Mileage Car: 27 Km ಮೈಲೇಜ್ ಕೊಡುವ ಈ ಮಾರುತಿ ಕಾರಿಗೆ ಸಕತ್ ಡಿಮ್ಯಾಂಡ್, ಕೆಲವೇ ದಿನದಲ್ಲಿ 50 ಸಾವಿರ ಬುಕಿಂಗ್.
ಬರೋಬ್ಬರಿ 27 Km ಮೈಲೇಜ್ ಕೊಡುವ ಈ 7 ಸೀಟರ್ ಕಾರ್ ಗೆ ಬೇಡಿಕೆ ಹೆಚ್ಚಿದೆ.
Maruti Ertiga Latest: ಪ್ರಸ್ತುತ ಮಾರುತಿ ಕಂಪನಿಯ ಕಾರ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿರುವ ಇನ್ನಿತರ ಕಂಪನಿಯ ಕಾರ್ ಗಳಿಗೆ ಪೈಪೋಟಿ ನೀಡುತ್ತಿದೆ. ಮಾರುಕಟ್ಟೆಯಲ್ಲಿ ಮಾರುತಿ ಕಂಪನಿಯು ಹೊಸ ಹೊಸ ಕಾರ್ ಬಿಡುಗಡೆ ಮಾಡುವ ಮೂಲಕ ಸಂಚಲ ಮೂಡಿಸುತ್ತಿದೆ.
ಈಗಾಗಲೇ ಮಾರುತಿ ತನ್ನ ಪೆಟ್ರೋಲ್(Petrol) ಹಾಗು ಸಿಎನ್ ಜಿ(CNG) ಮಾದರಿಯಲ್ಲಿ ವಿವಿಧ ಮಾದರಿಯ ಕಾರ್ ಅನ್ನು ಬಿಡುಗಡೆ ಮಾಡಿದೆ.ದೊಡ್ಡ ಕುಟುಂಬಗಕ್ಕೆ ಸರಿಹೊಂದುವ ರೀತಿಯ ಮಾರುಕಟ್ಟಿ ತನ್ನ ಕಾರ್ ವಿನ್ಯಾಸವನ್ನು ಮಾಡುತ್ತಿದೆ. ಇದೀಗ ಮಾರುತಿ ತನ್ನ ಹೊಚ್ಚ ಹೊಸ ಮಾದರಿಯ ಕಾರ್ ಅನ್ನು ಬಿಡುಗಡೆ ಮಾಡಿದೆ. ಈ ನೂತನ ಕಾರ್ ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ಹೆಚ್ಚಿನ ಬುಕಿಂಗ್ ಪಡೆದುಕೊಂಡಿದೆ.
ಮಾರುತಿ ಎರ್ಟಿಗಾ ಕಾರ್
ಮಾರುತಿ ಎರ್ಟಿಗಾ (Maruti Ertiga) ಕಾರಿನಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ಗರಿಷ್ಠ 102 bhp ಪವರ್ ಜೊತೆಗೆ 137 nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ಕಂಪನಿಯು 5- ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 6 -ಸ್ಪೀಡ್ ಟಾರ್ಕ್ ಪರಿವರ್ತಕ ಘಟಕವನ್ನು ನೀಡುತ್ತದೆ. ಈ ಎಂಜಿನ್ 5- ಸ್ಪೀಡ್ ಗೇರ್ ಬಾಕ್ಸ್ ಅನ್ನು ಹೊಂದಿದೆ.
ಇನ್ನು 87 ಬಿ ಹೆಚ್ ಪಿ ಪವರ್ ಮತ್ತು 121 .5 ಏನ್ ಎಂ ಟರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರಿನಲ್ಲಿ ಕಂಪನಿಯು ವಿಭಿನ್ನ ಮೈಲೇಜ್ ಅನ್ನು ಒದಗಿಸುತ್ತದೆ. 1.5 ಲೀಟರ್ ಪೆಟ್ರೋಲ್ ರೂಪಾಂತರದಲ್ಲಿ ನೀವು 20.51 kmpl 1.5 ಲೀಟರ್ ಪೆಟ್ರೋಲ್ ರೂಪಾಂತರದಲ್ಲಿ 20.3 kmpl ಮತ್ತು ಸಿಎನ್ ಜಿ ರೂಪಾಂತರದಲ್ಲಿ 26.11 kmpl ಮೈಲೇಜ್ ಅನ್ನು ಪಡೆಯಬಹುದು.
ಬರೋಬ್ಬರಿ 27 Km ಮೈಲೇಜ್ ಕೊಡುವ ಈ 7 ಸೀಟರ್ ಕಾರ್
ಭಾರತೀಯ ಮಾರುಕಟ್ಟೆಯಲ್ಲಿ 7 ಆಸನಗಳ ಕಾರುಗಳಿಗೆ ಬೇಡಿಕೆ ವೇಗವಾಗಿ ಹೆಚ್ಚಿದೆ. ಮಾರುತಿ ಎರ್ಟಿಗಾ ಈ ವಿಭಾಗದಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ದೇಶದ ಮಾರುಕಟ್ಟೆಯಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆಯಿದೆ. ಕಂಪನಿಯು ಸಿ ಏನ್ ಜಿ ರೂಪಾಂತರವನ್ನು ಸಹ ಮಾರುಕಟ್ಟೆಯಲ್ಲಿ ಪರಿಚಯಿಸಿದೆ.
ಕಂಪನಿಯು ಮಾರುತಿ ಎರ್ಟಿಗಾವನ್ನು ಕ್ರಮವಾಗಿ LXi , VXi ,ZXi ಮತ್ತು ZXi + ಎಂಬ ನಾಲ್ಕು ರೂಪಾಂತರಗಳಲ್ಲಿ ಪರಿಚಯಿಸಿದೆ. ಅದರಲ್ಲಿ 7 ಬಣ್ಣದ ಆಯ್ಕೆಗಳನ್ನು ಸಹ ನೀಡಲಾಗಿದೆ. ಮಾರುತಿ ಸುಜುಕಿ ಎರ್ಟಿಗಾ ಬೆಲೆಗಳು LXi (೦) MT ವೆರಿಯಂಟ್ ಗೆ 8,64,000 ರೂಪಾಯಿಗಳಿಂದ ಪ್ರಾರಂಭವಾಗುತ್ತವೆ ಮತ್ತು ಟಾಪ್ ಟ್ರಿಮ್ ZXi ಪ್ಲಸ್ AT ಗೆ 13,0,8000 ರೂಪಾಯಿ. ಮಾರುಕಟ್ಟೆಯಲ್ಲಿ ಈ ಕಾರು ರೆನಾಲ್ಟ್ ಟ್ರೈಬರ್ ಮತ್ತು ಹುಂಡೈ ಆಲ್ಕಜಾರ್ ನಂತಹ ಕಾರುಗಳೊಂದಿಗೆ ಸ್ಪರ್ಧಿಸುತ್ತದೆ.