Maruti EECO: ಬಾಡಿಗೆ ಬಿಸಿನೆಸ್ ಮಾಡುವವರಿಗೆ ಹೊಸ ಇಕೋ ಕಾರ್ ಲಾಂಚ್, 10 ಆಸನ ಮತ್ತು ಗರಿಷ್ಟ ಮೈಲೇಜ್.
10 ಆಸನಗಳನ್ನ ಹೊಂದಿರುವ ಮಾರುತಿ ಕಾರನ್ನ ಖರೀದಿಸಲು ಜನರು ಆಸಕ್ತಿ ತೋರುತ್ತಿದ್ದಾರೆ.
Maruti Suzuki EECO: ಸಾಮಾನ್ಯವಾಗಿ ಕಾರು ಖರೀದಿಸುವ ಆಸೆ ಎಲ್ಲರಿಗೂ ಇದ್ದೆ ಇರುತ್ತದೆ. ದೇಶಿಯ ಮಾರುಕಟ್ಟೆಯಲ್ಲಿ ಹೊಸ ಹೊಸ ಕಂಪನಿಯ ಕಾರುಗಳು ಬಿಡುಗಡೆಯಾಗುತ್ತಿದೆ. ಕಡಿಮೆ ಬೆಲೆಯಿಂದ ಹಿಡಿದು ದುಬಾರಿ ಬೆಲೆಯವರೆಗೆ ಕಾರುಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿವೆ.
ಮಾರುತಿ ಸುಜುಕಿ (Maruti Suzuki) ಇದೀಗ ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಹೊಸ ಹೊಸ ಕಾರ್ ಗಳನ್ನೂ ಬಿಡುಗಡೆ ಮಾಡುತ್ತಿವೆ. ಈಗಾಗಲೇ ಮಾರುತಿ ತನ್ನ ಹೊಸ ಹೊಸ ಮಾದರಿಯ ಕಾರ್ ಅನ್ನು ಬಿಡುಗಡೆ ಮಾಡುವ ಮೂಲಕ ವಿವಿಧ ಕಂಪನಿಗಳಿಗೆ ಪೈಪೋಟಿ ನೀಡುತ್ತಿದೆ.
ಇದೀಗ ಭಾರತೀಯ ಆಟೋ ವಲಯದಲ್ಲಿ ಸಂಚಲನ ಮೂಡಿಸಲು ಹೊಸ ಮಾದರಿಯ ಕಾರ್ ಬಿಡುಗಡೆಗೆ ಮಾರುತಿ ಸುಜುಕಿ ಸಿದ್ಧತೆ ನಡೆಸುತ್ತಿದೆ. ಈ ಬಾರಿ ಮಾರುತಿ ಸುಜುಕಿ ತನ್ನ ಹೊಸ ರೂಪಾಂತರವನ್ನು ಬಿಡುಗಡೆ ಮಾಡಲು ಯೋಜನೆ ನಡೆಸಿದೆ.
ಮಾರುತಿ ಸುಜುಕಿ EECCO (Maruti Suzuki EECO)
ದೇಶದ ಪ್ರತಿಷ್ಠಿತ ವಾಹನ ತಯಾರಕ ಕಂಪನಿಯಾಗಿರುವ ಮಾರುತಿ ಇದೀಗ ಹೊಸ ರೂಪಾಂತರದ ಮಾರುತಿ ಸುಜುಕಿ EECCO ಕಾರ್ ಅನ್ನು ಬಿಡುಗಡೆ ಮಾಡಲಿದೆ. ಈ ಕಾರ್ ಒಳ ಮತ್ತು ಹೊರ ವಿನ್ಯಾಸದಲ್ಲಿ ವಿಶೇಷ ಫೀಚರ್ ಅನ್ನು ಅಳವಡಿಸಲಾಗಿದೆ. ಈ ಕಾರ್ ನಲ್ಲಿ 1.2 ಲೀಟರ್ ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಗರಿಷ್ಟ 80.76 PS ಪವರ್ ಸಾಮರ್ಥ್ಯವನ್ನು ಹೊಂದಿದ್ದು, 104.4 Nm ಗರಿಷ್ಟ ಟರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಮಾರುತಿ ಸುಜುಕಿ EECCO ಎಂಜಿನ್ ಸಾಮರ್ಥ್ಯ
ಇನ್ನು ಈ ಕಾರ್ ನಲ್ಲಿ ಸಿಎನ್ ಜಿ ಆಯ್ಕೆಯನ್ನು ಕೂಡ ನೀಡಲಾಗಿದೆ. ಇನ್ನು 71.65 PS ಪವರ್ ಮತ್ತು 95 Nm ಟರ್ಕ್ ಅನ್ನು ಉತ್ಪಾದಿಸುವ ಸಿಎನ್ ಜಿ ಎಂಜಿನ್ ಸಾಮರ್ಥ್ಯವನ್ನು ಹೊಂದಿದೆ. ಈ ಕಾರ್ ಪ್ರತಿ ಲೀಟರ್ ಗೆ 20.20 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು ಸಿಎನ್ ಜಿ ಆಯ್ಕೆಯಲ್ಲಿ ಪ್ರತಿ ಕೆಜಿಗೆ 27.05 ಕಿಲೋಮೀಟರ್ ಮೈಲೇಜ್ ಅನ್ನು ಪಡೆಯಬಹುದಾಗಿದೆ.
ಮಾರುತಿ ಸುಜುಕಿ EECCO ಕಾರ್ ನ ಬೆಲೆ
ಮಾರುತಿ ಸುಜುಕಿ EECCO ಕಾರ್ ನ ಬೆಲೆ 15.10 ಲಕ್ಷಕ್ಕೆ ಕಂಪನಿಯು ನಿಗದಿಪಡಿಸಿದೆ. ಇನ್ನು ಡಿಜಿಟಲ್ ಉಪಕರಣ, ಡಿಜಿಟಲ್ ಕ್ಲಸ್ಟರ್, ಡ್ಯುಯಲ್ ಏರ್‌ಬ್ಯಾಗ್‌ಗಳು, ಡಿಜಿಟಲ್ ಸ್ಪೀಡ್ ಮೀಟರ್, ಸ್ವಯಂಚಾಲಿತ ಎಸಿ, ಸ್ವಯಂಚಾಲಿತ ಹವಾಮಾನ ನಿಯಂತ್ರಣ, ಕಡಿಮೆ ಇಂಧನ ಸೂಚಕ ಮತ್ತು ಚೈಲ್ಡ್ ಲಾಕ್ ನಂತಹ ಸಾಕಷ್ಟು ಸುಧಾರಿತ ಫೀಚರ್ ಅನ್ನು ಅಳವಡಿಸಲಾಗಿದೆ.