Maruti EV 2023: ಈ ಮಾರುತಿ ಅಗ್ಗದ Ev ಕಾರಿನ ಮುಂದೆ ಟಾಟಾ ನಾನೋ ಕಾರಿಗೆ ಇಲ್ಲ, ಭರ್ಜರಿ 230 Km ರೇಂಜ್.

ಸಿಂಗಲ್ ಚಾರ್ಜ್ ನಲ್ಲಿ 230 ಕಿಲೋಮೀಟರ್ ಮೈಲೇಜ್ ನೀಡುವ ಕಡಿಮೆ ಬೆಲೆಯ ಮಾರುತಿ ಎಲೆಕ್ಟ್ರಿಕ್ SUV.

Maruti eWX Electric Mini Wagon: ಸದ್ಯ ಮಾರುಕಟ್ಟೆಯಲ್ಲಿ Electric ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎನ್ನಬಹುದು. ಮಾರುಕಟ್ಟೆಯಲ್ಲಿ Petrol, Diesel ಚಾಲಿತ ವಾಹನಗಳಿಗಿಂತ Electric ಮಾದರಿಗಳು ಹೆಚ್ಚಿನ ಬೇಡಿಕೆ ಪಡೆಯುತ್ತಿದೆ. ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಡೀಸೆಲ್ ದರದ ಗಣನೀಯ ಏರಿಕೆಯು ಒಂದು ವಿಧದದಲ್ಲಿ ಎಲೆಕ್ಟ್ರಿಕ್ ವಾಹನಗಳ ಮೇಲಿನ ಬೇಡಿಕೆಯನ್ನು ಹೆಚ್ಚಿಸಿವೆ ಎಂದರೆ ತಪ್ಪಾಗಲಾರದು.

ದೇಶದ ಜನಪ್ರಿಯ ಕಾರ್ ತಯಾರಕ ಕಂಪನಿಗಳು ಇತ್ತೀಚಿಗೆ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಎಲೆಕ್ಟ್ರಿಕ್ ರೂಪಾಂತರವನ್ನೇ ಪರಿಚಯಿಸುತ್ತಿವೆ. ಎಲೆಕ್ಟ್ರಿಕ್ ರೂಪಾಂತರಗಳು ಪರಿಚಯವಾದ ಕೆಲವೇ ದಿನಗಳಲ್ಲಿ ಹೆಚ್ಚಿನ ಸೇಲ್ ಕಾಣುತ್ತವೆ ಎನ್ನಬಹುದು.

ಇನ್ನು Hyundai, Tata ಸೇರಿದಂತೆ ಇನ್ನಿತರ ಕಂಪನಿಗಳು ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಮಾದರಿಯನ್ನು ಪರಿಚಯಿಸಿದೆ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲ ಮಾದರಿಗಳಿಗೆ ಟಾಂಗ್ ನೀಡಲು ಜನಪ್ರಿಯ ಕಂಪೆನಿಯಾದ Maruti ಇದೀಗ ತನ್ನ Electric ರೂಪಾಂತರವನ್ನು ಪರಿಚಯಿಸಲು ಸಂಪೂರ್ಣ ಸಿದ್ಧತೆ ನಡೆಸುತ್ತಿದೆ.

Maruti eWX Electric Mini Wagon
Image Credit: Drivespark

Maruti Suzuki ಹೊಸ Electric SUV
ಸದ್ಯ ಮಾರುತಿ ಸುಜುಕಿ ಮಾರುಕಟ್ಟೆಯಲ್ಲಿ ನ್ಯೂ ಜನರೇಷನ್ Wagon R Electric ಮತ್ತು Compact Electric SUV ಯನ್ನು ಸದ್ಯದಲ್ಲೇ ಪರಿಚಯಿಸಲಿದೆ. ಕಂಪನಿಯು 2020 ರಲ್ಲಿಯೇ ತನ್ನ ವ್ಯಾಗನ್ ಆರ್ ಎಲೆಕ್ಟ್ರಿಕ್ ಅನ್ನು ಪರಿಚಯಿಸಲು ಯೋಜನೆ ರೂಪಿಸಿತ್ತು. ಆದರೆ 2020 ರಲ್ಲಿ ಕರೋನ ಆರಂಭಗೊಂಡ ಹಿನ್ನಲೆ ಈ ಯೋಜನೆಯನ್ನು ಸ್ಥಗಿತಗೊಳಿಸಿತ್ತು. ಸದ್ಯ 2023 ರಲ್ಲಿ ಕಂಪನಿ ತನ್ನ Wagon R Electric ಅನ್ನು ಪರಿಚಯಿಸಲು ಮುಂದಾಗಿದೆ. ಈ ಬಗ್ಗೆ ಕಂಪನಿ ಅಧಿಕೃತವಾಗಿ ಘೋಷಣೆ ಹೊರಡಿಸಿದೆ.

Maruti eWX Electric Mini Wagon
ಇನ್ನು 2023 ರಲ್ಲಿ Maruti eWX Electric Mini Wagon ಮಾದರಿಯನ್ನು ಜಪಾನ್ ಮೊಬಿಲಿಟಿ ಶೋ ನಲ್ಲಿ ಪ್ರದರ್ಶಿಸಲಾಗಿದೆ. ಈ ನೂತನ eWX ಮಾತು 3395mm ಉದ್ದ, 1475 ಅಗಲ ಮತ್ತು 1620mm ಎತ್ತರವನ್ನು ಹೊಂದಿದೆ. ಈ ಮಾದರಿಯಲ್ಲಿ ಶಕ್ತಿಶಾಲಿ ಬ್ಯಾಟರಿ ಪ್ಯಾಕ್ ಅನ್ನು ನೀಡಲಾಗಿದೆ.

Join Nadunudi News WhatsApp Group

Maruti eVX Electric Mini Wagon Price
Image Credit: Cardekho

ವೇಗದ ಚಾರ್ಜಿಂಗ್ ಆಯ್ಕೆಯನ್ನು ಹೊಂದಿದ್ದು, ಒಂದೇ ಚಾರ್ಜ್ ನಲ್ಲಿ 230 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ ಎನ್ನಬಹುದು. ಇನ್ನು Maruti eWX Electric Mini Wagon ಕಾರ್ ನ ಬೆಲೆಯೂ Tata Tiago EV ಮಾದರಿಯ ಬೆಲೆಯ ನಡುವೆಯ ಇರಲಿದೆ. ಸದ್ಯ ಕಂಪನಿಯು ನೂತನ ಎಲೆಕ್ಟ್ರಿಕ್ ಮಾದರಿಯ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ. ಕಂಪನಿಯು ಕಾರ್ ನ ಬಗ್ಗೆ ಅಧಿಕೃತ ಮಾಹಿತಿ ನೀಡುವವವರೆಗೂ ಕಾದು ನೋಡಬೇಕಿದೆ.

Join Nadunudi News WhatsApp Group