Maruti 7 Seater MPV:ಕೇವಲ 6 ಲಕ್ಷಕ್ಕೆ ಖರೀದಿಸಿ 27km ಮೈಲೇಜ್ ನೀಡುವ MPV, ದೊಡ್ಡ ಕುಟುಂಬಕ್ಕಾಗಿ ಬೆಸ್ಟ್ ಬಜೆಟ್ ಕಾರ್

ಕೇವಲ 6 ಲಕ್ಷಕ್ಕೆ ಖರೀದಿಸಿ 27km ಮೈಲೇಜ್ ನೀಡುವ MPV

Maruti EECO 7 Seater MPV: ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ಜನಪ್ರಿಯ ಕಾರ್ ತಯಾರಕ ಕಂಪನಿಗಳು ಹೊಸ ಹೊಸ ಮಾದರಿಯ ಕಾರ್ ಗಳನು ಪರಿಚಯಿಸುತ್ತಿವೆ. ಇನ್ನು ಮಾರುಕಟ್ಟೆಯಲ್ಲಿ MARUTI ಕಂಪನಿಯು ಕಡಿಮೆ ಬಜೆಟ್ ನಿಂದ ಹಿಡಿದು ದುಬಾರಿ ಬಜೆಟ್ ನ ಸಾಕಷ್ಟು ಕಾರ್ ಗಳನ್ನೂ ಪರಿಚಯಿಸಿದೆ.

ಇದೀಗ ಕಂಪನಿಯು ಕುಟುಂಬದ ಪ್ರಯಾಣಕ್ಕಾಗಿ ಟಾಪ್ ವೇರಿಯೆಂಟ್ ಮಾದರಿಯನ್ನು ಪರಿಚಯಿಸಿದೆ. ಮಾರುಕಟ್ಟೆಯಲ್ಲಿ ಹೆಚ್ಚು ಆಸನಗಳಿರುವ MPV ಗಳಿಗೆ ಬಾರಿ ಬೇಡಿಕೆ ಇರುತ್ತದೆ. ಸದ್ಯ ದೊಡ್ಡ ಕುಟುಂಬದವರಿಗಾಗಿ Maruti ಕಂಪನಿ ಇದೀಗ ತನ್ನ 7 ಸೀಟರ್ MPV ಯನ್ನು ಗ್ರಾಹಕರ ಬಜೆಟ್ ಬೆಲೆಯಲ್ಲಿ ಬಿಡುಗಡೆ ಮಾಡಲಿದೆ. ಈ 7 ಸೀಟರ್ ಕಾರ್ ನ ಬಗ್ಗೆ ನಾವೀಗ ಮಾಹಿತಿ ತಿಳಿಯೋಣ.

Maruti EECO 7 Seater MPV
Image Credit: Original Source

ದೊಡ್ಡ ಕುಟುಂಬಕ್ಕಾಗಿ ಬೆಸ್ಟ್ ಬಜೆಟ್ ಕಾರ್ ಲಾಂಚ್
ದೇಶದ ಪ್ರತಿಷ್ಠಿತ ವಾಹನ ತಯಾರಕ ಕಂಪನಿಯಾಗಿರುವ Maruti ಇದೀಗ ಹೊಸ ರೂಪಾಂತರದ ಮಾರುತಿ ಸುಜುಕಿ EECCO ಕಾರ್ ಅನ್ನು ಬಿಡುಗಡೆ ಮಾಡಲಿದೆ. ಈ ಕಾರ್ ಒಳ ಮತ್ತು ಹೊರ ವಿನ್ಯಾಸದಲ್ಲಿ ವಿಶೇಷ ಫೀಚರ್ ಅನ್ನು ಅಳವಡಿಸಲಾಗಿದೆ. ಈ ಕಾರ್ ನಲ್ಲಿ 1.2 ಲೀಟರ್ ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಗರಿಷ್ಟ 80.76 PS ಪವರ್ ಸಾಮರ್ಥ್ಯವನ್ನು ಹೊಂದಿದ್ದು, 104.4 Nm ಗರಿಷ್ಟ Tark ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಇನ್ನು ಈ ಕಾರ್ ನಲ್ಲಿ ಸಿಎನ್ ಜಿ ಆಯ್ಕೆಯನ್ನು ಕೂಡ ನೀಡಲಾಗಿದೆ. ಇನ್ನು 71.65 PS ಪವರ್ ಮತ್ತು 95 Nm ಟರ್ಕ್ ಅನ್ನು ಉತ್ಪಾದಿಸುವ ಸಿಎನ್ ಜಿ ಎಂಜಿನ್ ಸಾಮರ್ಥ್ಯವನ್ನು ಹೊಂದಿದೆ. ಈ ಕಾರ್ ಪ್ರತಿ ಲೀಟರ್ ಗೆ 27 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು ಸಿಎನ್ ಜಿ ಆಯ್ಕೆಯಲ್ಲಿ ಪ್ರತಿ ಕೆಜಿಗೆ 32 ಕಿಲೋಮೀಟರ್ ಮೈಲೇಜ್ ಅನ್ನು ಪಡೆಯಬಹುದಾಗಿದೆ.

Maruti Suzuki EECO Price In India
Image Credit: Cardekho

ಕೇವಲ 6 ಲಕ್ಷಕ್ಕೆ ಖರೀದಿಸಿ 27km ಮೈಲೇಜ್ ನೀಡುವ MPV
Maruti Suzuki EECO ಮಾರುಕಟ್ಟೆಯಲ್ಲಿ 5 ಬಣ್ಣಗಳಲ್ಲಿ ಲಭ್ಯವಾಗಲಿದೆ. ಇನ್ನು Music system, child lock, speed-sensing locks and steering wheel, parking sensors, digital instrument cluster, battery saver function, ABS, EBD, engine immobilizer, illuminated hazard switch and dual airbags ವೈಶಿಷ್ಟ್ಯಗಳನ್ನು ಹೊಂದಿರುವ EECOO ಬೆಲೆ ಮಾರುಕಟ್ಟೆಯಲ್ಲಿ 5 .72 ಲಕ್ಷ ರೂ. ನಿಂದ 6 .52 ಆಗಿದೆ. ಇನ್ನು 5 ರಿಂದ 6 ಆಸನಗಳಿಗುವ CNG ಆಯ್ಕೆಯ EECO ಮಾದರಿಯನ್ನು 4 ಭಿನ್ನ ರೂಪಾಂತರದಲ್ಲಿ ಖರೀದಿಸಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group