Maruti: 8 ಲಕ್ಷಕ್ಕೆ ಮನೆಗೆ ತನ್ನಿ 7 ಆಸನಗಳ ಈ ಕಾರ್, 26 ಕಿಲೋ ಮೀಟರ್ ಮೈಲೇಜ್ ಕೊಡುತ್ತದೆ ಈ ಕಾರ್.

ದೇಶದ ಮಾರುಕಟ್ಟೆಯಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆಯಿದೆ. ಕಂಪನಿಯು ಸಿ ಏನ್ ಜಿ ರೂಪಾಂತರವನ್ನು ಸಹ ಮಾರುಕಟ್ಟೆಯಲ್ಲಿ ಪರಿಚಯಿಸಿದೆ.

Maruti Ertiga Car Price: ಭಾರತೀಯ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಮಾದರಿಯ ಕಾರುಗಳು ಬಿಡುಗಡೆಯಾಗಿ ಸದ್ದು ಮಾಡುತ್ತಿವೆ. ಅದರಲ್ಲೂ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕಾರು ತಯಾರಕ ಕಂಪನಿಗಳು ತನ್ನ ಮಾದರಿಯ ಕಾರುಗಳನ್ನು ಬಿಡುಗಡೆ ಮಾಡುತ್ತಿವೆ.

ನಾಲ್ಕು ರೂಪಾಂತರಗಳಲ್ಲಿ ಮಾರುತಿ ಎರ್ಟಿಗಾ ಕಾರು
ಭಾರತೀಯ ಮಾರುಕಟ್ಟೆಯಲ್ಲಿ 7 ಆಸನಗಳ ಕಾರುಗಳಿಗೆ ಬೇಡಿಕೆ ವೇಗವಾಗಿ ಹೆಚ್ಚಿದೆ. ಮಾರುತಿ ಎರ್ಟಿಗಾ(Maruti Ertiga) ಈ ವಿಭಾಗದಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ದೇಶದ ಮಾರುಕಟ್ಟೆಯಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆಯಿದೆ. ಕಂಪನಿಯು ಸಿ ಏನ್ ಜಿ ರೂಪಾಂತರವನ್ನು ಸಹ ಮಾರುಕಟ್ಟೆಯಲ್ಲಿ ಪರಿಚಯಿಸಿದೆ.

Maruti Ertiga car speciality
Image Credit: Team-bhp

ಕಂಪನಿಯು ಮಾರುತಿ ಎರ್ಟಿಗಾವನ್ನು ಕ್ರಮವಾಗಿ LXi , VXi ,ZXi ಮತ್ತು ZXi + ಎಂಬ ನಾಲ್ಕು ರೂಪಾಂತರಗಳಲ್ಲಿ ಪರಿಚಯಿಸಿದೆ. ಅದರಲ್ಲಿ 7 ಬಣ್ಣದ ಆಯ್ಕೆಗಳನ್ನು ಸಹ ನೀಡಲಾಗಿದೆ. ಮಾರುತಿ ಸುಜುಕಿ ಎರ್ಟಿಗಾ ಬೆಲೆಗಳು LXi (೦) MT ವೆರಿಯಂಟ್ ಗೆ 8,64,000 ರೂಪಾಯಿಗಳಿಂದ ಪ್ರಾರಂಭವಾಗುತ್ತವೆ ಮತ್ತು ಟಾಪ್ ಟ್ರಿಮ್ ZXi ಪ್ಲಸ್ AT ಗೆ 1,30,8000 ರೂಪಾಯಿ. ಮಾರುಕಟ್ಟೆಯಲ್ಲಿ ಈ ಕಾರು ರೆನಾಲ್ಟ್ ಟ್ರೈಬರ್ ಮತ್ತು ಹುಂಡೈ ಆಲ್ಕಜಾರ್ ನಂತಹ ಕಾರುಗಳೊಂದಿಗೆ ಸ್ಪರ್ಧಿಸುತ್ತದೆ.

ಮಾರುತಿ ಎರ್ಟಿಗಾ ಕಾರಿನ ವಿಶೇಷತೆ
ಮಾರುತಿ ಎರ್ಟಿಗಾ ಕಾರಿನಲ್ಲಿ 1 .5 ಲೀಟರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ಗರಿಷ್ಠ 102 bhp ಪವರ್ ಜೊತೆಗೆ 137 nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ಕಂಪನಿಯು 5- ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 6 -ಸ್ಪೀಡ್ ಟಾರ್ಕ್ ಪರಿವರ್ತಕ ಘಟಕವನ್ನು ನೀಡುತ್ತದೆ. ಈ ಎಂಜಿನ್ 5- ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಬರುತ್ತದೆ ಮತ್ತು 87 ಬಿ ಹೆಚ್ ಪಿ ಪವರ್ ಮತ್ತು 121 .5 ಏನ್ ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

7 seater maruti ertiga car
Image Credit: Navbharattimes

ಈ ಕಾರಿನಲ್ಲಿ ಕಂಪನಿಯು ವಿಭಿನ್ನ ಮೈಲೇಜ್ ಅನ್ನು ಒದಗಿಸುತ್ತದೆ. 1.5 ಲೀಟರ್ ಪೆಟ್ರೋಲ್ ರೂಪಾಂತರದಲ್ಲಿ ನೀವು 20.51 kmpl 1.5 ಲೀಟರ್ ಪೆಟ್ರೋಲ್ ರೂಪಾಂತರದಲ್ಲಿ 20.3 kmpl ಮತ್ತು cng mt ರೂಪಾಂತರದಲ್ಲಿ 26.11 kmpl ಅನ್ನು ಪಡೆಯಬಹುದು.

Join Nadunudi News WhatsApp Group

Join Nadunudi News WhatsApp Group