪಾವತಿಯನ್ನು ಮಾಡಬಹುದಾಗಿದೆ.