Maruti Jimny: ಮಾರುತಿ ಸುಜುಕಿ Jimny ಕಾರ್ ಖರೀದಿಗೆ ಬಂಪರ್ ಆಫರ್, ಥಾರ್ ಕಾರಿಗಿಂತ ಹೆಚ್ಚು ಬುಕಿಂಗ್.
ಮಾರುತಿ ಸುಜುಕಿ ಜಿಮ್ನಿ ಕಾರಿಗೆ ಮೇಲೆ ಭರ್ಜರಿ ಆಫರ್ ಘೋಷಣೆ ಆಗಿದ್ದು ದೇಶದಕ್ಕಿ ಸಾಕಷ್ಟು ಬುಕಿಂಗ್ ಆಗಿದೆ.
Maruti Suzuki Jimny Car Offer: ದೇಶದ ಪ್ರತಿಷ್ಠಿತ ಕಾರು ತಯಾರಕ ಕಂಪನಿಯಾದ Maruti ತನ್ನ ಕಂಪನಿಯ ಹೊಸ ಮಾದರಿಯ ಕಾರ್ ಗಳನ್ನೂ ಬಿಡುಗಡೆ ಮಾಡುತ್ತಿದೆ. ಇದೀಗ ಮಾರುತಿ ಸುಜುಕಿ (Maruti Suzuki) ಮಾರುತಿ ಜಿಮ್ನಿ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದೆ.
ಮಾರುತಿ ಕಂಪನಿಯು ಈ ಕಾರ್ ಖರೀದಿಗೆ ಮಾರುಕಟ್ಟೆಯಲ್ಲಿ ವಿಶೇಷ ರಿಯಾಯಿತಿ ನೀಡುತ್ತಿದೆ. ಕಂಪನಿಯ ವಿಶೇಷ ಕೊಡುಗೆಯ ಮೂಲಕ ನೀವು ಅತಿ ಅಗ್ಗದ ಬೆಲೆಯಲ್ಲಿ ಜಿಮ್ನಿ ಕಾರ್ ಅನ್ನು ಖರೀದಿಸಬಹುದಾಗಿದೆ.
Maruti Jimny car
Maruti Jimny car ಆಫ್ ರೋಡ್ ಕಾರ್ ಆಗಿದ್ದು, ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ ಎನ್ನಬಹುದು. ಮಾರುತಿ ಜಿಮ್ನಿ ಕಾರ್ 5 ಬಾಗಿಲುಗಳನ್ನು ಹೊಂದಿದ್ದು, 4 x4 ಪ್ರಮಾಣಿತ ವೈಶಿಷ್ಟ್ಯದಲ್ಲಿ ಬರಲಿದೆ. ಇನ್ನು 4×2 ರೂಪಾಂತರಕ್ಕೆ ಸಾಕಷ್ಟು ಬೇಡಿಕೆ ಇದೆ. ಇನ್ನು ಇತ್ತೀಚೆಗಷ್ಟೇ ಮಾರುತಿ ಜಿಮ್ನಿ ಕಾರ್ ನ ಬೆಲೆ ಬಹಿರಂಗಪಡಿಸಲಾಗಿದೆ. ಬೆಲೆ ಬಹಿರಂಗವಾಗುತ್ತಿದ್ದಂತೆ ಕಾರ್ ಬುಕ್ಕಿಂಗ್ ದಿನಕ್ಕೆ 90 ರಿಂದ 150 ಕ್ಕೆ ಏರಿಕೆಯಾಗಿದೆ.
Maruti Jimny ಕಾರ್ ನ ಬೆಲೆ
ಮಾರುತಿ ಸುಜುಕಿ ಜಿಮ್ನಿಯ ಆರಂಭಿಕ ಬೆಲೆ 12 .74 ರಿಂದ 15 .05 ಲಕ್ಷ ರೂ. ಗಳಲ್ಲಿ ಕಂಪನಿ ಪರಿಚಯಿಸಿದೆ. ಕಾರನ್ನು ಸ್ಟ್ಯಾಂಡರ್ಡ್ 4×4 ಮತ್ತು 6 ಏರ್ ಬ್ಯಾಗ್ ಗಳೊಂದಿಗೆ ಸಿದ್ಧಪಡಿಸಲಾಗಿದೆ. ಆಫ್ ರೋಡರ್ ಚಿಪ್ಸಿಯಂತೆ ಜಿಮ್ನಿಯನ್ನು ಸಹ ವಿನ್ಯಾಸಗೊಳಿಸಲಾಗಿದೆ. ಈ ಕಾರ್ ನಲ್ಲಿ 5 ಬಾಗಿಲುಗಳಿರುವುದು ವಿಶೇಷವಾಗಿದೆ. ಜಿಮ್ನಿ 5-ಸ್ಪೀಡ್ ಸ್ಟ್ಯಾಂಡರ್ಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 4-ಸ್ಪೀಡ್ ಸ್ವಯಂಚಾಲಿತ ಟಾರ್ಕ್ ಪರಿವರ್ತಕ 1.5 ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ.
ಇನ್ನು ಈ ಜಿಮ್ನಿ ಪ್ರತಿ ಲೀಟರ್ ಗೆ 16 ರಿಂದ 20 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. 6 Airbags, ABS (Antilock Braking System), EBD (Electronic Brakeforce Distribution), Hill Hold Control, Hill Descent Control, Side Impact Door Beams ವೈಶಿಷ್ಟ್ಯವನ್ನು ಅಳವಡಿಸಲಾಗಿದೆ.
Maruti Suzuki Zeta Car Offer
ದೇಶದಲ್ಲಿ ಮಾರುತಿ ಸುಜುಕಿ Nexa Dealers ಜಿಮ್ನಿಯ ಎಂಟ್ರಿ ಲೆವೆಟ್ Zeta ರೂಪಾಂತರದ ಮೇಲೆ ರೂ. 1 ಲಕ್ಷದವರೆಗೆ ರಿಯಾಯಿತಿ ಪ್ರಯೋಜನವನ್ನು ನೀಡುತ್ತಿದೆ. ಸದ್ಯ Zeta ಮಾದರಿಗೆ ರೂ. 50,000 ಪ್ಲಾಟ್ ರಿಯಾಯಿತಿ, ಇದರ ಜೊತೆಗೆ 50.000 Exchange Offer ಅಥವಾ ಲಾಯಲ್ಟಿ ಬೋನಸ್ ಅನ್ನು ಹೊಂದಿದೆ. ಈ ತಿಂಗಳ ಅಂತ್ಯದೊಳಗೆ ನೀವು Maruti Zeta ಕಾರ್ ಅನ್ನು ಈ ಎಲ್ಲಾ ವಿಶೇಷ ಆಫರ್ ನ ಮೂಲಕ ಖರೀದಿಸಬಹುದು.